27 C
Hubli
ಮೇ 25, 2024
eNews Land
ರಾಜ್ಯ ಸುದ್ದಿ

ಇಂದಿನಿಂದ ಉಚಿತ ವಿದ್ಯುತ್‌ಗೆ ಅರ್ಜಿ ‘ಗೃಹಜ್ಯೋತಿ’ ಯೋಜನೆ ಅರ್ಜಿ ಸ್ವೀಕಾರ ಆರಂಭ… ಅರ್ಜಿ ಹಾಕುವುದು ಹೇಗೆ ನೋಡಿ

ಇಎನ್ಎಲ್ ಬೆಂಗಳೂರು: ಮಾಸಿಕ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಮಹತ್ವಾ ಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯ ಸೌಲಭ್ಯ ಪಡೆಯಲು ಜೂ.18ರಿಂದ (ಭಾನುವಾರದಿಂದ) ನೋಂದಣಿಗೆ ಅವಕಾಶ ನೀಡಲಾಗಿದೆ. sevasindhugs.karnataka.gov.in ಗ್ರಾಮ ಒನ್, ವಿದ್ಯುತ್ ಕಚೇರಿಗಳಲ್ಲಿ ಲಭ್ಯ

ಒಂದು ಹಂತದಲ್ಲಿ ನೋಂದಣಿ ಪೂರ್ಣ ಗೊಂಡ ಬಳಿಕ ಇಂಧನ ಇಲಾಖೆಯಿಂದ ಅಧಿಕೃತವಾಗಿ ಪ್ರತ್ಯೇಕ ಕಾರ್ಯಕ್ರಮ ನಡೆಸಿ ಯೋಜನೆ ಲೋಕಾರ್ಪಣೆ ಮಾಡಲು ತೀರ್ಮಾನಿಸಲಾಗಿದೆ.

ನೋಂದಣಿ ಹೇಗೆ?
ರಾಜ್ಯ ಸರ್ಕಾರದ ಸೇವಾಸಿಂಧು ವೆಬ್‌ ಸೈಟ್, ಆಪ್‌ನಲ್ಲಿ ಅರ್ಜಿ ಸಲ್ಲಿಸಬಹುದು

• ಸರ್ಕಾರ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸುಲಭ ನೋಂದಣಿ

• ಕರ್ನಾಟಕ ಒನ್, ಗ್ರಾಮ ಒನ್‌, ಬೆಂಗಳೂರು ಒನ್‌ನಲ್ಲೂ ಅರ್ಜಿ ಸಲ್ಲಿಸಬಹುದು

ನಾಡಕಚೇರಿ, ಇಂಧನ ಇಲಾಖೆ ಕಚೇರಿಗಳಲ್ಲೂ ಕೂಡ ನೋಂದಣಿಗೆ ಅವಕಾಶ

ಜನರು ಆಧಾರ್ ಸಂಖ್ಯೆ, ವಿದ್ಯುತ್‌ ಖಾತೆ ಸಂಖ್ಯೆ, ಮೊಬೈಲ್‌ ಸಂಖ್ಯೆ ನೀಡಬೇಕು

• ಬಾಡಿಗೆದಾರರಾಗಿದ್ದರೆ ಮನೆ ವಾಸ ದೃಢೀಕರಣದ ಆಧಾರ್ / ವೋಟರ್ ಐಡಿ ನೀಡಿ

• ಅರ್ಜಿ ಸಲ್ಲಿಕೆ ಬಗ್ಗೆ ಗೊಂದಲವಿದ್ದರೆ 1912 ಸಹಾಯವಾಣಿಗೆ ಕರೆ ಮಾಡಬಹುದು, ಆದರೆ ನೋಂದಣಿಗೆ ಯಾವುದೇ ಕೊನೆಯ ದಿನಾಂಕ ಇಲ್ಲ.

ಮಾಸಿಕ 200 ಯುನಿಟ್‌ ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಅರ್ಹ ಗೃಹಬಳಕೆ ವಿದ್ಯುತ್ ಗ್ರಾಹಕರು https://seva sindhugs.karnataka.gov.in ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ಜತೆಗೆ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರ, ನಾಡಕಚೇರಿ, ಎಲ್ಲ ವಿದ್ಯುತ್ ಕಚೇರಿಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಹಿಂದಿನ ವರ್ಷದ ಸರಾಸರಿ ಬಳಕೆಯ ಶೇ.10 ರಷ್ಟು ಹೆಚ್ಚುವರಿ ವಿದ್ಯುತ್ ಉಚಿತವಾಗಿ ಬಳಸಬಹುದು. ಗರಿಷ್ಠ ವಿದ್ಯುತ್‌ ಬಳಕೆ ಮಿತಿ 200 ಯುನಿಟ್‌ ದಾಟಿದರೆ ಪೂರ್ಣ ಶುಲ್ಕ ಪಾವತಿಸಬೇಕು ಎಂದು ಇಂಧನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೋಂದಣಿಹೇಗೆ?:
ನೋಂದಣಿ ಮಾಡುವಾಗ ಆಧಾರ್ ಸಂಖ್ಯೆ, ವಿದ್ಯುತ್ ಬಿಲ್‌ನಲ್ಲಿ ನೀಡಲಾದ ವಿದ್ಯುತ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಬೇಕು. ಆಯ್ಕೆಗಳ ವೇಳೆ ಸ್ವಂತ ಮನೆ ಅಥವಾ ಬಾಡಿಗೆದಾರ ಎಂಬ ಆಯ್ಕೆ ಬರುತ್ತದೆ. ಬಾಡಿಗೆದಾರರಾಗಿದ್ದಲ್ಲಿ ಬಾಡಿಗೆ ಮನೆ ವಾಸ ದೃಢೀಕರಿಸುವ ಆಧಾ‌ರ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ವಿವರಗಳನ್ನು ನೀಡಬೇಕು.

ಸಹಾಯವಾಣಿ
ಯೋಜನೆ ಹಾಗೂ ಅರ್ಜಿ ಸಲ್ಲಿಕೆ ಸಂಬಂಧ ಯಾವುದೇ ಗೊಂದಲಗಳಿದ್ದರೂ ಹೆಚ್ಚಿನ ಮಾಹಿತಿಗೆ 24/7 ಸೇವೆಯ 1912 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ https://energy.karnataka.gov.in ಭೇಟಿ ನೀಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.

Related posts

ಗೋವಾದಲ್ಲಿ ದೇಶದ ಯಾವುದೇ ರಾಜಕೀಯ ಪಕ್ಷವು ಚುನಾವಣೆಯಲ್ಲಿ ಸ್ಫರ್ಧಿಸಬಹುದು

eNEWS LAND Team

ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ: ಶಾಸಕ ಪ್ರಸಾದ ಅಬ್ಬಯ್ಯ “ಸನ್ಮಾನದ ಹಾರ ತುರಾಯಿಗಳ ಬದಲು, ಶೈಕ್ಷಣಿಕ ಸಾಮಗ್ರಿಗಳ ದೇಣಿಗೆ ನೀಡಿ”

eNEWS LAND Team

ಕೆಸಿಡಿ ಆವರಣದಲ್ಲಿ ಕಣವಿ ಸಾರ್ವಜನಿಕ ದರ್ಶನಕ್ಕೆ ಜಿಲ್ಲಾಡಳಿತ ಸಿದ್ಧತೆ

eNewsLand Team