29 C
Hubli
ಸೆಪ್ಟೆಂಬರ್ 26, 2023
eNews Land
ರಾಜ್ಯ

ವಿಪ ಚುನಾವಣೆ, ಕೊರೋನಾ ಬಗ್ಗೆ ಹುಬ್ಬಳ್ಳಿಲಿ ಸಿಎಂ ಹೇಳಿದ್ದೇನು? ಅದಕ್ಕೂ ಹೆಚ್ಚಾಗಿ ಮಾತಾಡಿದ್ದಾರೆ? ಇಲ್ನೋಡಿ

ಇಎನ್ಎಲ್ ಧಾರವಾಡ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸಭೆ ಕರೆಯಲಾಗಿದ್ದು,ನಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ಏನೆಲ್ಲಾ ಸೂಚನೆ ನೀಡಬೇಕು ಅದನ್ನು ನೀಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ತಮ್ಮ ಮನೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವು ನಿಶ್ಚತ. ಲಖನ್ ಜಾರಕಿಹೊಳಿ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ. ನಮಗೇನು ಸಂಬಂಧವಿಲ್ಲ ಎಂದರು.
ಎಲ್ಲ ಕೊರೋನಾ ಕೇಸ್ ಗಳ ಜಿನೋಮ್ ಸ್ವಿಕ್ವೇನ್ಸ್ ಟೆಸ್ಟ್ ಮಾಡುತ್ತಿದ್ದೇವೆ. ಆ ಲ್ಯಾಬ್ ಗಳನ್ನು ಹೆಚ್ಚಿಗೆ ಮಾಡುವ ಚಿಂತನೆ ಮಾಡಿದ್ದೇವೆ.
ಪರಿಣಿತರ ಜೊತೆ ಚರ್ಚಿಸಿ ಈಗಾಗಲೇ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇವೆ.
ಏನೆಲ್ಲ ಅದಕ್ಕೆ ತಯಾರಿಬೇಕು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ವರದಿ ಬರುವಂತೆ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.

 

ಸಿಎಂ ಬೊಮ್ಮಾಯಿ ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿ,
ಸಿದ್ದರಾಮಯ್ಯ ಬಹಳ ಗೌರವವಿತ್ತು. ಆದರೆ ಇತ್ತೀಚಿನ ಅವರ ಹೇಳಿಕೆಗಳು ನಿರಾಸೆ ತಂದಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿ ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದು ಫುಲ್ ಸ್ಟಾಪ್ ನೀಡಿದರು.

Related posts

ಬೆಂಗಳೂರು ಮಿಷನ್ 2022 ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ

eNEWS LAND Team

ಹರ್ಷ ಕೊಲೆ ಪ್ರಕರಣ ತನಿಖೆ ಆಧಾರದ ಮೇಲೆ ಮುಂದಿನ ಕ್ರಮ : ಮುಖ್ಯಮಂತ್ರಿ  ಬೊಮ್ಮಾಯಿ

eNewsLand Team

ಹುಬ್ಬಳ್ಳಿಯಲ್ಲಿ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಹೇಳಿಕೆ ಏನು?

eNEWS LAND Team