23.9 C
Hubli
ಏಪ್ರಿಲ್ 1, 2023
eNews Land
ರಾಜ್ಯ

ಕೋವಿಡ್ ಸಂಕಷ್ಟದ ನಂತರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ : ಸಿಎಂ

Listen to this article

ಇಎನ್ಎಲ್ ಕೋಲಾರ

ಕೋವಿಡ್ ಸಂಕಷ್ಟದ ನಂತರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಕೋಲಾರ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕೋವಿಡ್ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಕೋವಿಡ್ 2 ವರ್ಷದಲ್ಲಿ ದೇಶ ರಾಜ್ಯದಲ್ಲಿ ಆರ್ಥಿಕ ಹಿಂಜರಿತವಾಗಿತ್ತು. ಈಗ ಕೋವಿಡ್ 2 ನೇ ಅಲೆಯನ್ನು ವ್ಯಾಪಕವಾಗಿ ಲಸಿಕೆ ನೀಡುವ ಮುಖಾಂತರ ಯಶಸ್ವಿಯಾಗಿ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ರಂಗಗಳಲ್ಲೂ ಆರ್ಥಿಕ ಚಟುವಟಿಕೆ ಪ್ರಾರಂಭವಾಗಿ ಉತ್ತಮಗೊಂಡಿದೆ ಎಂದು ತಿಳಿಸಿದರು.

ಜಿಎಸ್ ಟಿ ಸಂಗ್ರಹ ಈಗ 1,30,000 ಕೋಟಿ ರೂ. ಕಳೆದ ತಿಂಗಳಲ್ಲಿ ಆಗಿದೆ. ಈ ಬಾರಿಯೂ ಕೂಡ 1,20,000 ಕೋಟಿ ರೂ. ಸಂಗ್ರಹದ ನಿರೀಕ್ಷೆ ಇದೆ. ಆರ್ಥಿಕತೆ ಅಭಿವೃದ್ಧಿಯ ಆಗುತ್ತಿರುವ ಬಗ್ಗೆ ಸ್ಪಷ್ಟ ದಿಕ್ಸೂಚಿ. ರಾಜ್ಯದಲ್ಲೂ ಕೂಡ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ಹಲವಾರು ಕ್ರಮಗಳನ್ನು , ಕೆಲವರಿಗೆ ಗುರಿಗಳನ್ನು ನೀಡಿ, ಅನುಸರಣೆ ಕಡಿಮೆ ಇರುವಲ್ಲಿ, ಅನುಸರಣೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯದ ಪಾಲು ಮೂರು ತಿಂಗಳಿಗೊಮ್ಮೆ ಸರಿಯಾಗಿ ಬರುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ವಸತಿ ಯೋಜನೆಗಳ ಪ್ರಗತಿ:*
ಸಚಿವ ಸಂಪುಟದಲ್ಲಿ 5 ಲಕ್ಷಗಳ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿ, 4 ಲಕ್ಷ ಗ್ರಾಮೀಣ ಹಾಗೂ 1 ಲಕ್ಷ ನಗರ ಪ್ರದೇಶದಲ್ಲಿ ವಸತಿ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ.

ಅಮೃತ ಯೋಜನೆಯಲ್ಲಿ 750 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಸತಿರಹಿತರಿಗೆ ಮನೆಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ. ಒಂದೂವರೆ ವರ್ಷದಲ್ಲಿ 4 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

Related posts

ಧಾರವಾಡದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೈಠಕ್

eNEWS LAND Team

ಯುವಜನೋತ್ಸವದಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡಿ : ಶಾಸಕ ಅರವಿಂದ ಬೆಲ್ಲದ

eNewsLand Team

ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಬಸವರಾಜ ಬೊಮ್ಮಾಯಿ

eNEWS LAND Team