34 C
Hubli
ಮಾರ್ಚ್ 23, 2023
eNews Land
ರಾಜ್ಯ

ಅಲ್ಪಸಂಖ್ಯಾತ ‌ಮುಖಂಡರು; ಕುಮಾರಸ್ವಾಮಿ ಹೇಳಿಕೆಗೆ‌ ಖಂಡನೆ

Listen to this article

 

ಇಎನ್ ಎಲ್ ಬ್ಯೂರೋ :
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ‌ಮುಖಂಡರ ಸುದ್ದಿಗೋಷ್ಠಿ; ಕುಮಾರಸ್ವಾಮಿ ಹೇಳಿಕೆಗೆ‌ ಖಂಡನೆ

ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ
ಆಡಳಿತದಲ್ಲಿ ಇಲ್ಲದ ಹೊರತಾಗಿಯೂ ಜೆಡಿಎಸ್
ಪ್ರತಿಪಕ್ಷವಾಗಿದ್ದುಕೊಂಡು ಇನ್ನೊಂದು ಪ್ರತಿಪಕ್ಷವನ್ನೇ ಟೀಕೆ ಮಾಡುತ್ತಿದೆ. ಇದು ದೇಶದ ಇತಿಹಾಸದಲ್ಲಿ ಮೊದಲು. ಈ ಉಪ ಚುನಾವಣೆಯಲ್ಲಿ ಸಂದರ್ಭದಲ್ಲಿ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ.

ಸಂವಿಧಾನಕ್ಕೆ ಅನುಗುಣವಾಗಿ 2013ರಿಂದ 2018ರವರೆಗೆ ಕಾಂಗ್ರೆಸ್ ಜನಮೆಚ್ಚುಗೆಯ ಆಡಳಿತ ನೀಡಿದೆ. ಹಿಂದುಳಿದ ವರ್ಗಗಳನ್ನು ಅನ್ಯಾಯ ಮಾಡಿಲ್ಲ. ಬಿಜೆಪಿ ಉತ್ತಮ ಆಡಳಿತ ಕೊಟ್ಟಿದೆಯಾ? ಇದನ್ನು ಯಾಕೆ ಪ್ರತಿಪಕ್ಷ ಸ್ಥಾನದಲ್ಲಿ ಇರುವ ಜೆಡಿಎಸ್ ಪ್ರಶ್ನೆ ಮಾಡುತ್ತಿಲ್ಲ.

ಕೆಂಪೇಗೌಡ ಜಯಂತಿ, ಸೇರಿ ಇತರೆ ಕಾರ್ಯಕ್ರಮಕ್ಕೆ
ಬಿಜೆಪಿಯವರು ನಯಾಪೈಸೆ ಕೊಟ್ಟಿಲ್ಲ. ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಉತ್ತಮ ಕೊಡುಗೆ‌ ನೀಡಿದೆ. ಆದರೆ ಬಿಜೆಪಿ ಬಜೆಟ್ ನಲ್ಲಿ ಎಷ್ಟು ಹಣ ಮೀಸಲು ಇಟ್ಟಿದ್ದೀರಿ? ಎಷ್ಟು ಅನುದಾನ ಕೊಟ್ಟಿದ್ದಾರೆ?

ಅಲ್ಪಸಂಖ್ಯಾತ ಮಕ್ಕಳಿಗೆ ಎಷ್ಟು ವಿದ್ಯಾರ್ಥಿ ವೇತನ ಕೊಟ್ಟಿದ್ದೀರಿ? ಈ ಉಪ ಚುನಾವಣೆಯಲ್ಲಿ ‌ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯ ಟೀಕಿಸುವ ಉದ್ದೇಶ ಏನು?

ಚುನಾವಣೆ ಬಂದಾಗ ಇಲ್ಲಸಲ್ಲದ ಟೀಕೆ ಮಾಡುವುದು ಯಾಕೆ? ಜನಸಾಮಾನ್ಯರು ಯಾವುದು ಒಂದು ನೆನಪಿನಲ್ಲಿ ಉಳಿಯುವ ಯೋಜನೆ ಕೊಟ್ಟಿದ್ದಾರಾ?
ಪರೋಕ್ಷವಾಗಿ ಬಿಜೆಪಿಗೆ ಸಪೋರ್ಟ್ ಮಾಡುವ ಕೆಲಸ ಬಿಡಿ

ವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್ ಹೇಳಿಕೆ
ಅಲ್ಪಸಂಖ್ಯಾತ ಸಮುದಾಯಕ್ಕೆ ‌ಕಾಂಗ್ರೆಸ್ ೩೨೦೦ ಕೋಟಿ ರು. ಬಜೆಟ್ ನೀಡಲಾಗಿತ್ತು. ಅದನ್ನು ೩೫೦೦ ಕೋಟಿಗೆ ಹೆಚ್ಚಿಸಲು ಕುಮಾರಸ್ವಾಮಿ ಅವರಲ್ಲಿ ಕೇಳಿಕೊಂಡೆವು ಆದರೆ ಅವರು ೧೮೦೦ ಕೋಟಿ ರೂಪಾಯಿ ಮಂಜೂರು ಮಾಡಿ ಕೇವಲ ೧೧೦೦ ಕೋಟಿ ಕೊಟ್ಟರು.

ಕೇವಲ ರಾಜಕಾರಣ ಮಾಡುವ ಸಲುವಾಗಿ ಅಲ್ಪಸಂಖ್ಯಾತರ ಬಗ್ಗೆ ಮಾತನಾಡಬೇಡಿ.
ಸರ್ಕಾರ ಬಂದರೆ ಅಲ್ಪಸಂಖ್ಯಾತರನನ್ನು ಗೃಹ ಸಚಿವರಿಗೆ ಸ್ಥಾನ ಕೊಡುವುದಾಗಿ ಹೇಳಿದ್ರಿ ಆದರೆ ಎಷ್ಟು ಜನರಿಗೆ ಸ್ಥಾನ ಕೊಟ್ಟಿರಿ

ಕುಮಾರಸ್ವಾಮಿ ಅವರೇ ಸುಮ್ಮನೇ ಗೂಬೆ ಕೂಡಿಸುವ ಕೆಲಸ ಮಾಡಬೇಡಿ. ನಿಮಗೆ ಬಿಜೆಪಿ ಜೊತೆ ಒಪ್ಪಂದ ಇದೆಯೊ ಗೊತ್ತಿಲ್ಲ.

ಸಿಎಂ ಇಬ್ರಾಹಿಂ ಹೇಳಿಕೆಗೂ ಕುಮಾರಸ್ವಾಮಿ ಹೇಳಿಕೆಗೂ ವ್ಯತ್ಯಾಸ ಇದೆ. ಪಕ್ಷದ ಹೈಕಮಾಂಡ್ ನವರು ಉತ್ತರಿಸುತ್ತಾರೆ.
ಇಬ್ರಾಹಿಂಗೂ ಇಷ್ಟು ವರ್ಷದಿಂದ ಜ್ಞಾನ ಇರಲಿಲ್ಲವೆ? ಸಿಎಲ್ಪಿ ಸಭೆಯಲ್ಲಿ ಅವರು ಮಾತನಾಡಬಹುದಿತ್ತು. ಈಗ ಇಬ್ರಾಹಿಂ ಮಾತು ಎತ್ತುತ್ತಿರುವುದು ಯಾಕೆ?

ಯು.ಟಿ.ಖಾದರ್ ಹೇಳಿಕೆ
ಮಂಗಳೂರಿನಲ್ಲಿ ಬಜರಂಗದಳ ತ್ರಿಶೂಲ ದೀಕ್ಷೆ ನೀಡಲಾಗಿದೆ. ಸರ್ಕಾರದ ಬಳಿ ಇಂಟಲಿಜೆನ್ಸ್ ರಿಪೋರ್ಟ್ ಇದೆ. ಸರ್ಕಾರ ಎಲ್ಲ ವರ್ಗದ ಜನತೆ ಶಾಂತಿ ನೆಲೆಸುವಂತೆ ಕ್ರಮ ವಹಿಸಬೇಕು. ಯಾವ ಉದ್ದೇಶದಿಂದ ದೀಕ್ಷೆ ನೀಡಲಾಗಿದೆ ಎಂದು ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ನೆಮ್ಮದಿ ರಹಿತ‌ ಜೀವನ ನಡೆಸಲು ಅವಕಾಶ ನೀಡಬಾರದು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆ್ಯಕ್ಷನ್ ರಿಯಾಕ್ಷನ್ ಸರಿಪಡಿಸಲು ಸರ್ಕಾರ ಇದೆ.

ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ
ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರು ಬದುಕಿದ್ದಾರೆ ಎಂಬುದು ಈಗ ನೆನಪಾಗುತ್ತದೆ. ತಾವು ಆಡಳಿತದಲ್ಲಿ ಇದ್ದಾಗ ಯಾವೊಂದು ಕೊಡುಗೆಯನ್ನು ನೀಡಿಲ್ಲ.

ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲು ಅಲ್ಪಸಂಖ್ಯಾತರ ಕುರಿತಾಗಿ ಮಾತನಾಡುವುದು ಬೇಡ. ನಮ್ಮ ಪರವಾಗಿ ಯಾರೊಬ್ಬರೂ ರಾಜ್ಯದಲ್ಲಿ ಕ್ಯಾಬಿನೆಟ್ ನಲ್ಲಿ ಇಲ್ಲ. ಒಕ್ಕಲಿಗ, ಲಿಂಗಾಯತ, ಸೇರಿ ಇತರೆ ಸಮುದಾಯಕ್ಕೆ ನಾವು ಸಾಮಾಜಿಕ ನ್ಯಾಯ ಆಧರಿಸಿ ಮಂತ್ರಿ ಸ್ಥಾನವನ್ನು ನೀಡಿದ್ದೆವು

ಸಾಮಾನ್ಯ ಜನರ ಪರವಾಗಿ ಜೆಡಿಎಸ್ ಒಂದೇ ಒಂದು ಹೋರಾಟ ನಡೆಸಿಲ್ಲ. ಹಸಿವು, ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ಮಾತನಾಡಿಲ್ಲ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರದ ಇರುವಾಗ ಟೀಕೆ ಮಾಡಿಲ್ಲ. ಹೋರಾಟ ಮಾಡಿಲ್ಲ. ನೀವು ಬಿಜೆಪಿ ಅಲೈನ್ಸ್ ಎಂದು ತಿಳಿದುಕೊಳ್ಳಬೇಕಾ? ಅಧಿಕಾರ ಇದ್ದಾಗ ಯಾವುದೇ ಒಂದು ಕೆಲಸ ಮಾಡಿಲ್ಲ, ದ್ವೇಷ ಸಾಧಿಸಲು ಅಲ್ಪಸಂಖ್ಯಾತರ ಹೆಸರನ್ನು ಬಳಸಿಕೊಳ್ಳಬೇಡಿ.

Related posts

ಕೊಡಗು ಜಿಲ್ಲೆ ಪಹಣಿಯಲ್ಲಿ ಬಹುವಾರ್ಷಿಕ ಬೆಳೆ ನಮೂದಿಸಲು ಕ್ರಮ

eNEWS LAND Team

ಹುಬ್ಬಳ್ಳ್ಯಾಗ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ಸ್ ಐತಿ; ಮಕ್ಳ ಕರ್ಕೊಂಡು ಹೊಂಡ್ರಿ ಮತ್ತ..!

eNEWS LAND Team

ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ವಸತಿ ಯೋಜನೆಗಳಿಗಾಗಿ 530 ಎಕರೆ ಜಮೀನು ನೀಡಿಕೆ:ಸಚಿವ ಅಶೋಕ

eNEWS LAND Team