34 C
Hubli
ಫೆಬ್ರವರಿ 28, 2024
eNews Land
ರಾಜ್ಯ

ಸಿದ್ದು ಹೇಳಿಕೆಗೆ ಸಿಎಂ ಸವಾಲು; ಎಲ್ಲಿದೆ 2400 ಕೋಟಿ?

ಇಎನ್ಎಲ್ ಸುದ್ದಿಸೇವೆ :

ಹುಬ್ಬಳ್ಳಿ : ಹಾನಗಲ್ ಅಳಿಯನಾಗಿ ಬೊಮ್ಮಾಯಿ ಕ್ಷೇತ್ರಕ್ಕೇನು ಕೊಟ್ಟಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,‌ ಅವರು ಕೊಟ್ಟ 2400 ಕೋಟಿ ರೂ. ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅವರು ಯಾವ್ಯಾವುದಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬ ಲೆಕ್ಕ ಹೇಳಲಿ. ಆ ಬಳಿಕ ನಾನು ಹೇಳುತ್ತೇನೆ ಎಂದು ಸವಾಲು ಹಾಕಿದರು.
ಬಿಜೆಪಿ ಅಭ್ಯರ್ಥಿ ಇಲ್ಲಿನ ಸಕ್ಕರೆ ಕಾರ್ಖಾನೆ ಮುಚ್ಚಲು ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಆ ಕಾರ್ಖಾನೆಯ ಮುಚ್ಚಲು ಕಾಂಗ್ರೆಸ್ಸಿಗರ ಕೊಡುಗೆ ಸಾಕಷ್ಟಿದೆ. ರೈತರಿಗೆ ನೆರವಾಗಲು ಅಲ್ಲಿ ಸಕ್ಕರೆ ಕಬ್ಬು ಅರೆಸಲು ಬಿಜೆಪಿ ಸರ್ಕಾರ ಕಾರಣ ಎಂದು ಅವರು ಹೇಳಿದರು.
ಇನ್ನು,‌ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾದರೆ ಪೆಟ್ರೋಲ್ ಮೇಲಿನ ತೆರಿಗೆ ಇಳಿಸುವ ಕುರಿತು ಯೋಚಿಸಬಹುದು. ಉಪಚುನಾವಣೆ ಬಳಿಕ ಈ ಕುರಿತು ಪರಿಶೀಲನೆ ಸಭೆ ನಡೆಸಿ ಅವಲೋಕಿಸುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

Related posts

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಪ್ರಸ್ತಾಪ ಬಸವರಾಜ ಹೊರಟ್ಟಿ

eNEWS LAND Team

ಕರ್ನಾಟಕದಲ್ಲಿಂದು ಕೊರೊನಾ ಪ್ರಕರಣಗಳು ಎಷ್ಟು?

eNEWS LAND Team

ಧಾರವಾಡದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೈಠಕ್

eNEWS LAND Team