30 C
Hubli
ಡಿಸೆಂಬರ್ 1, 2022
eNews Land
ರಾಜ್ಯ

ಚಂಬೆಳಕಲ್ಲಿ ಒಂದಾದ ಚನ್ನವೀರ ಕಣವಿ

Listen to this article

ಇಎನ್ಎಲ್ ಧಾರವಾಡ: ಚಂಬೆಳಕಿನ ಕವಿ ಚನ್ನವೀರ ಕಣವಿ ಕಣವಿ (94) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.

ಉಸಿರಾಟದ ಸಮಸ್ಯೆ ಕೋವಿಡ್ ಕಾರಣದಿಂದ ಕಳೆದ ಜ.14ರಂದು ಎಸ್’ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಣವಿ ಒಂದು ತಿಂಗಳು ಹೆಚ್ಚು ಚಿಕಿತ್ಸೆ ಪಡೆದಿದ್ದರು. ಅವರು ಕಣವಿ ಬುಧವಾರ ಬೆಳಗ್ಗೆ ಇಹಲೋಕ ತ್ಯಜಿಸಿದರು. ಜಿಲ್ಲಾಡಳಿತ ಇನ್ನೇನು ಘೋಷಣೆ ಮಾಡಬೇಕಿದೆ.
ಕಣವಿ ಅವರ ಪಾರ್ಥಿವ ಶರೀರ ಸಾರ್ವಜನಿಕ ದರ್ಶನದ ನಂತರ ಅಂತ್ಯ ಸಂಸ್ಕಾರ ಬುಧವಾರ ಸಂಜೆಯೇ ಧಾರವಾಡದ ಸೃಷ್ಟಿ ಫಾರ್ಮ ಹೌಸ್’ನಲ್ಲಿ ನಡೆಸಲು ಚಿಂತಿಸಲಾಗಿದೆ.
ಸಿಎಂ ಸಂತಾಪ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬ ನಮಗೆ ನಾಲ್ಕು ದಶಕದಿಂದ ಪರಿಚಯ. ನಾಡು ಕಂಡಂತ ಸೃಜನಶೀಲ ಸಾಹಿತ್ಯ ರಚನೆ ಮಾಡಿದ್ದಾರೆ. ಅವರು ಸಜ್ಜನಿಕೆಗೆ ಸಾಕಾರ ಮೂರ್ತಿ. ಮೃದು ಮಾತುಗಳಿಂದ ಮನ ಗೆಲ್ಲುತ್ತಿದ್ದರು. ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಸಾಹಿತ್ಯದ ಮೂಲಕ ಒದಗಿಸಿದ್ದರು. ಸಾಕಷ್ಟು ಪ್ರಶಸ್ತಿ ಪಡೆದಿದ್ದ ಅವರು, ಪ್ರಶಸ್ತಿಗೆ‌ ಗೌರವ ಬರುವಂತೆ ಮಾಡಿದ್ದಾರೆ. ತಮ್ಮ ಕಲ್ಪನೆ ಮತ್ತು ವಾಸ್ತವಾಂಶವನ್ನು ತೆರೆದಿಟ್ಟಿದ್ದರು. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನಷ್ಟವಾಗಿದೆ. ಸಾತ್ವಿಕ ಚಿಂತಕರ ಕೊರತೆ ಇರುವ ಈ ಸಂದರ್ಭದಲ್ಲಿ ಕಣವಿ ಅವರ ಪ್ರಸ್ತುತತೆ ಅಗತ್ಯವಿತ್ತು. ಹೊಸ ಸಾಹಿತಿಗಳು ರಾಜ್ಯದಲ್ಲಿ ಒಡಮೂಡಬೇಕಿದೆ. ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರವನ್ನು ಸಾಹಿತಿಗಳಿಗೆ ನೀಡುವ ಮೂಲಕ ಕಣವಿ ಅವರಿಗೆ ನಿಜವಾದ ಗೌರವ ಸಲ್ಲಿಸಲಿದೆ ಎಂದರು.

Related posts

ಎಚ್‌ಡಿಕೆಗೆ ಕಟೀಲ್ ಟಾಂಗ್

eNEWS LAND Team

ಕೋವಿಡ್ ಸಂಕಷ್ಟದ ನಂತರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ : ಸಿಎಂ

eNewsLand Team

ವಾಲ್ಮೀಕಿ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಲಾರ್ಪಣೆ

eNEWS LAND Team