ಇಎನ್ಎಲ್ ಭಟ್ಕಳ
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಬೃಹತ್ ತಿಮಿಂಗಿಲ ಕಾಣಿಸಿಕೊಂಡು ಮೀನುಗಾರರನ್ನು ಆತಂಕ ಪಡಿಸಿದ ಘಟನೆ ಭಟ್ಕಳದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಸಮುದ್ರದಲ್ಲಿ ಹವಾಮಾನ ವೈಪರಿತ್ಯವಾದ್ದರಿಂದ ಬೃಹತ್ ಗಾತ್ರದ ತಿಮಿಂಗಿಲವು ಇದೀಗ ತೀರ ಪ್ರದೇಶಗಳತ್ತ ಆಹಾರ ಅರಸಿ ಬರುತಿದ್ದು ಇಂದು ಭಟ್ಕಳದ ಅರಬ್ಬಿ ಸಮುದ್ರದಲ್ಲಿ ತಿಮಿಂಗಿಲ ಪ್ರತ್ಯಕ್ಷವಾಗಿದೆ. ಈ ದೃಶ್ಯವನ್ನು ಮೀನುಗಾರರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಎಲ್ಲರ ಎದೆ ಝಲ್ ಎನಿಸುವಂತಿದೆ.