ಇಎನ್ಎಲ್ ಉತ್ತರ ಕನ್ನಡ :
ಜೋಯಿಡಾ ತಾಲೂಕಿನ ಕುಗ್ರಾಮ ಕರಟೂಲಿಯ ಮಹದೇವ್ ವೇಲಿಫ್ ಅವರಿಗೆ ಪರಿಸರ ವಿಷಯದಲ್ಲಿ ರಾಜ್ಯೋತ್ಸವ ಪ್ರಶಸ್ತಿಬಂದಿದೆ.
91ನೇ ವಯಸ್ಸಿನ ಇವರು ಕಾಡಿನ ಬಗ್ಗೆ ಅಪಾರ ಜ್ಞಾನ ಹೊಂದಿರುವ ನಡೆದಾಡುವ ವಿಶ್ವಕೋಶ. ಸುಮಾರು 38 ಕ್ಕಿಂತಲೂ ಹೆಚ್ಚಿನ ಗಡ್ಡೆ ಗೆಣಸುಗಳ ಬಗ್ಗೆ ಜ್ಞಾನ ಹೊಂದಿರುವದಷ್ಟೇ ಅಲ್ಲದೇ ಅವುಗಳ ರಕ್ಷಣೆಗೆ ನಿಂತವರು. ಜೇನು ಮತ್ತು ಉಂಬಳದ ರಕ್ಷಣೆಗೆ ಪ್ರಯತ್ನಿಸುತ್ತಾ ಪರಿಸರ ಪ್ರೇಮ ತೋರಿಸುತ್ತಾ ಬಂದಿರುವವರು. ಅನೇಕ ಪಕ್ಷಿಗಳ ಕೂಗನ್ನು ಕೇಳಿ ಸಮಯ ಎಷ್ಟಾಯಿತೆಂದು ನಿಖರವಾಗಿ ಹೇಳುವಷ್ಟು ಪರಿಣಿತಿ ಉಳ್ಳವರು.
ಯಾವ ಯೂನಿವರ್ಸಿಟಿಯ ಪದವಿ ಇವರಿಗಿಲ್ಲ. ಶಾಲೆಯನ್ನೇ ಕಲಿತಿಲ್ಲ. ರಾಜ್ಯ ಸರ್ಕಾರವು ಈ ಬಾರಿ ಪದ್ಮಶ್ರೀ ಮಾದರಿಯಲ್ಲಿ ಇಂತಹ ವ್ಯಕ್ತಿಗಳನ್ನು ಹುಡುಕಿ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಇಲ್ಲಿಯವರೆಗೆ ಜೋಯಿಡಾ ತಾಲೂಕಿಗೆ ಇಂತಹ ಯಾವ ಪ್ರಶಸ್ತಿಗಳೂ ಸಹ ಬಂದಿರಲಿಲ್ಲ.