28 C
Hubli
ಸೆಪ್ಟೆಂಬರ್ 21, 2023
eNews Land
ರಾಜಕೀಯ ರಾಜ್ಯ

100 ದಿನಗಳ ಆಡಳಿತದಲ್ಲಿ ದಿಟ್ಟ ಹೆಜ್ಜೆ ಸಿಎಂ

100 ದಿನಗಳ ಆಡಳಿತದಲ್ಲಿ ದಿಟ್ಟ ಹೆಜ್ಜೆ ಸಿಎಂ

ಇಎನ್ಎಲ್ ಹುಬ್ಬಳ್ಳಿ

ಕಳೆದ 100 ದಿನಗಳಲ್ಲಿ ಭದ್ರ, ಭರವಸೆಯ ಮತ್ತು ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅಮೃತ ಯೋಜನೆಗಳು, ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಬಡವರಿಗೆ ಸಂಧ್ಯಾಸುರಕ್ಷಾ, ವಿಧಾವಾವೇತನ, ಅಂಗವಿಕಲರ ವೇತನಗಳನ್ನು ಹೆಚ್ಚು ಮಾಡಲಾಗಿದೆ. ಇದಲ್ಲದೆ, ಇನ್ನೂ ಹಲವಾರು ಯೋಜನೆಗಳನ್ನು ರೂಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಆರ್ಥಿಕ ಚೇತರಿಕೆಯನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುವುದು ಮುಖ್ಯಮಂತ್ರಿಗಳು ತಿಳಿಸಿದರು.

ವ್ಯವಸ್ಥೆಯ ಸುಧಾರಣೆ, ಜನರ ಬಳಿಗೆ ಸರ್ಕಾರ ಹೋಗಬೇಕು ಹಾಗೂ ಆರ್ಥಿಕತೆ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಉಪಯೋಗ ಮಾಡಿಕೊಳ್ಳಬೇಕು ಎಂಬ ಉದ್ದೇಶ ಸರ್ಕಾರದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದ ತಲಾ ಆದಾಯವನ್ನು ಇತರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ಮೊದಲನೇ 5 ನೇ ಸ್ಥಾನದಲ್ಲಿದ್ದರೂ, ಇದರಲ್ಲಿ ಎಲ್ಲ ಜನರ ಕೊಡುಗೆ ಇರಬೇಕು. ಎಸ್.ಸಿ.ಎಸ್.ಟಿ , ಹಿಂದುಳಿದ ವರ್ಗಗಳು ಮತ್ತು ಬದವರೂ ಸಹ ಆರ್ಥಿಕತೆಯಲ್ಲಿ ಪಾಲ್ಗೊಳ್ಳಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಆರ್ಥಿಕ ನೆರವು ನೀಡಬೇಕು ಹಾಗೂ ಹೆಣ್ಣುಮಕ್ಕಳನ್ನು ಕಾರ್ಯಕ್ರಮಗಳ ಭಾಗವಾಗಿಸುವುದು ನಮ್ಮ ಆಶಯ ಎಂದರು.

ನೂರು ದಿನಗಳಲ್ಲಿ ಆಡಳಿತವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಅಗತ್ಯವಿರುವ ನಿರ್ಣಯಗಳು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ವಿಚಾರಗಳು ತೃಪ್ತಿ ತಂದಿದೆ ಎಂದರು.

ದೆಹಲಿ ಪ್ರವಾಸ ರದ್ದು
ರಾಷ್ಟ್ರೀಯ ಕಾರ್ಯಕಾರಿ ಸಭೆಗೆ 7 ರಂದು ದೆಹಲಿಗೆ ತೆರಳುತ್ತಿಲ್ಲ. ಬೆಂಗಳೂರಿನ ಪಕ್ಷದ ಕಚೇರಿಯಿಂದಲೇ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

Related posts

ಆಡುವಾಗ ಗೆಲ್ಲಲೆಂದೇ ಆಡಬೇಕು: ಸಿಎಂ ಬೊಮ್ಮಾಯಿ

eNEWS LAND Team

ಕರ್ನಾಟಕದಲ್ಲಿಂದು ಕೊರೊನಾ ಪ್ರಕರಣಗಳು ಎಷ್ಟು?

eNEWS LAND Team

ಬಿಎಸ್‌ವೈ ಸರ್ವಶ್ರೇಷ್ಠ ನಾಯಕ

eNEWS LAND Team