18 C
Hubli
ನವೆಂಬರ್ 30, 2022
eNews Land
ಕ್ರೀಡೆ

ಕಪ್‌ ಎತ್ತೋರು ಯಾರು?

Listen to this article

ಕಪ್‌ ಎತ್ತೋರು ಯಾರು

ಐಪಿಎಲ್-14 ಫೈನಲ್ ಇಂದು ರಾತ್ರಿ
ಕೊಲ್ಕತ್ತಾ ನೈಟ್ ರೈಡರ್ಸ್ V/S ಚೆನ್ನೈ ಸೂಪರ್ ಕಿಂಗ್ಸ್

ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡ ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಕಿಂಗ್ ಎನ್ನಿಸಿಕೊಳ್ಳುತ್ತಾ? ಇಯಾನ್ ಮಾರ್ಗನ್ ಮೂರನೇ ಬಾರಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಕಪ್ ಎತ್ತುವಂತೆ ಮಾಡ್ತಾರಾ?

ಕೋವಿಡ್ ಕಾರಣದಿಂದ 2.0 ಸ್ವರೂಪದಲ್ಲಿ ನಡೆಯುತ್ತಿರುವ ಐಪಿಎಲ್ 14ನೇ ಆವೃತ್ತಿಯ ಚಾಂಪಿಯನ್ ಯಾರುಬೆಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ‌.

ಭಾರತೀಯ ಕಾಲಮಾನ 7.30ಕ್ಕೆ ಐಪಿಎಲ್‌ನ ಫೈನಲ್ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಈವರೆಗಿನ ಲೆಕ್ಕಾಚಾರದ ಪ್ರಕಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಕ್ಕೂ ಪೂರಕವಾಗಿದೆ.

ಹವಾಮಾನ ಹೇಗಿದೆ?
ಇಲ್ಲಿ 30 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶವಿರಲಿದೆ. ಮಳೆ ಸಾಧ್ಯತೆ ಕಡಿಮೆಯಿದೆ. ಅಲ್ಲದೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಬ್ಬನಿ ಪರಿಣಾಮ ಬೀರುವ ಸಾಧ್ಯತೆಯಿಲ್ಲ.

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿಯೂ ಲೈವ್‌ಸ್ಟ್ರೀಮಿಂಗ್ ಚಂದಾದಾರರಿಗೆ ಲಭ್ಯವಾಗಲಿದೆ.

೧೩ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಡಿಸಿದ 219/2 ಈವರೆಗಿನ ಹೈಯೆಸ್ಟ್ ಸ್ಕೋರ್ ಎನಿಸಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 155 ರನ್. ಮೊದಲಿಗೆ ಬ್ಯಾಟಿಂಗ್ ಮಾಡಿದ ತಂಡ 170 ರನ್‌ಗಳನ್ನು ಗಳಿಸಿದರೆ ರಕ್ಷಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಮೈದಾನದಲ್ಲಿ ಈವರೆಗೆ ಆಡಿದ ಪಂದ್ಯಗಳ ಪೈಕಿ 62 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆಲುವು ಸಾಧಿಸಿದರೆ 41 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿದೆ.

Related posts

ಎಬಿಡಿ ನಿವೃತ್ತಿ ಘೋಷಣೆ: ಕೊಹ್ಲಿ ಭಾವುಕ ಸಂದೇಶ

eNewsLand Team

ಐಎಸ್ಎಲ್ : ಮುಂಬೈ ಗೋಲ್, ಗೋವಾ ಫೇಲ್!

eNewsLand Team

ಈಸ್ಟ್ ಬೆಂಗಾಲ್ V/S ಜೆ‌ಮ್ಶೆಡ್‌ಪುರ ಇಂದು

eNewsLand Team