ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್
ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ವೈಟ್ ವಾಶ್ ಮಾಡಿರುವ ವಿಶ್ವಾಸದಿಂದ ಇರುವ ಭಾರತ ತಂಡ ಇದೀಗ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಆರಂಭ ಆಗಿರುವ ಟೆಸ್ಟ್ ಮ್ಯಾಚ್ ಗೆಲ್ಲುವ ಇರಾದೆಯಲ್ಲಿದೆ.
ಟಾಸ್ ಗೆದ್ದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲು ಬ್ಯಾಟ್ ಮಾಡಿರುವ ತಂಡಗಳೇ ಇಲ್ಲಿ ಹೆಚ್ಚಿನ ಗೆಲುವ ಸಾಧಿಸಿರುವ ಕಾರಣ ಟೀಮ್ ಇಂಡಿಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಕಾನ್ಪುರ ಪಿಚ್ ಸ್ಪಿನ್ನರ್ ಗಳಿಗೆ ಹೆಚ್ಚು ಅನುಕೂಲ ಕಲ್ಪಿಸುವ ಕಾರಣ ಮೂವರು ಸ್ಪಿನ್ನರ್ ಗಳನ್ನು ತಂಡದಲ್ಲಿ ಒಳಗೊಂಡಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಕಿವಿಸ್ ವಿರುದ್ಧ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತ ತವಕದಲ್ಲಿದೆ.
ಸದ್ಯ ಭಾರತ ತಂಡ 18 ಓವರುಗಳಲ್ಲಿ 56 ರನ್ ಗಳಿಸಿದೆ. ಮಯಾಂಕ್ ಅಗರವಾಲ್ (13) ವಿಕೆಟ್ ಕಳೆದುಕೊಂಡಿದ್ದು ಶುಭಮನ್ ಗಿಲ್ (35/53), ಚೇತೇಶ್ವರ ಪೂಜಾರಾ (6/29) ಕ್ರೀಸ್ ನಲ್ಲಿ ಇದ್ದಾರೆ.
ಭಾರತದ ತಂಡ
ಶುಭನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ಅಜಿಂಕ್ಯಾ ರಹಾನೆ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಉಮೇಶ್ ಯಾದವ್.
ನ್ಯೂಜಿಲೆಂಡ್ ತಂಡ
ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಸ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲಸ್, ಟಾಮ್ ಬಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಅಜಾಜ್ ಪಟೇಲ್, ಟಿಮ್ ಸೌಥಿ, ಕೈಲ್ ಜೇಮಿಸನ್, ವಿಲಿಯಮ್ ಸೋಮರ್ವಿಲ್ಲೆ.