eNews Land
ಕ್ರೀಡೆ

ಅಂತಾರಾಷ್ಟ್ರೀಯ ಟಿ20ಗೆ ಈಗ ಮಾರ್ಟಿನ್ ಗಪ್ಟಿಲ್ ಬಾಸ್!

Listen to this article

111 ಪಂದ್ಯಗಳಿಂದ 3,248 ರನ್ ಕಲೆಹಾಕಿ ಗರಿಷ್ಠ ರನ್ ಸಾಧನೆ ಮಾಡಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ | ಎರಡನೇ ಸ್ಥಾನಕ್ಕೆ ಕುಸಿದ ರನ್ ಮಷಿನ್ ಕೊಹ್ಲಿ

ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ

ನ್ಯೂಜಿಲೆಂಡ್ ತಂಡದ ಸ್ಫೋಟಕ ಓಪನರ್ ಮಾರ್ಟಿನ್ ಗಪ್ಟಿಲ್‌, ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್‌ ಕೊಹ್ಲಿಯ ಹೆಸರಲ್ಲಿದ್ದ ಟಿ20 ಮಾದರಿಯ ಗರಿಷ್ಠ ರನ್ ದಾಖಲೆ ಮುರಿದು ತಮ್ಮ ಹೆಸರು ಸ್ಥಾಪಿಸಿಕೊಂಡಿದ್ದಾರೆ. ಅವರು ಸದ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿರುವ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾರ್ಟಿನ್ ಇದೀಗ 111 ಪಂದ್ಯಗಳಿಂದ 3,248 ರನ್ ಕಲೆಹಾಕಿ ಮೊದಲ ಸ್ಥಾನದಲ್ಲಿ ಇದ್ದಾರೆ. ವಿರಾಟ್‌ ಕೊಹ್ಲಿ 95 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 3,227ರನ್ ಗಳಿಸಿದ್ದಾರೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ 118 ಪಂದ್ಯಗಳಿಂದ 3,141 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ವಿರಾಟ್‌ ಕೊಹ್ಲಿ 95 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 3,227ರನ್ ಗಳಿಸಿದ್ದಾರೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ 118 ಪಂದ್ಯಗಳಿಂದ 3,141 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಶುಕ್ರವಾರ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ 15 ಎಸೆತಗಳಲ್ಲಿ 31 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದ ಗಪ್ಟಿಲ್ ಟಿ20 ಕ್ರಿಕೆಟ್‌ನಲ್ಲಿ 3,231ರನ್ ಕಲೆಹಾಕಿದ್ರು. ಈ ಮೂಲಕ ವಿರಾಟ್ ಹೆಸರಲ್ಲಿ 3,227ರನ್‌ಗಳ ದಾಖಲೆಯನ್ನು ಎರಡನೇ ಸ್ಥಾನಕ್ಕೆ ತಳ್ಳಿದರು.

ಪಂದ್ಯಕ್ಕೂ ಮೊದಲು ಈ ದಾಖಲೆ ಮಾಡಲು ಗಪ್ಟಿಲ್‌ಗೆ 10ರನ್‌ಗಳ ಅವಶ್ಯಕತೆಯಿತ್ತು.

Related posts

ಎಬಿಡಿ ನಿವೃತ್ತಿ ಘೋಷಣೆ: ಕೊಹ್ಲಿ ಭಾವುಕ ಸಂದೇಶ

eNewsLand Team

ಟಿ-20 ಸರಣಿ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ

eNewsLand Team

ಈ ಪ್ರಶಸ್ತಿ ಪಡೆದ ಮೊದಲ ಭಾರತೀಯೆ ‌ಎನಿಸಿದ ಹರ್ಮನ್ ಪ್ರೀತ್ ಕೌರ್!

eNewsLand Team