34 C
Hubli
ಮಾರ್ಚ್ 23, 2023
eNews Land
ಕ್ರೀಡೆ

ರನ್ ಮಷಿನ್ ಹೆಸರಲ್ಲಿದ್ದ ಯಾವ ದಾಖಲೆ ಈಗ ಹಿಟ್ ಮ್ಯಾನ್ ಪಾಲು? ಓದಿ ನೋಡಿ

Listen to this article

ರೋಹಿತ್ ಶರ್ಮಾ ಬರೆದ ಹೊಸ ದಾಖಲೆ ಯಾವ್ದು? ಈಗ ಕೊಹ್ಲಿಗೆ ಎಷ್ಟನೇ ಸ್ಥಾನ?

ಇಎನ್ಎಲ್ ಸ್ಪೋರ್ಟ್ಸ್ ಡೆಸ್ಕ್

ಟಿ20 ಕ್ರಿಕೆಟ್ ಮಾದರಿಯ ಅತಿಹೆಚ್ಚು ಇನಿಂಗ್ಸ್‌ಗಳಲ್ಲಿ 50ಕ್ಕಿಂತ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಭಾರತ ತಂಡದ ನೂತನ ನಾಯಕ ರೋಹಿತ್ ಶರ್ಮಾ ಬರೆದಿದ್ದಾರೆ. ಈ ಮೂಲಕ ದಾಖಲೆ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಎರಡನೇ ಸ್ಥಾನಕ್ಕೆ ಇಳಿಸಿದ್ದಾರೆ.

ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರಲ್ಲಿ ಅತಿಹೆಚ್ಚು ಇನಿಂಗ್ಸ್‌ಗಳಲ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ ಇತ್ತು. 95 ಪಂದ್ಯಗಳ 87 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, 29 ಇನಿಂಗ್ಸ್‌ಗಳಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದರು.

ಇದೀಗ 119 ಪಂದ್ಯಗಳ 111 ಇನಿಂಗ್ಸ್‌ಗಳಲ್ಲಿ ರೋಹಿತ್ 30 ಬಾರಿ ಐವತ್ತಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕಗಳು ಸೇರಿವೆ.

ಇನ್ನು ಪಾಕಿಸ್ತಾನದ ಬಾಬರ್ ಅಜಂ (25), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (22) ಮತ್ತು ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ (21) ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ.

 

Related posts

ಕಪ್‌ ಎತ್ತೋರು ಯಾರು?

eNEWS LAND Team

ಸರಣಿ ವಶದ ತವಕದಲ್ಲಿ ರಾಹುಲ್‌ – ರೋಹಿತ್

eNewsLand Team

ಐಪಿಎಲ್; ತಮ್ಮ ಟೀಂನಲ್ಲಿ ಉಳಿದು ಕೊಂಡವರಾರು?

eNewsLand Team