ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ :
ಮಾಜಿ ಟಿ20 ನಾಯಕ ಕೊಹ್ಲಿಗೆ ರೆಸ್ಟ್
ಮುಂದಿನ ನ.17ರಿಂದ ನಡೆದ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿಗೆ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್ (ಉಪ ನಾಯಕ), ರುತುರಾಜ್ ಗಾಯಕವಾಡ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ ಯಾದವ, ರಿಷಬ್ ಪಂತ ( ವಿ.ಕೀಪರ್), ಇಶಾನ್ ಕಿಶನ್ ( ವಿ.ಕೀಪರ್), ವೆಂಕಟೇಶ ಐಯ್ಯರ್, ಯಜುವೇಂದ್ರ ಚಹಲ್, ಆರ್.ಅಶ್ವಿನ್, ಅಕ್ಸರ್ ಪಟೇಲ್, ಆವೇಶ ಖಾನ್, ಭುವನೇಶ್ವರ ಕುಮಾರ, ದೀಪಕ ಚಹರ್, ಹರ್ಷಲ್ ಪಟೇಲ್, ಮಹ್ಮದ್ ಸಿರಾಜ್.
ಮಾಜಿ ಟಿ20 ನಾಯಕ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಈವರೆಗೂ 19 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ 15ರಲ್ಲಿ ಗೆಲವು ತಂದುಕೊಟ್ಟಿದ್ದಾರೆ. ಟಿ20 ನಾಯಕನಾಗಿ ಶತಕ ಸಿಡಿಸಿದ ಅಪೂರ್ವ ದಾಖಲೆ ಶರ್ಮಾ ಹೆಸರಲ್ಲಿದೆ. ಐಪಿಎಲ್ ನಲ್ಲಿ ಮುಂಬೈಗೆ ನಾಲ್ಕು ಕಪ್ ಗೆದ್ದುಕೊಟ್ಟ ಗರಿಮೆ ಕೂಡ ಇವರದ್ದು. ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ 2018ರಲ್ಲಿ ನಿಧಾ ಟ್ರೋಫಿ ಗೆದ್ದಿರುವುದು, ಕೊಹ್ಲಿಗಿಂತ ಉತ್ತಮ ಗೆಲವಿನ ಅಂಕಿಅಂಶ (78.84%) ಹೊಂದಿರುವುದು ಶರ್ಮಾ ಪ್ಲಸ್ ಪಾಯಿಂಟ್.