ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ
ಟಿ20 ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ8 ವಿಕೆಟ್ ಗಳ ಗೆಲವು ಸಾಧಿಸಿದ್ದು, ಈ ಮೂಲಕ ಭಾರತದ ಸೆಮಿಫೈನಲ್ಸ್ ಪ್ರವೇಶ ಭಗ್ನವಾಗಿದೆ. ಭಾರತ 9 ವರ್ಷಗಳ ನಂತರ ನಾಕ್ ಔಟ್ ಹಂತ ಪ್ರವೇಶಿಸದೆ ಟೂರ್ನಿಯಿಂದ ನಿರ್ಗಮಿಸಲಿದೆ.
ಆರಂಭದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಈಗ ಸೆಮಿಫೈನಲ್ಸ್ ಪ್ರವೇಶಕ್ಕೆ ಇವತ್ತು ಅಫ್ಘಾನ್ ಗೆಲವು ಅಗತ್ಯವಾಗಿತ್ತು. ಆದರೆ ಇನ್ನೊಂದು ತಂಡದ ಗೆಲವು ನೆಚ್ಚಿಕೊಂಡಿದ್ದ ಭಾರತಕ್ಕೆ ನಿರಾಸೆಯಾಗಿದೆ.
ಅಫ್ಘಾನಿಸ್ತಾನ ನೀಡಿದ 125 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಡೇರ್ಯಲ್ ಮಿಚೆಲ್ 17 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ತಂಡದ ಮೊತ್ತ 57 ರನ್‌ಗಳಾಗಿದ್ದಾಗ ಮಾರ್ಟಿನ್ ಗಪ್ಟಿಲ್ ಕೂಡ ಪೆವಿಲಿಯನ್ ಸೇರಿದರು. ಬಳಿಕ ಕಿವೀಸ್ ನಾಯಕ ಹಾಗೂ ಡೆವೋನ್ ಕಾನ್ವೆ ಮುರಿಯದ ಮೂರನೇ ವಿಕೆಟ್‌ಗೆ 68 ರನ್‌ಗಳ ಅಜೇಯ ಜೊತೆಯಾಟದ ಮೂಲಕ ಭಾರತದ ಕನಸಿಗೆ ಕೊಳ್ಳಿಯಿಟ್ಟರು.
ಇನ್ನು ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಪರ ರಶೀದ್ ಖಾನ್ ಚುಟುಕು ಕ್ರಿಕೆಟ್ ನಲ್ಲಿ ಬರೋಬ್ಬರಿ 400 ವಿಕೇಟ್ ಪಡೆದ ಸಾಧನೆ ಮಾಡಿದರು.