27 C
Hubli
ಡಿಸೆಂಬರ್ 7, 2023
eNews Land
ಕ್ರೀಡೆ

ಮೆಸ್ಸಿಗೆ 7ನೇ ಬಾರಿ ಪ್ರತಿಷ್ಠಿತ ಬಾಲನ್‌ ಡಿ’ಓರ್‌ ಪ್ರಶಸ್ತಿ

ಇಎನ್ಎಲ್ ಸ್ಪೋರ್ಟ್ಸ್ ಡೆಸ್ಕ್

ಪ್ಯಾರಿಸ್‌: ಫ್ರಾನ್ಸ್‌ ಫುಟ್ಬಾಲ್‌ ನಿಯತಕಾಲಿಕೆಯು ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ವಿಭಾಗದಲ್ಲಿ ನೀಡುವ ಪ್ರತಿಷ್ಠಿತ ಬಾಲನ್‌ ಡಿ’ಓರ್‌ ಪ್ರಶಸ್ತಿ 7ನೇ ಬಾರಿ ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಪಾಲಾಗಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಅರ್ಜೆಂಟೀನಾಗೆ ಮೊದಲ ಬಾರಿಗೆ ಕೋಪಾ ಅಮೆರಿಕ ಟ್ರೋಫಿ ತಂದುಕೊಟ್ಟ ಬಳಿಕ 7ನೇ ಬಾರಿಗೆ ಮೆಸ್ಸಿ ಅವರು ಡಿ’ಓರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಇದನ್ನು ಪುನಃ ಕೇಳಲು ಅದ್ಭುತವೆನಿಸುತ್ತಿದೆ. ಎರಡು ವರ್ಷಗಳ ಹಿಂದೆ ಸಿಕ್ಕಿದ ಪ್ರಶಸ್ತಿಯೇ ಕೊನೆ ಎಂದುಕೊಂಡಿದ್ದೆ. ಕೋಪಾ ಅಮೆರಿಕವನ್ನು ಗೆದ್ದಿದ್ದು ಪ್ರಮುಖವಾಯಿತು’ ಎಂದು ಮೆಸ್ಸಿ ಪ್ಯಾರಿಸ್‌ನ ಥಿಯೇಟರ್‌ ಡು ಚಟೆಲೆಟ್‌ನಲ್ಲಿ ಹೇಳಿದ್ದಾರೆ.

ಫ್ರಾನ್ಸ್‌ ಫುಟ್ಬಾಲ್‌ ನಿಯತಕಾಲಿಕೆ ನೀಡುವ ಬಾಲನ್‌ ಡಿ’ಓರ್‌ ಪ್ರಶಸ್ತಿಯನ್ನು ಮೆಸ್ಸಿ ಅವರು 2009, 2010, 2011, 2012, 2015 ಮತ್ತು 2019ರಲ್ಲಿ ವಿಜೇತರಾಗಿದ್ದರು.

7ನೇ ಬಾರಿ ಪ್ರಶಸ್ತಿ ವಿಜೇತರಾದ ಮೆಸ್ಸಿ ಲೆಜೆಂಡ್ ಗಳಾದ ರಾಬರ್ಟ್‌ ಲೆವಂಡೊಸ್ಕಿ ಮತ್ತು ಜಾರ್ಗಿನ್‌ಹೊ ಅವರನ್ನು ಹಿಂದಿಕ್ಕಿದ್ದಾರೆ.

Related posts

8 ವರ್ಷದಲ್ಲಿ 6 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ

eNewsLand Team

ಐಪಿಎಲ್; ತಮ್ಮ ಟೀಂನಲ್ಲಿ ಉಳಿದು ಕೊಂಡವರಾರು?

eNewsLand Team

ಈ ಪ್ರಶಸ್ತಿ ಪಡೆದ ಮೊದಲ ಭಾರತೀಯೆ ‌ಎನಿಸಿದ ಹರ್ಮನ್ ಪ್ರೀತ್ ಕೌರ್!

eNewsLand Team