27 C
Hubli
ಡಿಸೆಂಬರ್ 7, 2023
eNews Land
ಕ್ರೀಡೆ

ಐಎಸ್ಎಲ್ : ಮುಂಬೈ ಗೋಲ್, ಗೋವಾ ಫೇಲ್!

2 ಗೋಲು ಗಳಿಸಿ ಫಾರ್ಮ್ ಮುಂದುವರಿಸಿದ ಇಗುರ್‌ ಆಂಗುಲೊ | ಐಎಸ್ಎಲ್ ನಲ್ಲಿ ಮೊದಲ ಗೋಲ್ ಬಾರಿಸಿದ ಕಟಾಟೌ |

ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್

ಸ್ಟಾರ್ ಆಟಗಾರ ಇಗುರ್‌ ಆಂಗುಲೊ ಅಧ್ಬುತ ಪ್ರದರ್ಶನ ಹಾಗೂ ಯ್ಗೊರ್ ಕಟಾಟೌ ನೆರವಲ್ಲಿ ಮುಂಬೈ ಸಿಟಿ ಎಫ್ ಸಿ 3-0 ಅಂತರದಲ್ಲಿ ಎಫ್ ಸಿ ಗೋವಾ ತಂಡವನ್ನು ಸೋಲಿಸುವ ಮೂಲಕ ತಾನು ಚಾಂಪಿಯನ್ ಎಂಬುದನ್ನು ಎದುರಾಳಿ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿತು.

 

ಕಳೆದ ಐಎಸ್ಎಲ್ ಸೀಸನ್ ನಲ್ಲಿ ಗೋವಾ ಪರ‌ ಅತ್ಯಧಿಕ ಗೋಲು ಗಳಿಸಿ ಚಿನ್ನದ ಬೂಟು ತೊಟ್ಟಿದ್ದ ಸ್ಪಾನಿಷ್ ಆಟಗಾರ ಇಗುರ್‌ ಆಂಗುಲೊ ಕಳೆದುಕೊಂಡಿರುವ ಗೋವಾಕ್ಕೆ ಈ ಸೀಸನ್ನಿನ ಮೊದಲ ಪಂದ್ಯದಲ್ಲಿ ಅವರೇ ದುಬಾರಿಯಾಗಿ ಪರಿಣಮಿಸಿದರು.

ಗೋವಾದ ಫತೊರ್ಡಾ ಪಿಜೆಎನ್ಎಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ತವರು ತಂಡವು ನಿರಾಸೆಯ ಪ್ರದರ್ಶನ ತೋರಿತು.

ಪಂದ್ಯದ 14ನೇ ನಿಮಿಷದಲ್ಲಿ ವಿಘ್ನೇಶ ದಕ್ಷಿಣಮೂರ್ತಿ ಅವರನ್ನು ಗೋಲ್ ಬಾಕ್ಸನಲ್ಲಿ ಲಿಯಾಂಡರ್‌ ಡಿಕುನ್ಹಾ ಬೇಡವಾದ ಟ್ಯಾಕಲ್ ಮಾಡಿ ಬೀಳಿಸಿದರೂ ರೆಫ್ರಿ ‌ಕಣ್ತಪ್ಪಿಂದ‌ ಮುಂಬೈಗೆ‌ ಪೆನಾಲ್ಟಿ ತಪ್ಪಿತು. ವಿಘ್ನೇಶ ಪಾದಕ್ಕೆ ಗಾಯವಾಗಿ ಪಂದ್ಯದಿಂದ ಹೊರಗೆ ಹೋದರು.

32ನೇ ನಿಮಿಷದಲ್ಲಿ ಗೋವಾದ ಇವಾನ್ ಗೊ‌ನ್ಸಾಲೆಸ್ ಗೋಲ್ ಬಾಕ್ಸನಲ್ಲಿ ಮುಂಬೈನ ಕ್ಯಾಸಿಯೊ ಗೇಬ್ರಿಯಲ್ ಅವರನ್ನು ಬೀಳಿಸಿದರು. ಈ ಬಾರಿ ಸಿಕ್ಕ ಪೆನಾಲ್ಟಿ ಕಿಕ್ ಅವಕಾಶವನ್ನು ಸಮರ್ಥವಾಗಿ ಬಳಸಿದ ಇಗುರ್ ಆಂಗುಲೊ (33) ಗೋಲು ಗಳಿಸಿದರು.

ಮುಂದಿನ ಮೂರನೇ ನಿಮಿಷದಲ್ಲಿ (36) ರೈನಿಯರ್ ಫರ್ನಾಂಡೀಸ್ ನೀಡಿದ ಪಾಸನ್ನು ಇನ್ನೊಂದು ಅದ್ಭುತ ಗೋಲಾಗಿ ಪರಿವರ್ತಿಸಿದ ಆಂಗುಲೊ ಮೊದಲಾರ್ಧದ ವೇಳೆಗೆ ತಂಡಕ್ಕೆ 2-0 ಅಂತರದ ಮುನ್ನಡೆ ದೊರಕಿಸಿಕೊಟ್ಟರು.

ದ್ವಿತೀಯಾರ್ಧದಲ್ಲಿ ಗೋವಾ ಚೆಂಡನ್ನು ಉಳಿಸಿಕೊಳ್ಳಲು ಪ್ರಯಾಸ ಪಟ್ಟರೂ ಯಾವುದೇ ಫಲ ನೀಡಲಿಲ್ಲ. ಬದಲಿಗೆ 76ನೇ ನಿಮಿಷದಲ್ಲಿ ಅಹ್ಮದ್ ಜೌಹ್ ಫ್ರೀ ಕಿಕ್ ಮೂಲಕ ನೀಡಿದ ಚೆಂಡನ್ನು ಬ್ರೆಝಿಲ್ ಆಟಗಾರ ಯ್ಗೊರ್ ಕಟಾಟೌ ಸೀದಾ ನೆಟ್ ಒಳಕ್ಕೆ ಸೇರಿಸಿದರು. ಈ ಮೂಲಕ ಐಎಸ್ಎಲ್ ಟೂರ್ನಿಯಲ್ಲಿ ತಮ್ಮ ಮೊದಲ ಗೋಲ್ ಗಳಿಸಿದರು.
ಮುಂದಿನ ‌ಹದಿನಾಲ್ಕು ನಿಮಿಷದಲ್ಲಿ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಾಗದ ಗೋವಾ ‌ಸೋಲಪ್ಪಿತು.

Related posts

ವಿಶ್ವ ಪ್ರೀಮಿಯರ್ 10K RUN ಗೆ ಚಾಲನೆ ನೀಡಿದ: ಸಿಎಂ ಬೊಮ್ಮಾಯಿ

eNEWS LAND Team

ಪ್ರಕಾಶ್ ಪಡುಕೋಣೆಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಜೀವಮಾನ ಸಾಧನೆ ಪ್ರಶಸ್ತಿ

eNewsLand Team

ಶಕ್ತಿಯುತ ಯುವಜನತೆ ದೇಶದ ಭವಿಷ್ಯ : ಸಿಎಂ

eNEWS LAND Team