ಕೆಕೆಆರ್ ವಿರುದ್ಧ ಪ್ರಯಾಸದ ಗೆಲವು ಪಡೆದ ಆರ್‌ಸಿಬಿ
ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್:
ಕುಂಟುತ್ತಾ ಎಡವುತ್ತಾ ಸಾಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪ್ರಯಾಸದ 3 ವಿಕೆಟ್ ಗೆಲವು ಕಂಡಿದೆ. ಇದು ಐಪಿಎಲ್15ನೇ ಸೀಸನ್’ನಲ್ಲಿ ತಾನಾಡಿದ 2ನೇ ಪಂದ್ಯದಲ್ಲಿ ಆರ್’ಸಿಬಿ ಗೆದ್ದು 2ಅಂಕ ಪಡೆದಿದೆ.
ಕೆಕೆಆರ್ ನೀಡಿದ 129ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ನಾಯಕ
ಫಾಫ್ ಡುಪ್ಲೆಸಿಸ್ (5), ಮಾಜಿ ನಾಯಕ ವಿರಾಟ್ ಕೊಹ್ಲಿ (12) ನೆರವಾಗಲಿಲ್ಲ. ಉಮೇಶ್ ಯಾದವ್ ಮೊದಲ ಓವರ್’ನಲ್ಲಿ ಅನುಜ್ ರಾವತ್ ಶೂನ್ಯ ಸಾಧಿಸಿ ಟಾಪ್ ಆರ್ಡರ್ ಕುಸಿತಕ್ಕೆ ಮುಹೂರ್ತ ಇಟ್ಟರು.
17ರನ್ನಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಶೆರ್ಫೇನ್ ರುದರ್‌ಫೋರ್ಡ್ (28) ಹಾಗೂ ಆಲ್‌ರೌಂಡರ್ ಶಬಾಜ್ (27) ಅಹ್ಮದ್ ಊರುಗೋಲಾದರು.
ಇವರು ಔಟಾದ ಬಳಿಕ ದಿನೇಶ್ ಕಾರ್ತಿಕ್(14) ಮತ್ತು ಹರ್ಷಲ್ ಪಟೇಲ್ (10) ಅಜೇಯವಾಗಿ ಉಳಿದು ಇನ್ನೂ 4 ಬಾಲ್ ಇರುವಾಗಲೇ ಗೆಲವಿಗೆ ಕಾರಣರಾದರು.
ಇದನ್ನು ಓದಿ ಹೊಸ ನಾಯಕತ್ವದಲ್ಲಿ ಕಮಾಲ್ ಮಾಡುತ್ತಾ ಆರ್’ಸಿಬಿ??
ಇದಕ್ಕೂ ಮೊದಲು ಕೊಲ್ಕತ್ತ ನೈಟ್ ರೈಡರ್ಸ್ ಆರ್‌ಸಿಬಿ ದಾಳಿಗೆ ತತ್ತರಿಸಿ 128 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಶ್ರೀಲಂಕಾ ಮೂಲದ ಸ್ಪಿನ್ನರ್ ವಹಿಂದು ಹಸರಂಗ, ಹರ್ಷಲ್ ಪಟೇಲ್ ಹಾಗೂ ಆಕಾಶ್ ದೀಪ್ ದಾಳಿಗೆ ಪತರುಗುಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ 18.5 ಓವರ್ ಗಳಿಗೆ ಸರ್ವಪತನ ಕಂಡಿತು.
ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (10), ಅಜಿಂಕ್ಯ ರಹಾನೆ (9), ನಿತಿಶ್ ರಾಣಾ (12),ಎನಿಸಿಕ್ಯರ್ (13) ಸ್ಯಾಮ್ ಬಿಲ್ಲಿಂಗ್ (14), ಆಂಡ್ರೆ ರಸೆಲ್ (25) ಗಳಿಸಿ ಔಟಾಗಿದ್ದರು. 99 ರನ್‌ಗೆ 8 ವಿಕೆಟ್ ಕಳೆದುಕೊಂಡ ಕೆಕೆಆರ್ ಪರ ಉಮೇಶ್ ಯಾದವ್ 18 ರನ್ ಹಾಗೂ ಟಿಮ್ ಸೌಥಿ 10ರನ್‌ಗಳ ಕೊಡುಗೆಯಿಂದ ಕೆಕೆಆರ್ 128 ರನ್ ಗಳಿಸಿತು.
ವಹಿಂದು ಹಸರಂಗ 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದರು. ಹೀಗಾಗಿ ಪಂದ್ಯಶ್ರೇಷ್ಠ ಒಲಿಯಿತು. 11 ರನ್ ನೀಡಿ 2 ವಿಕೆಟ್ ಪಡೆದ ಹರ್ಷಲ್ ಪಟೇಲ್ ಮೊದಲೆರಡು ಓವರ್ ಮೇಡನ್ ಮಾಡಿದ್ದರು. ಸಿರಾಜ್ ಬಳಿಕ ಹರ್ಷಲ್ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಆಗಿದ್ದಾರೆ.