22 C
Hubli
ಸೆಪ್ಟೆಂಬರ್ 11, 2024
eNews Land
ಕ್ರೀಡೆ

8 ವರ್ಷದಲ್ಲಿ 6 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ

ಆತಿಥ್ಯವಹಿಸಲಿರುವ ದೇಶಗಳ ಪಟ್ಟಿ ಪ್ರಕಟ

ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ

2024 ರಿಂದ 2031 ನಡೆಯಲಿರುವ ವಿಶ್ವಕಪ್ (World Cup) ಸೇರಿದಂತೆ ಪ್ರಮುಖ ಟೂರ್ನಿಗಳ ಆತಿಥೇಯ ರಾಷ್ಟ್ರಗಳ ಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ.

2024-2031ರ ಅವಧಿಯಲ್ಲಿ ಒಟ್ಟು 8 ಟೂರ್ನಿಗಳು ನಡೆಯಲಿದ್ದು, ಅದರಲ್ಲಿ ಎರಡು ಏಕದಿನ ವಿಶ್ವಕಪ್, ನಾಲ್ಕು ಟಿ20 ವಿಶ್ವಕಪ್ ಹಾಗೂ ಎರಡು ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಟೂರ್ನಿಯನ್ನು ಆಯೋಜಿಸಲು ಆಯೋಜಿಸಲು ಐಸಿಸಿಯ 11 ಪೂರ್ಣ ಸದಸ್ಯ ರಾಷ್ಟ್ರಗಳು ಮತ್ತು ಮೂರು ಸಹಾಯಕ ಸದಸ್ಯ ರಾಷ್ಟ್ರವನ್ನು ಆಯ್ಕೆ ಮಾಡಲಾಗಿದೆ.

2024 ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜನೆಯಾಗಲಿದೆ

2025ರಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್​ ಟ್ರೋಫಿ ನಡೆಯಲಿದೆ

2026ರ ಟಿ20 ವಿಶ್ವಕಪ್ ಅನ್ನು ಶ್ರೀಲಂಕಾ ಹಾಗೂ ಭಾರತ ಜಂಟಿಯಾಗಿ ಆಯೋಜಿಸಲಿದೆ.

2027ರ ಏಕದಿನ ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ

2028ರ ಟಿ20 ವಿಶ್ವಕಪ್​ ಅನ್ನು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡೆಸಲಾಗುತ್ತದೆ

2029ರ ಚಾಂಪಿಯನ್ಸ್​ ಟ್ರೋಫಿ ಭಾರತದಲ್ಲಿ ನಡೆಯಲಿವೆ.

2030ರ ಟಿ20 ವಿಶ್ವಕಪ್​ಗೆ ಇಂಗ್ಲೆಂಡ್-ಐರ್ಲೆಂಡ್-ಸ್ಕಾಟ್ಲೆಂಡ್ ಆತಿಥ್ಯವಹಿಸಲಿದೆ

2031 ಏಕದಿನ ವಿಶ್ವಕಪ್​ ಅನ್ನು ಭಾರತ ಹಾಗೂ ಬಾಂಗ್ಲಾದೇಶದಲ್ಲಿ ನಡೆಸಲಾಗುತ್ತದೆ.

ಈ ಮೂಲಕ ಐಸಿಸಿ ಮುಂದಿನ ಟೂರ್ನಿಗಳನ್ನು ನೆರೆಹೊರೆ ದೇಶಗಳಲ್ಲಿ ಜಂಟಿಯಾಗಿ ಆಯೋಜಿಸಲು ನಿರ್ಧರಿಸಿದೆ.

2025ರ (ಪಾಕಿಸ್ತಾನ್) ಮತ್ತು 2029ರ (ಭಾರತ) ಚಾಂಪಿಯನ್ಸ್​ ಟ್ರೋಫಿಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಟೂರ್ನಿಗಳು ಜಂಟಿಯಾಗಿ ಆಯೋಜನೆ ಆಗಲಿರುವುದು ವಿಶೇಷ. ಇನ್ನು 2022 ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಇದರ ಬಳಿಕ 2023 ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಈ ಎರಡು ವಿಶ್ವಕಪ್​ ಬಳಿಕ ಎಲ್ಲಾ ವಿಶ್ವಕಪ್​ಗಳಿಗೆ ಎರಡು ಮತ್ತು ಮೂರು ರಾಷ್ಟ್ರಗಳು ಜಂಟಿಯಾಗಿ ಆತಿಥ್ಯ ವಹಿಸಲಿರುವುದು ವಿಶೇಷ.

Related posts

ನ್ಯೂಜಿಲೆಂಡ್ ಗೆಲವು: ಭಾರತದ ಸೆಮಿಸ್ ಪ್ರವೇಶದ ಕನಸು ಭಗ್ನ

eNEWS LAND Team

ವಿಶ್ವ ಪ್ರೀಮಿಯರ್ 10K RUN ಗೆ ಚಾಲನೆ ನೀಡಿದ: ಸಿಎಂ ಬೊಮ್ಮಾಯಿ

eNEWS LAND Team

ರನ್ ಮಷಿನ್ ಹೆಸರಲ್ಲಿದ್ದ ಯಾವ ದಾಖಲೆ ಈಗ ಹಿಟ್ ಮ್ಯಾನ್ ಪಾಲು? ಓದಿ ನೋಡಿ

eNewsLand Team