37 C
Hubli
ಮಾರ್ಚ್ 28, 2024
eNews Land
ಆಧ್ಯಾತ್ಮಿಕ ಸುದ್ದಿ

ಧರ್ಮದ ಚೌಕಟ್ಟನ್ನು ಮೀರಿ ತತ್ವ ಸಾರಿದ ಸಿದ್ದಪ್ಪಜ್ಜ: ಮುಖ್ಯಮಂತ್ರಿ ಬೊಮ್ಮಾಯಿ

ಇಎನ್ಎಲ್ ಹುಬ್ಬಳ್ಳಿ: ಧರ್ಮದ ಚೌಕಟ್ಟನ್ನು ಮೀರಿ ತತ್ವಜ್ಞಾನವನ್ನು ಸಿದ್ದಪ್ಪಜ್ಜ ಸಾರಿದರು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಉಣಕಲ್‍ನ ಶ್ರೀ ಸದ್ಗುರು ಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಇದನ್ನೂ ಓದಿ:ಮುಸ್ಲಿಮರಿಗೆ ಅಂಗಡಿ ವ್ಯಾಪಾರಕ್ಕೆ ಅವಕಾಶವಿಲ್ಲ; ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

ಉಣಕಲ್ ಸಿದ್ಧಪ್ಪ ಒಬ್ಬ ಪವಾಡ ಪುರುಷ. ಸಮಕಾಲೀನರ ಜೊತೆಗೂಡಿ ಸಿದ್ದಾರೂಢ ಗುರುನಾಥ್ ಅವರು, ಧರ್ಮದ ನವಲಗುಂದದ ನಾಗಲಿಂಗಜ್ಜ, ಸಂತ ಶಿಶುನಾಳ ಶರೀಫರು ವಿಶೇಷವಾದ ತತ್ವಜ್ಞಾನವನ್ನು ಪ್ರಚಾರ ಮಾಡಿದರು. ತಮ್ಮ ಪವಾಡಗಳ ಮೂಲಕ ಸತ್ಯ ದರ್ಶನವನ್ನು ಮಾಡಿಸಿದರು. ನಿಜವಾದ ಸತ್ಯದ ಲೋಕ ಕಾಣಲು ಕಲಿಯುಗದಲ್ಲಿ ಕಷ್ಟ. ಹಿಂದೆ ಸತ್ಯ ಯುಗವಿತ್ತು. ಸುಳ್ಳು ಇರಲಿಲ್ಲ. ಸಿದ್ದಪ್ಪಾಜಿಯಂಥವರು ಪವಾಡಗಳ ಮೂಲಕ ಭಕ್ತರಿಗೆ ಸತ್ಯ ದರ್ಶನ ಮಾಡಿಸಿದರು. ಈ ಎಲ್ಲಾ ತತ್ವಜ್ಞಾನಿಗಳು ಧರ್ಮದ ಚೌಕಟ್ಟನ್ನು ಮೀರಿ ತತ್ವಜ್ಞಾನವನ್ನು ಹೇಳಿದರು. ಬದುಕಿನ ವಾಸ್ತವಾಂಶಗಳನ್ನು ತಿಳಿಸಿ ಬದುಕುವ ದಾರಿ ತೋರಿದರು ಎಂದರು.

ಇದನ್ನೂ ಓದಿ:ಹುಬ್ಬಳ್ಳಿ ಎಫ್.ಎಂ.ಜಿ.ಸಿ. ಕ್ಲಸ್ಟರ್ ಸ್ಥಾಪನೆ ವಿಶೇಷ ಪ್ರೋತ್ಸಾಹ; ಬೊಮ್ಮಾಯಿ

ಇವುಗಳ ಒಳ ಮರ್ಮವನ್ನು ನಾವು ತಿಳಿದುಕೊಂಡರೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯನ್ನು ಸುಲಭವಾಗಿಸಲು ಸಾಧ್ಯವಿದೆ. ಸಿದ್ದಾಪ್ಪಾಜಿ ಭಕ್ತರು ಒಳಮರ್ಮವನ್ನು ತಿಳಿದವರು. ಅರಿವನ್ನು ಪಡೆದುಕೊಂಡರೆ ಸತ್ಯವನ್ನು ಕಂಡುಕೊಳ್ಳಲು ಸಾಧ್ಯವೆಂದರು.

ಇದನ್ನೂ ಓದಿ:ಸೈನಿಕನ ಹೆಸರಲ್ಲಿ ನಡೆಯಿತು ಸೈಬರ್ ಕ್ರೈಂ!! ನಿಮಗೂ ಪಂಗನಾಮ ಹಾಕಬಹುದು ಹುಷಾರ್

ದೇವಮಾನವ ಸಿದ್ದಪ್ಪಜ್ಜ
ಮನುಷ್ಯರಾಗಿ ಹುಟ್ಟಿ ಮಾನವನಾಗಿ ಲೋಕವನ್ನು ತ್ಯಜಿಸುವುದು ದೊಡ್ಡದು. ಸಿದ್ದಪ್ಪಾಜಿಯಂಥವರು ಕೇವಲ ಮಾನವರಾಗಿರದೆ ದೇವಮಾನವರಾಗಿದ್ದರು. ಅವರು ನಡೆದ ಹಾದಿಯಲ್ಲಿ ಎರಡು ಹೆಜ್ಜೆಗಳನ್ನು ನಡೆದರೂ ನಮ್ಮ ಜೀವನ ಸಾರ್ಥಕವಾಗುತ್ತದೆ. ಅಂಥ ಅರಿವು ನೀಡುವುದೇ ಈ ಜಾತ್ರಾ ಮಹೋತ್ಸವದ ನಿಜವಾದ ಅರ್ಥ. ಸಿದ್ದಪ್ಪ ಅವರ ಜಾತ್ರೆ ಅರಿವಿನ ಜಾತ್ರೆ. ಅರಿವಿನ ಜಾತ್ರೆ ನಿರಂತರವಾಗಿ ನಡೆದು, ಅರಿವುಳ್ಳ ಜನರಿಗೆ ಸಿದ್ದಪ್ಪ ಅವರ ಆಚಾರ ವಿಚಾರ, ತತ್ವ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಸ್ವಾಮಿ ವಿವೇಕಾನಂದರು ಹೇಳುವಂತೆ “ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ” . ಸಿದ್ದಪ್ಪಜ್ಜ ಅಂಥ ಸಾಧಕ. ನಗರಗಳಿಗೆ ಹತ್ತಿರವಿರುವ ಊರುಗಳು ವ್ಯಾಪಾರೀಕರಣಗೊಂಡಿವೆ. ಹುಬ್ಬಳ್ಳಿಯ ಕಾರ್ಪೊರೇಷನ್ ಗೆ ಸೇರಿ 50 ವರ್ಷಗಳಾಗಿದ್ದರೂ ಹಳ್ಳಿಯ ಸಂಸ್ಕೃತಿ, ಸಂಬಂಧ , ಸೊಗಡನ್ನು ಉಣಕಲ್ಲು, ಬೆಂಗೇರಿ,ಹಾಗೂ ಸುತ್ತಮುತ್ತಲಿನ ಗ್ರಾಮಗಳು ಉಳಿಸಿಕೊಂಡಿವೆ ಎಂದರು.

ಇದನ್ನೂ ಓದಿ:ಕಡಿಮೆ ವೆಚ್ಚ, ತ್ವರಿತ ಗತಿಯಲ್ಲಿ ನ್ಯಾಯದಾನವಾಗಬೇಕು: ರಾಜ್ಯಪಾಲ ಗೆಹ್ಲೋತ್

Related posts

ಹುಬ್ಬಳ್ಳಿ: ಪುನೀತ್ ರಾಜ್‍ಕುಮಾರಗೆ ಶ್ರದ್ಧಾಂಜಲಿ ಸಲ್ಲಿಸಲು 500ಕಿಮೀ ಓಡುತ್ತಿರುವ ದ್ರಾಕ್ಷಾಯಿಣಿ!

eNewsLand Team

ಪುರಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಟಿಕೇಟ ಆಕಾಂಕ್ಷೆಗೆ ಅಭ್ಯರ್ಥಿಗಳ ಪೈಪೋಟಿ

eNEWS LAND Team

ಲೋಕಸಭೆ ಚುನಾವಣೆಗೆ ಪೂರಕವಾಗಿ ರಾಜ್ಯದಲ್ಲಿ ಬಿಜೆಪಿಗೆ ಜನಾದೇಶ: ಡಾ.ಕೆ.ಸುಧಾಕರ್

eNEWS LAND Team