34 C
Hubli
ಮಾರ್ಚ್ 23, 2023
eNews Land
ಆಧ್ಯಾತ್ಮಿಕ

ಶ್ರೀ ಸದ್ಗುರು ಸಿದ್ಧಾರೂಢರ ಮಂಗಳಾರತಿ ಹಾಗೂ ಸ್ತುತಿ

Listen to this article

ಶ್ರೀ ಸದ್ಗುರು ಸಿದ್ಧಾರೂಢರ ಸ್ತುತಿ

ಚಿದಂಬರ ಮಠಾಧೀಶಂ ಸಿದ್ಧಾರೂಢ ಯತೀಶ್ವರಂ |
ಶಿಷ್ಯ ಪ್ರಶಿಷ್ಯರೂಪೇಣ ಬೋಧಕಂ ಗುರುಮಾಶ್ರಯೆ ||

ಯದಂಘ್ರಿ ಕಮಲದ್ವಂದ್ವಂ ತಾಪತ್ರಯ ನಿವಾರಣಂ |
ಶಾಂತೈಕ್ಯ ಪದದಂ ದೇವಂ ಸಿದ್ಧಾರೂಢಮಹಂ ಭಜೆ ||

ಸಿದ್ಧ ಸದ್ಗುರು ಪಾದಾಬ್ಜಂ ಜನನೀ ಜನಕತಥಾ |
ತತ್ವೋಪದೇಶ ಕರ್ತಾರಂ ನತ್ವಾ ಭಕ್ತಿ: ಪುರಸ್ಸರಂ ||

ಸಚ್ಚಿದಾನಂದ ನಿರ್ದೋಷಂ ಭಕ್ತಾನಾಮಾಧಿಕಾರಣಂ |
ಭವತಾಪ ವಿನಾಶಾರ್ಥo ಸಿದ್ಧಾರೂಢಂ ನಮಾಮ್ಯಹಂ ||

ಜ್ಞಾನಸಿದ್ಧಂ ತಪಸ್ಸಿದ್ದಂ ಸರ್ವಸಿದ್ಧಂ ಶಿವಪ್ರದಂ |
ಸ್ವಯಂ ಸಿದ್ಧ ಮಹಂ ವಂದೇ ಸಿದ್ಧಾರೂಢ ಯತೀಶ್ವರಂ ||


ಶ್ರೀ ಸದ್ಗುರು ಸಿದ್ಧಾರೂಢರ ಮಂಗಳಾರತಿ

ಗುರುರಾಜ ಸಿದ್ದಾರೂಢ ಸಮರ್ಥ |ಬೆಳಗುವೆ ಆರತಿಯಾ |
ಗುರುವರಾ ಬೆಳಗುವೆನು ಆರತಿಯಾ || ಪ ||

ಮೋಕ್ಷಾಪೇಕ್ಷೆಗೆ ತತ್ವಂ ಪದದ |
ಅರ್ಥವ ಬೋಧಿಸಿದೀ |
ಗುರುವರಾ ಅರ್ಥವ ಬೋಧಿಸಿದೀ ||

ಉಕ್ಷಾವಾಹನ ಶಂಕರ ನಾಮೋ |
ಚ್ಚಾರವ ಮಾಡಿಸಿದೀ ||
ಗುರುವರಾ ಉಚ್ಚಾರವ ಮಾಡಿಸಿದೀ || 1 ||

ಶ್ಯಾಮಧಾಮ ಶ್ರೀರಾಮ ಭಿನ್ನ |
ಶಂಕರ ನೀನಿರುವಿ
ಗುರುವರಾ ಶಂಕರ ನೀನಿರುವಿ ||

ಕಾಮಾ ಕ್ರೋಧವನಾಶಿಸಿ ಜಗದೊಳು |
ಶಾಂತಿಯ ಬೀರೀದಿ |
ಗುರುವರಾ ಶಾಂತಿಯ ಬೀರೀದೀ | 2 ||

ಚರಣ ಭಜಕರಾ ದುರಿತ ವೃಂದವಾ | ತ್ವರಿತದಿ ನಾಶಿಸಿದೀ ||
ಗುರುವರಾ ತ್ವರಿತದಿ ನಾಶಿಸಿದೀ |

ವರಭ್ರೂಲತಾಪುರ ದೈವದಿಂದಲಿ | ನಿರುತದಿ ವಾಸಿಸಿದೀ ||
ಗುರುವರಾ ನಿರುತದಿ ವಾಸಿಸಿದೀ || 3 ||

ಗುರುರಾಜ ಸಿದ್ಧಾರೂಢ ಸಮರ್ಥ | ಬೆಳಗುವೆನು ಆರತಿಯಾ |
ಗುರುವರಾ ಬೆಳಗುವೆನು ಆರತಿಯಾ ||ಪ||

Related posts

ಅಂಗಾರಕ ಸಂಕಷ್ಠಿ ಪ್ರಯುಕ್ತ ಅಕ್ಕಿಹೊಂಡದ ಶ್ರೀ ಗಣೇಶನ ಅಲಂಕಾರ

eNEWS LAND Team

ವಿಜಯದಶಮಿ , ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು

eNEWS LAND Team

ಅಂತರoಗದ ಪೂಜೆ, ಬಹಿರಂಗದ ವ್ಯವಹಾರದಲ್ಲಿ ವ್ಯಕ್ತವಾಗಬೇಕು.

eNEWS LAND Team