26 C
Hubli
ಮೇ 25, 2024
eNews Land
ಆಧ್ಯಾತ್ಮಿಕ ರಾಜ್ಯ

ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರ

ಇಎನ್ಎಲ್ ವಿಜಯಪುರ:
ಸಿದ್ದೇಶ್ವರ ಸ್ಚಾಮೀಜಿ‌ ಆರೋಗ್ಯ ಸ್ಥಿರವಾಗಿದೆ ಎಂದು
ಸುತ್ತೂರು ಸ್ವಾಮೀಜಿ ಹೇಳಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಪಲ್ಸ್ ರೇಟ್ ,ವಬಿಪಿ ನಾರ್ಮಲ್ ಇದೆ. ಅವರು ಆಹಾರ ಹೆಚ್ಚಿಗೆ ತೆಗೆದುಕೊಳ್ಳುತ್ತಿಲ್ಲ. ಆರೋಗ್ಯದಲ್ಲಿ ಸುಧಾರಣೆಯಾಗಲು ಪಂಡಿತರ ಜೊತೆಗೆ ಚರ್ಚೆ ಮಾಡಲಾಗಿದೆ.ಆರೋಗ್ಯ ಸ್ಥಿರ ಊಹಾಪೂಹ ಬೇಡ. ಡಿಸಿ ಎಸ್ಪಿ ಓಡಾಟ ಗಾಬರಿ ಬೇಡ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ಓಡಾಡುತ್ತಿದ್ದಾರೆ.

ಪ್ರಧಾನಿ ಮೋದಿ ಅವರೂ ಸಹ ಸ್ಚಾಮೀಜಿಗಳ ಜೊತೆ ಮಾತನಾಡಿದ್ದಾರೆ. ಸ್ವಮೀಜಿ ದರ್ಶನ ಆಗಿದೆ ಎಂದು ಸಿಎಂ ಖುಷಿ ಪಟ್ಟರು. ಹೆಚ್ಚಿನ ಚಿಕಿತ್ಸೆಗೆ ಅವರು ಒಪ್ಪುತ್ತಿಲ್ಲ.ಆಹಾರ ಸ್ವೀಕರಿಸುತ್ತಿಲ್ಲ. ಪೌಷ್ಟಿಕ ಆಹಾರ ಇಲ್ಲದ ಕಾರಣ ಅಶಕ್ತರಾಗಿದ್ದಾರೆ ಎಂದರು.

ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರೋ ಡಾ ಮಲ್ಲಣ್ಣ ಮೂಲಿಮನಿ ಮಾತನಾಡಿ, ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಬೆಳಗ್ಗೆಯಿಂದ ನಾರ್ಮಲ್ ಇದ್ದಾರೆ. ಪಲ್ಸ್, ಬಿಪಿ, ಉಸಿರಾಟ ಸಹಜವಾಗಿದೆ
ಸ್ವಾಮೀಜಿ. ಗಂಜಿ‌ ಕುಡಿದಿದ್ದಾರೆ. ನಿನ್ನೆ ಆಕ್ಸಿಜನ್ ಕಡಿಮೆಯಾಗಿತ್ತು. ಈಗ ನಾರ್ಮಲ್ ಇದೆ. ಕಳೆದ ಕೆಲ ದಿನಗಳಿಂದ ಊಟ ಮಾಡಿಲ್ಲ. ಕಾರಣ ಅವರು ಹೊರಗೆ ಬರಲಾಗುತ್ತಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ ಮಹಾಂತೇಶ ದಾನಮ್ಮನವರ ಮಾತನಾಡಿ,
ಸಿಎಂ ನಿರ್ದೇಶನದ ಮೇರೆಗೆ ಬಂದಿದ್ದೇವೆ.
ನಿನ್ನೆ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದರ್ಶನ ಮಾಡಿದ್ದಾರೆ. ಅವರ ಸೂಚನೆ ಮೇರೆಗೆ ನಾವು ‌ನಿತ್ಯ ಭೇಟಿ ಮಾಡುತ್ತಿದ್ದೇವೆ. ಶ್ರೀಗಳ‌ ಆರೋಗ್ಯದ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಸೂಚನೆ ಇದೆ. ಕೆಲ ಮಾದ್ಯಮದಲ್ಲಿ ತಪ್ಪು ಸಂದೇಶ ಬಂದಿದೆ
ತಪ್ಪು ಸಂದೇಶ ಬೇಡ. ವೈದ್ಯರು ಹೆಲ್ತ್ ಬುಲೆಟಿನ್ ನೀಡುತ್ತಾರೆ. ಶ್ರೀಗಳು ಊಟ ಮಾಡದ ಕಾರಣ ಅಶಕ್ತಿ ಇದೆ
ಭಕ್ತರು ಸಹಕಾರ ನೀಡಬೇಕು ಎಂದರು.

Related posts

ಮೇ 10ರಂದು ವಿಧಾನಸಭೆ ಚುನಾವಣೆ

eNEWS LAND Team

ಲೋಚನೇಶ್ವರ ಶ್ರೀಗಳು ಲಿಂಗೈಕ್ಯ ಶೋಕದಲ್ಲಿ ಭಕ್ತ ಜನತೆ

eNewsLand Team

ಮಹಾರಾಷ್ಟ್ರ ಕರ್ನಾಟಕದೊಳಗೆ ಬರಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ

eNewsLand Team