28 C
Hubli
ಫೆಬ್ರವರಿ 3, 2023
eNews Land
ಆಧ್ಯಾತ್ಮಿಕ

ಸೈನಿಕ ಶಾಲೆ ಆವರಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ದರ್ಶನ

Listen to this article

ಇಎನ್ಎಲ್ ವಿಜಯಪುರ

ನಗರದ ಸೈನಿಕ ಶಾಲೆ ಆವರಣದಲ್ಲಿ ಭಕ್ತಾದಿಗಳಿಗೆ‌ ಸಿದ್ದೇಶ್ವರ  ಪೂಜ್ಯರ ದರ್ಶನಕ್ಕಾಗಿ  ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದಲೂ ಭಕ್ತರ ಪ್ರವಾಹ ಹರಿದು‌ ಬರುತ್ತಿದೆ.

ಭಕ್ತಾದಿಗಳ ಅನುಕೂಲಕ್ಕಾಗಿ ಸೈನಿಕ ಶಾಲೆಯ ಆವರಣದ ಇಕ್ಕೆಲೆಗಳಲ್ಲಿ ವಿಶಾಲ ಎಲ್‌ಇಡಿ ಪರದೆಗಳನ್ನು  ಅಳವಡಿಸಿ, ಜಿಲ್ಲಾಡಳಿತವು ಅಚ್ಚುಕಟ್ಟಾಗಿ ಪೂಜ್ಯರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ.

ದರ್ಶನಕ್ಕೆ ಆಗಮಿಸಿದ ಭಕ್ತರು ಶ್ರೀಗಳನ್ನು ಸ್ಮರಿಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅವರ ಉಪನ್ಯಾಸ, ಸಂದೇಶಗಳನ್ನು ನೆನೆದು ಭಾವುಕರಾಗುತ್ತಿದ್ದಾರೆ.

ಜೊತೆಗೆ ಲಕ್ಷಾಂತರ ಭಕ್ರರಿಗಾಗಿ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನೂಕು ನುಗ್ಗಲು ಆಗದಂತೆ ಬ್ಯಾರಿಕೆಡ್ ಅಳವಡಿಸಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ.

 

Related posts

ನರಕಾಸುರ ದಹನಕ್ಕೆ ಕ್ಷಣಗಣನೆ

eNEWS LAND Team

ಕಾಮಧೇನು ಭಕ್ತಿ ಭಾವದತ್ತ…

eNEWS LAND Team

ಇಂದು ವೈಕುಂಠ ಏಕಾದಶಿ; ರಾಜ್ಯಾದ್ಯಂತ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ

eNewsLand Team