22 C
Hubli
ಡಿಸೆಂಬರ್ 7, 2023
eNews Land
ಆಧ್ಯಾತ್ಮಿಕ

ಅಗ್ನಿಸ್ಪರ್ಷಕ್ಕೆ ಸಿದ್ಧತೆ: ಕಟ್ಟಕಡೆಯ ಭಕ್ತನಿಗೂ ಸಿದ್ಧೇಶ್ವರರ ದರ್ಶನ

ಇಎನ್ಎಲ್ ವಿಜಯಪುರ

ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳ ಪ್ರಾರ್ಥಿವ ಶರೀರಕ್ಕೆ, ಶ್ರೀಗಂಧದ ಕಟ್ಟಿಗೆಯಿಂದ ಅಗ್ನಿ ಸ್ಪರ್ಶಕ್ಕೆ ಸಿದ್ಧತೆ ನಡೆದಿದ್ದು, ಈ ನಡುವೆ ಶ್ರೀಗಳ ದರ್ಶನಕ್ಕೆ ಬರುವ ಕಟ್ಟಕಡೆಯ ಭಕ್ತನಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಕನ್ನೇರಿಮಠದ ಸ್ವಾಮೀಜಿ ತಿಳಿಸಿದ್ದಾರೆ.

ನಡೆದಾಡುವ ದೇವರಾದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ ಹಿನ್ನೆಲೆ ಶ್ರೀಗಂಧದ ಕಟ್ಟಿಗೆಯಿಂದ ಅಗ್ನಿ ಸ್ಪರ್ಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ.
ನಗರದ ಜ್ಞಾನಯೋಗಾಶ್ರಮದಲ್ಲಿ ಶ್ರೀಗಳ ಪ್ರಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶಕ್ಕೆ ಸಿದ್ಧತೆ ಮಾಡಲಾಗುತ್ತಿದ್ದು, ಅಂತ್ಯ ಸಂಸ್ಕಾರದ ವೇಳೆ 1ಸಾವಿರ ಜನರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಹುಲ್ಯಾಳದಲ್ಲಿ ಬೆಳೆದಿದ್ದ ಶ್ರೀಗಂಧದ ಕಟ್ಟಿಗೆಯನ್ನು ಆಶ್ರಮಕ್ಕೆ ತರಲಾಗಿದೆ.
ಬಾಗಲಕೋಟೆಯ ಹುಲ್ಯಾಳದ ಗುರುದೇವ ಆಶ್ರಮದ ಶ್ರೀಗಳ ಶಿಷ್ಯ ಹರ್ಷಾನಂದ ಮಹಾಸ್ವಾಮಿಗಳ ಆಶ್ರಮದಲ್ಲಿ ಬೆಳೆದಿದ್ದ ಶ್ರೀಗಂಧ ಕಟ್ಟಿಗೆ ತರಲಾಗಿದೆ. ಬಸವಲಿಂಗ ಸ್ವಾಮೀಜಿಯವರು ಅಗ್ನಿ ಸ್ಪರ್ಶ ನೆರವೇರಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Related posts

ಬಸವಣ್ಣನವರ ಚಿಂತನೆಗಳಲ್ಲಿ ಜಗತ್ತಿನ ಅನಿಷ್ಟಗಳನ್ನು ಹೊಗಲಾಡಿಸುವ ಶಕ್ತಿಯಿದೆ

eNEWS LAND Team

ಇಎನ್ಎಲ್ ದಿನ ಪಂಚಾಂಗ

eNewsLand Team

ಶ್ರೀಕೃಷ್ಣಮಠಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ

eNewsLand Team