33 C
Hubli
ಏಪ್ರಿಲ್ 25, 2024
eNews Land
ಆಧ್ಯಾತ್ಮಿಕ

ಬಸವಣ್ಣನವರ ಚಿಂತನೆಗಳಲ್ಲಿ ಜಗತ್ತಿನ ಅನಿಷ್ಟಗಳನ್ನು ಹೊಗಲಾಡಿಸುವ ಶಕ್ತಿಯಿದೆ

ಇಎನ್‌ಎಲ್ ಅಣ್ಣಿಗೇರಿ: ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಆಶೀರ್ವಚನದ ಬೀಜದಲ್ಲಿ ಅಡಗಿದ ಮಹಾಶಕ್ತಿಯು ನೆಲ-ಜಲಗಳ ಸಂಯೋಗದಿoದ

 ಇದನ್ನೂ ಓದಿ:ಅರಿದೊಡೆ ಶರಣ : ಮರೆದೊಡೆ ಮಾನವ

 ಕಾಲಕರ್ಮಗಳ ಸಹಕಾರದಿಂದ, ಫಲದಾಯಕವಾದ ಮಹಾವೃಕ್ಷವಾಗಿ ಪರಿಣಮಿಸುವಂತೆ ಲಿಂ.ಮೃತ್ಯುಂಜಯ ಶ್ರೀಗಳು ಅನ್ನದಾನೇಶ್ವರ ಶ್ರೀಗಳ ಅನುಗ್ರಹದಿಂದ ಭಕ್ತರ ನಲ್ಮೆಯಿಂದ ಭಕ್ತಸಮೂಹಕ್ಕೆ ಸಮಾಜದ ಅಂಗಕ್ಕೆ ಭಕ್ತಿಯ ನೆಳಲನ್ನು, ಆತ್ಮಕ್ಕೆ ಸುಜ್ಞಾನದ ಶಾಂತಿಯನ್ನು ಇತ್ತು, ಜ್ಞಾನ, ಭಕ್ತಿ, ಅನ್ನದಾಸೋಹ, ಕಲೆ, ಸಾಹಿತ್ಯ, ಸಂಗೀತ, ಪ್ರವಚನ, ಧಾರ್ಮಿಕ ಗೋಷ್ಠಿ, ಧರ್ಮ ಚಿಂತನ, ಕ್ರಿಯಾಜ್ಞಾನಾತ್ಮಕವಾದ ಶಿವಾನುಭವವೆಂಬ ಮಹಾವೃಕ್ಷವಾಗಿ ನಿಲ್ಲಿಸುವಲ್ಲಿ ಅಭಿನವ ಮೃತ್ಯುಂಜಯ ಶ್ರೀಗಳು ಅಜ್ಜನ ಸಂಭ್ರಮದಲ್ಲಿ ಕೈಗೊಳ್ಳುತ್ತಿರೋದು ಶ್ಲಾಘನೀಯವೆಂದು ನುಡಿದರು.

ಇದನ್ನೂ ಓದಿ:ಸರಿಯಾದ ಮಾರ್ಗದಲ್ಲಿ ನಡೆಯೋದು ಯೋಗ: ವಚನಾನಂದಶ್ರೀ

ತಾಲೂಕಿನ ಮಣಕವಾಡ ಗ್ರಾಮದ ಅಜ್ಜನ ಸಂಭ್ರಮದ ಎಳನೇ ದಿನದ ಪುರಾಣ ಮಂಗಲೋತ್ಸವ ಹಾಗೂ ಧರ್ಮಚಿಂತನ ಗೋಷ್ಠಿ ಸಮಾರಂಭದಲ್ಲಿ ಮಾತನಾಡಿದರು.
ಅಡಿಹಂದಿಗುoದ ಸಿದ್ಧೇಶ್ವರಮಠದ ಶಿವಾನಂದ ಶ್ರೀ ಆಶೀರ್ವಚನದಲ್ಲಿ ಬಸವಣ್ಣನವರ ವೈಚಾರಿಕ ದೃಷ್ಟಿ, ಬೌದ್ಧಿಕ ವಿಕಾಸಕ್ಕೆ ಧಾರ್ಮಿಕ ಸ್ವಾತಂತ್ರ್ಯಕ್ಕೆ , ಅಧ್ಯಾತ್ಮಿಕ ಪ್ರಗತಿಗೆ ಅದು ತಳಹದಿಯಾಗಿದೆ. ಅದನ್ನು ಅರಿತು ಆಚರಿಸುವ ನೈತಿಕನಿಷ್ಠೆ ಮತ್ತು ಹೃದಹಶುದ್ಧಿಯಿಂದ ಬಸವಣ್ಣ ನಡೆದುದೇ ಮಾರ್ಗವಾಯಿತು. ನುಡಿದುದೆಲ್ಲಾ ಧರ್ಮವಾಯಿತು.

ಇದನ್ನೂ ಓದಿ:ಮಾಡುವಂತಿರಬೇಕು ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.

ಕಾಲದೇಶಗಳ ಪರಿಮಿತ ಬಂಧನವನ್ನು ಮೀರಿ ಮಾನವ ಜನಾಂಗ ಬೆಳೆದಂತೆ ತಾನೂ ಬೆಳೆಯುವ ಯುಗ ಪ್ರವರ್ತಕ ಶಕ್ತಿಯಾಯಿತು. ಆ ಹಿನ್ನಲೆಯಲ್ಲಿ ಅಜ್ಜನ ಸಂಭ್ರಮದ ಲಿಂ.ಮೃತ್ಯುಂಜಯ ಶ್ರೀಗಳು ತಪಸ್ವಿಗಳು, ಪವಾಡಪುರಷರು, ಈ ಕ್ಷೇತ್ರ ಪಾವನಗೊಳಿಸಿ ಮಠದ ಸದ್ಭಕ್ತರ ಹೃದಯದಲ್ಲಿ ನೆಲಿಸಿ, ಭಕ್ತಿ, ಜ್ಞಾನ, ಅನ್ನದಾಸೋಹ ನೀಡಿ ಭಕ್ತರ ಕಷ್ಟಕಾರ್ಪಣ್ಯ ಪರಿಹರಿಸಿ, ಕಾಮಧೇನುವಾಗಿದ್ದಾರೆ ಎಂದರು.

ಇದನ್ನೂ ಓದಿ:ಅಂತರoಗದ ಪೂಜೆ, ಬಹಿರಂಗದ ವ್ಯವಹಾರದಲ್ಲಿ ವ್ಯಕ್ತವಾಗಬೇಕು.

ಹೊಸದುರ್ಗ ಕುಂಚಟಗಿ ಮಹಾಸಂಸ್ಥಾನಮಠದ ಶಾಂತವೀರ ಶ್ರೀಗಳು ಆಶೀರ್ವಚನದಲ್ಲಿ ಲಿಂಗಭೇದ, ವರ್ಣಭೇದ, ವರ್ಗಬೇಧ ಇಂದಿನ ಜಗತ್ತಿನಲ್ಲಿ ದೊಡ್ಡ ಸವಾಲುಗಳಾಗಿವೆ. ಭಯೋತ್ಪಾದನೆ, ಜನಾಂಗಹತ್ಯೆ, ಯುದ್ಧ, ನಿರುದ್ಯೋಗ, ಆರ್ಥಿಕ ಹಿಂಜರಿತ, ಕೊಲೆ ಸುಲಿಗೆ ಅತ್ಯಾಚಾರ, ಹಸಿವು, ಬಡತನ, ಮಾನಸಿಕ ಒತ್ತಡ, ಪರಿಸರ ಸಮಸ್ಯೆಗಳು ವಿಶ್ವವನ್ನೇ ಕಾಡುತಿವೆ. ಜನಾಂಗ ದೇಶ ನಡುವೆ ಅಪನಂಬಿಕೆ ಹೆಚ್ಚುತ್ತಿವೆ. ಧರ್ಮದ ಮಾನವೀಯ ಮೌಲ್ಯಗಳು ಎಲ್ಲಾ ಜನಾಂಗಗಳಲ್ಲಿ ಪ್ರೇಮಭಾವವು ಕುಂಠಿತಗೊoಡು ದ್ವೇಷ ಬೆಳೆದು ವಿಷಮ ಪರಿಸ್ಥಿತಿಯಲ್ಲಿ ವಿಶ್ವಮಾನ್ಯವಾದ ಬಸವಣ್ಣನವರ ಚಿಂತನೆಗಳು, ಜಗತ್ತನ್ನು ಅನಿಷ್ಟಗಳಿಂದ ಮುಕ್ತಗೊಳಿಸುವ ಶಕ್ತಿಯನ್ನು ಹೊಂದಿವೆ. ಆ ಹಿನ್ನಲೆಯಲ್ಲಿ ಅಜ್ಜನ ಸಂಭ್ರಮದಲ್ಲಿ ಪಾಲ್ಗೊಂಡ ಭಕ್ತ ಸಮೂಹ ಮೃತ್ಯುಂಜಯ ಶ್ರೀಗಳ ಅಧ್ಯಾತ್ಮ ಶಕ್ತಿಯಿಂದ ಸದ್ಗತಿ ಪಡೆಯುವ ಜ್ಞಾನ ಭಕ್ತಿ ಮಾರ್ಗವನ್ನು ಪಡೆಯುತ್ತಿರೋದು ಶ್ಲಾಘನೀಯವೆಂದು ಹೇಳಿದರು.

ಇದನ್ನೂ ಓದಿ:ಶರಣ ಧರ್ಮದ-ಲಿಂಗಾಯತ ಧರ್ಮದ ತಿರುಳು: ವ್ಯಕ್ತಿಯ ನೈತಿಕ ಬದುಕಿನ ಹುರುಳು
ಸಾನಿಧ್ಯವಹಿಸಿದ್ದ ಅಭಿನವ ಮೃತ್ಯುಂಜಯ ಶ್ರೀ ಆಶೀರ್ವಚನ ನೀಡಿದರು. ವಿಧಾನಪರಿಷತ್ ಸದಸ್ಯ ಸಲೀಮ್ ಅಹ್ಮದ್, ರಾಜಶೇಖರ ಮೆಣಸಿನಕಾಯಿ, ವಿನೋದ ಅಸೂಟಿ, ಅಜ್ಜಪ್ಪ ಸೊಗಲದ ವಿಶ್ವನಾಥ ಹಿರೇಮಠ, ಮಂಜುನಾಥ ಹರ್ಲಾಪೂರ, ಅಪ್ಪಣ್ಣ ಇನಾಮತಿ, ಎನ್.ಎಚ್.ಕೋನರಡ್ಡಿ, ಶಿವಾನಂದ ಕರಿಗಾರ, ಉಪಸ್ಥಿತರಿದ್ದರು.

ಇದನ್ನೂ ಓದಿ:ಧರ್ಮದ  ಮಾನವೀಯ ಮೌಲ್ಯಗಳೇ ಸಮಾಜಕ್ಕೆ ಪೂರಕ: ಬಸವಲಿಂಗ ಶ್ರೀಗಳು

ಇದನ್ನೂ ಓದಿ:

ಶಿಕ್ಷಣ ಪ್ರೇಮಿ ಅಮೃತಹೃದಯಿ ರಾವಸಾಹೇಬ ಅಭಿನಂದನಾ ಗ್ರಂಥ ಬಿಡುಗಡೆ

Related posts

ಹಿರೇಹೊನ್ನಿಹಳ್ಳಿ ಗ್ರಾಮದ ಬಸವತತ್ವ ಲಿಂಗಾನುಭವಿ ಶರಣರ ಬಳಗದಿಂದ ಪ್ರವಚನ ಮುಕ್ತಾಯ

eNEWS LAND Team

ಸೈನಿಕ ಶಾಲೆ ಆವರಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ದರ್ಶನ

eNewsLand Team

ಇಲ್ಲಿ ಗಣಪಗೆ ಕಡಲೆಕಾಯಿ ಅಭಿಷೇಕ!!

eNewsLand Team