27 C
Hubli
ಏಪ್ರಿಲ್ 20, 2024
eNews Land
ಆಧ್ಯಾತ್ಮಿಕ

ಲೋಚನೇಶ್ವರ ಶ್ರೀಗಳು ಲಿಂಗೈಕ್ಯ ಶೋಕದಲ್ಲಿ ಭಕ್ತ ಜನತೆ

ಇಎನ್ಎಲ್ ಕುಂದಗೋಳ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಲೋಚನೇಶ್ವರ ಮಠದ 5ನೇ ಪೀಠಾಧಿಪತಿ ರಾಚೋಟೇಶ್ವರ ಶ್ರೀಗಳು ತಮ್ಮ 103ನೇ ವಯಸ್ಸಿನಲ್ಲಿ ಲೋಚನೇಶ್ವರ ಮಠದಲ್ಲೇ ಗುರುವಾರ ಬೆಳಗ್ಗೆ ನಾಲ್ಕು ಗಂಟೆಗೆ ಲಿಂಗೈಕ್ಯರಾಗಿದ್ದಾರೆ.

ಸರಿ ಸುಮಾರು 200 ವರ್ಷ ಇತಿಹಾಸದ ಕುಂದಗೋಳ ತಾಲೂಕಷ್ಟೇ ಅಲ್ಲದೇ ರಾಜ್ಯಾದ್ಯಂತ ಭಕ್ತರನ್ನು ಹೊಂದಿದ್ದ ಸ್ವಾಮಿಗಳು ತಮ್ಮ ಪ್ರವಚನ ಹಾಗೂ ಮಾತಿನ ಶೈಲಿಯಿಂದಲೇ ಹೆಸರಾಗಿದ್ದರು.
2019ರಲ್ಲಿ ಲೋಚನೇಶ್ವರ ಮಠಕ್ಕೆ ರಾಚೋಟೇಶ್ವರ ದೇವರನ್ನು ಸರ್ವ ಸ್ವಾಮಿಗಳ ನೇತೃತ್ವದಲ್ಲಿ ಪೀಠಾಧಿಕಾರ ಮಾಡಿ ಮಠದ ಏಳ್ಗೆಗೆ ಚಿಂತನೆ ಮಾಡಿದ್ದರು, ಲೋಚನೇಶ್ವರ ಮಠದ ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಭೂದಾನ ಮಾಡಿ ಶಿಕ್ಷಣ ಪ್ರೇಮ ತೋರಿದ್ದರು.

ಕಳೆದ 2 ತಿಂಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಲೋಚನೇಶ್ವರ ಶ್ರೀಗಳಿಗೆ ಭಕ್ತರು ಮಠದ ಹಿಂದಿನ ಮಠಾಧಿಪತಿಗಳಂತೆ ಅವರಿಗೂ ಸಹ ಮಠದಲ್ಲಿ ಲಿಂಗೈಕ್ಯರಾಗುವುದಕ್ಕೆ ಮೊದಲೇ ಗದ್ದುಗೆ ನಿರ್ಮಿಸಿದ್ದರು.

ಸಧ್ಯ ಮ.ನಿ.ಪ್ರ.ರಾಜೋಟೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದು ಇಡೀ ಭಕ್ತ ಸಾಗರವೇ ಶ್ಲೋಕದಲ್ಲಿ ಮುಳುಗಿದೆ.

Related posts

ನರಕಾಸುರ ದಹನಕ್ಕೆ ಕ್ಷಣಗಣನೆ

eNEWS LAND Team

ಮಳೆ ಬೆಳೆ ಸಂಪಾತಲೇ ಪರಾಕ್

eNEWS LAND Team

ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರ

eNewsLand Team