30 C
Hubli
ಡಿಸೆಂಬರ್ 1, 2022
eNews Land
ಆಧ್ಯಾತ್ಮಿಕ

ಧಾರ್ಮಿಕ ಕಾರ್ಯಗಳನ್ನು ಮಾಡಲು ಸ್ವ ಪ್ರೇರಣೆ ನೀಡಿದ ಶ್ರೀ ಹರಿ ವಿಠ್ಠಲ:ನಾರಾಯಣ ಹಂಬರ

Listen to this article

ಇಎನ್ಎಲ್ ನವಲಗುಂದ : ಪಾಂಡುರಂಗ ವಿಠ್ಠಲ ಸಾಕ್ಷಾತ ಶ್ರೀ ಕೃಷ್ಣನ ಅವತಾರವಾಗಿದ್ದು ಸಂತ ಜ್ಞಾನೇಶ್ವರ ಹಾಗೂ ಸಂತ ತುಕಾರಾಮ ಹಾಗೂ ಭಕ್ತ ಕುಂಬಾರರಂತಹ ಅಪಾರ ಭಕ್ತರ ಮನದಲ್ಲಿ ಅಜರಾಮರವಾಗಿ ಉಳಿದು ಜಗತ್ತಿಗೆ ಧಾರ್ಮಿಕ ಕಾರ್ಯಗಳನ್ನು ಮಾಡಲು ಸ್ವ ಪ್ರೇರಣೆಯನ್ನು ನೀಡಿರುವ ದಯಾಮಹೆ ಶ್ರೀ ಹರಿ ವಿಠ್ಠಲ ಎಂದು ಕಿರ್ತನಾಕಾರರಾದ ಶಿರಕೋಳದ ಶ್ರೀ ಹ.ಭ.ಪ ನಾರಾಯಣ ಹಂಬರ ಮಹಾರಾಜರು ಹೇಳಿದರು.

ತಾಲೂಕಿನ ಅಳಗವಾಡಿ ಗ್ರಾಮದ ಹರಿಮಂದಿರದಲ್ಲಿ ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ 9 ನೇ ವರ್ಷದ ಸಾಮೂಹಿಕ ಪಾರಾಯಣ ಹಾಗೂ ಸಂತಶ್ರೇಷ್ಠ ಸೋಪಾನಕಾಕಾರವರ ಪುಣ್ಯತಿಥಿಯ ಕೊನೆಯ ದಿನದಂದು ಮಾತನಾಡಿದರು.
ಅಳಗವಾಡಿ ಗ್ರಾಮದಲ್ಲಿಯೇ ಶ್ರೀ ಹರಿ ವಿಠ್ಠಲ ರುಕ್ಷ್ಮಣಿ ಹರಿಮಂದಿರದಲ್ಲಿ ಪ್ರತಿವರ್ಷವು ಭಗವದ್ಗೀತಾ ಪಾರಾಯಣ, ಕೀರ್ತನೆ, ಮಹಿಳೆಯರ ಕುಂಭ ಮೇಳ ಹಾಗು ವೀಣಾ ಮೆರವಣಿಗೆಯನ್ನು ವಿಶೇಷವಾಗಿ ಅದ್ದೂರಿಯಾಗಿ ಮಾಡುತ್ತಾ ಬಂದಿರುವಂತಹ ವಾರಕರಿ ಹಾಗೂ ಭಕ್ತ ಸಮೂಹ ಶ್ರೀ ಹರಿಯ ಕೃಪೆಗೆ ಪಾತ್ರರಾಗಿದ್ದಾರೆಂದು ಹೇಳಿದರು.
ಕೀರ್ತನೆಕಾರರದಾ ಕೃಷ್ಣ ಹಂಬರ ಮಹಾರಾಜರು ಶ್ರೀ ಹರಿ ವಿಠ್ಠಲನ ಪೊತಿ ಸ್ಥಾಪನೆ ಮಾಡಿದರು. ಡಿ-26 ರಿಂದ ಪ್ರಾರಂಭವಾದ ಶ್ರೀ ಸಂತ ಜ್ಞಾನೇಶ್ವರ ಪಾರಾಯಣವು ಪೋತಿ ಸ್ಥಾಪನೆಯಿಂದ ಪ್ರತಿನಿತ್ಯ ವಿವಿಧ ಪೂಜಾ ವಿಧಾನಗಳೊಂದಿಗೆ ಜ-2 ರಂದು ಪ್ರಮುಖ ಬೀದಿಗಳಲ್ಲಿ 70 ವೀಣಾ ವಾರಕರಿಗಳು, ಸುಮಂಗಳೆಯರ ಕುಂಭ ಮೇಳದೊಂದಿಗೆ ಶ್ರೀ ಹರಿ ಪಲ್ಲಕ್ಕಿಯ ಮೆರವಣೆಗೆ ನಡೆಯಿತು. ನೂರಾರು ವಾರಕರಿ ಹಾಗೂ ಸುಮಂಗಲೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು. ಉದ್ದಪ್ಪ ಕಡಕೋಳ, ವೆಂಕರಡ್ಡಿ ಹೂಲಿ, ಪುಂಡಲೀಕಪ್ಪ ಹುಬ್ಬಳ್ಳಿ ಕಿರ್ತನಕಾರರಾಗಿ ಸೇವೆ ಸಲ್ಲಿಸಿದರು. ದುರ್ಗಪ್ಪ ಮಾದರ ಸಂಗೀತ ಸೇವೆ ನಡೆಸಿಕೊಟ್ಟರು.
ವಾರಕರಿಗಳಾದ ಬಸಣ್ಣ ಬೆಳವಣಕಿ, ಚಂದ್ರು ಅಣ್ಣಿಗೇರಿ, ಫಕ್ಕೀರಗೌಡ ಬಮ್ಮನಗೌಡ್ರ, ಪಾಲೀಸಪ್ಪ ಜೈನರ, ರಾಮರಡ್ಡಿ ಅಣ್ಣಿಗೇರಿ, ಶಿವಪ್ಪ ನಾಯ್ಕರ, ಕಲ್ಲಪ್ಪ ಬೆಳವಣಕಿ, ಫಕ್ಕೀರಪ್ಪ ಸವದತ್ತಿ, ಶಿವಾನಂದ ಕನಕರಡ್ಡಿ, ಬೀಮನಗೌಡ ರಾಟಿಮನಿ, ಮಂಜು ಮೋರೆ, ಗೋಪಾಲ ಅಣ್ಣಿಗೇರಿ, ಮಹಾಂತೇಶ ಹಂಗರಗಿ, ಡಿ.ಎನ್.ಪಾಟೀಲ, ಹನಮಂತ ಕನಕರಡ್ಡಿ, ಬಸಪ್ಪ ಜೈನರ, ಶಿವಾನಂದ ಸಿದ್ದಾಪೂರ, ಬಸವರಾಜ ಹಿರೇಹಾಳ, ಉಮೇಶ ಅಣ್ಣಿಗೇರಿ, ಸಿದ್ದಪ್ಪ ಬಿದರಗಡ್ಡಿ ಹಾಗೂ ನೂರಾರು ವಾರಕರಿ ಭಕ್ತರು ಪಾಲ್ಗೊಂಡಿದ್ದರು.

Related posts

ನರಕಾಸುರ ದಹನಕ್ಕೆ ಕ್ಷಣಗಣನೆ

eNEWS LAND Team

‘ಭೀಮ ಶಿಲಾ’ ವೀಕ್ಷಿಸಿದ ಪ್ರಧಾನಿ ಮೋದಿ

eNEWS LAND Team

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ. ಶಿವಕುಮಾರ ಶ್ರೀ ಹೆಸರು: ಸಿಎಂ

eNewsLand Team