35 C
Hubli
ಮಾರ್ಚ್ 29, 2024
eNews Land
ಆಧ್ಯಾತ್ಮಿಕ

ಬುದ್ಧ, ಬಸವ, ಅಂಬೇಡ್ಕರ್ ಮಹಾವೀರರು ಕಾಲಾತೀತರು:ಸಿಎಂ

ಇಎನ್ಎಲ್ ಬೆಂಗಳೂರು

ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾವೀರರು ಸಾರ್ವಕಾಲಿಕರು. ಇವರ ತತ್ವಗಳು ಇವತ್ತೂಗೂ ಪ್ರಸ್ತುತ. ಹೀಗಾಗಿ ಇವರು ಕಾಲಾತೀತರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಶ್ವ ಬುದ್ಧ ಧಮ್ಮ ಸಂಘ ಹಾಗೂ ನಾಗಸೇನಾ ಬುದ್ಧ ವಿಹಾರ ವತಿಯಿಂದ 72 ನೇ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಬೌದ್ಧ ದಾಂಮಾಧಿವೇಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬುದ್ಧನ ಶಕ್ತಿ ಪ್ರಭಾವ, ಶಾಂತಿ ಮತ್ತು ಸಾಧನೆ ಬಹಳ ಮುಖ್ಯ. ಇವರೆಲ್ಲರೂ ಸಾಧಕರು. ಸಾವಿನ ನಂತರವೂ ಬದುಕುತ್ತಿದ್ದಾರೆ. ಅವರದ್ದು ತ್ಯಾಗ ಮತ್ತು ಆದರ್ಶದ ಗುಣ ಎಂದರು.

ನಮ್ಮದು ಪ್ರಜಾಸತ್ತಾತ್ಮಕ ದೇಶ ಎಂದು ಘೋಷಿಸಿಕೊಂಡಿದ್ದೇವೆ. ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಶಾಂತಿ, ಸಮಾನತೆ ಪ್ರಗತಿಯ ಬದುಕನ್ನು ಕೊಟ್ಟಿದ್ದಾರೆ. ಇಂದು ಸ್ವತಂತ್ರವಾಗಿ ವಿಚಾರಗಳ ಅಭಿವ್ಯಕ್ತಿಸುತ್ತಿರುವುದು, ಸರ್ಕಾರಗಳನ್ನು ಆಯ್ಕೆ ಮಾಡುವ ಹಕ್ಕು ಕೊಟ್ಟಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವುದನ್ನು ಯಾರೂ ಮರೆಯಬಾರದು ಎಂದರು.

ಭಗವಾನ್ ಬುದ್ಧ ಪ್ರಪಂಚ ಕಂಡ ಶ್ರೇಷ್ಠ ತತ್ವಜ್ಞಾನಿ, ರಾಜಸತ್ವ ಬಿಟ್ಟು, ಜ್ಞಾನೋದಯ ಪಡೆದು, ಇಡೀ ಪ್ರಪಂಚಕ್ಕೆ ತತ್ವಗಳ ಪ್ರಚಾರ ಮಾಡಿ, ಜಗತ್ತು ಮಾನವಕುಲದ ಅಭಿವೃದ್ಧಿಗಾಗಿ ಬದುಕಿ, ಮತ್ತೊಬ್ಬರನ್ನು ಗೌರವಿಸಿ ಸಮಾನತೆಯಿಂದ ಕಂಡು, ಆಸೆಗೆ ಅವಕಾಶವಿಲ್ಲ, ಸೇವೆಗಿದೆ ಇದೆ ಎಂದು ಸಾರಿದ ಪುಣ್ಯಪುರುಷ ಎಂದರು.

ಆಧ್ಯಾತ್ಮ, ಲೌಕಿಕ ವೈಜ್ಞಾನಿಕ, ಸಂಶೋಧನೆಗಳು ವ್ಯಕ್ತಿ ಆಧಾರಿತವಾದದ್ದು. ಜಗತ್ತನ್ನು ಬದಲಾಯಿಸಲು ಏಕೀಕೃತ ಪ್ರಯತ್ನ ಮಾಡಿದ ವ್ಯಕ್ತಿಯಿಂದ ಮಾತ್ರ ಸಾಧ್ಯ. ಅಂತಹ ಶ್ರೇಣಿಗೆ ಭಗವಾನ್ ಬುದ್ಧ ಸೇರಿದ್ದಾರೆ.

ಅದೇ ರೀತಿ ಸ್ವತಂತ್ರ ಭಾರತದಲ್ಲಿ ಶಾಶ್ವತವಾಗಿ ಅಶ್ಪ್ರಷ್ಯತೆಯನ್ನು ತೊಡೆದುಹಾಕಲು ಪಣ ತೊಟ್ಟು, ಸಂವಿಧಾನದಲ್ಲಿ ಅದಕ್ಕೆ ಅವಕಾಶವನ್ನು ಕಲ್ಪಿಸಿ ಮತ್ತೊಮ್ಮೆ ಬುದ್ಧನ ವಿಚಾರವನ್ನು ಭಾರತದ ಮಣ್ಣಿನಲ್ಲಿ ಬೇರೂರಿಸಿದ್ದು ಡಾ: ಅಂಬೇಡ್ಕರ್ ಅವರು. ಅವರು ಸಂವಿಧಾನ ಬರೆಯದ್ದಿದ್ದರೆ ಈ ದೇಶದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಶಾಂತಿಯ ಕ್ರಾಂತಿ ಮಾಡಿ ವೈಚಾರಿಕವಾಗಿ , ಅಸಮಾನತೆ ದೂರ ಮಾಡಿದ, ಆಧುನಿಕ ಭಗವಾನ್ ಬುದ್ಧನ ಮತ್ತೊಂದು ಅವತಾರ ಡಾ: ಅಂಬೇಡ್ಕರ್ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

ಅವರ ವಿಚಾರಗಳನ್ನು ಓದಿದಾಗ ಹೆಮ್ಮೆಯಾಗುತ್ತದೆ. ದೂರದೃಷ್ಟಿ, ಆಳವಾದ ಮಾನವೀಯ ಗುಣಗಳು, ಅಬಲರನ್ನು ರಕ್ಷಿಸುವ ಶಕ್ತಿ, ಖಡ್ಗದ ಶಕ್ತಿಗಿಂತ ಅಂಬೇಡ್ಕರ್ ಅವರ ಪೆನ್ ಗಿದ್ದ ಶಕ್ತಿ ಸಾವಿರಾರು ಪಟ್ಟು ಹೆಚ್ಚು ಎಂದರು.

ಈ ದೇಶದ ಅಖಂಡತೆ, ಸಮಾನತೆ, ಏಕತೆ,ಎಲ್ಲ ಧರ್ಮಗಳಿಗೆ ಸಮಾನ ಅವಕಾಶಗಳು ಸಂವಿಧಾನದ ಪೀಠಿಕೆಯಲ್ಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂವಿಧಾನ ನನ್ನ ಧರ್ಮ ಗ್ರಂಥ ಎಂದು ಹೇಳಿದರು.
ಸಂವಿಧಾನ ದಿನಾಚಾರಣೆಯನ್ನು ಘೋಷಣೆ ಮಾಡುವ ಮೂಲಕ ಸಂವಿಧಾನದ ಕುರಿತು ಅವರಿಗಿರುವ ಬದ್ಧತೆಯನ್ನು ತೋರುತ್ತದೆ.
ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮಸ್ಥಳ, ಕರ್ಮಭೂಮಿ, ಧರ್ಮಭೂಮಿಗಳು ಸೇರಿದಂತೆ ಅವರ ಸ್ಮಾರಕಗಳನ್ನು ನಿರ್ಮಿಸಿ ಗೌರವ ಹೆಚ್ಚಿಸಿದ್ದಾರೆ. ಹಾಗೂ ಅಂಬೇಡ್ಕರ್ ಜಾಲವನ್ನು ರಚಿಸಿ ಅಲ್ಲಿಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಿ ಸಾವಿರಾರು ಭಕ್ತರು ಭೇಟಿ ಕೊಡಲು ಪ್ರಧಾನಿಗಳು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

*ಅಂಬೇಡ್ಕರ್ ವಿಚಾರಧಾರೆಯನ್ನು ಅನುಷ್ಠಾನ*
ಪ್ರತಿ ನಾಗರಿಕನೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಋಣಿಯಾಗಿರಬೇಕು. ಪ್ರತಿಯೊಬ್ಬ ಭಾರತದ ನಾಗರಿಕನೂ ಅವರ ವಿಚಾರಧಾರೆಯನ್ನು ಅನುಷ್ಠಾನ ಮಾಡುವ ಮೂಲಕ ಅಂಬೇಡ್ಕರ್ ಅವರನ್ನು ಸದಾಕಾಲ ಹೃದಯಮಂದಿರದಲ್ಲಿಟ್ಟುಕೊಂಡಾಗ ಋಣ ತೀರಿಸಿದಂತಾಗುತ್ತದೆ. ದಲಿತ ಸಮಾಜಕ್ಕೆ ಇಂದಿಗೂ ಪೂರ್ಣಪ್ರಮಾಣದ ನ್ಯಾಯ ದೊರೆತಿಲ್ಲ. ರಾಜಕೀಯವಾಗಿ ಸಾಮಾಜಿಕವಾಗಿ ಅಂಬೇಡ್ಕರ್ ಅವರು ತೋರಿದ ಬದ್ಧತೆಯ ಕೊರತೆ ಅಸಮಾನತೆ ಮುಂದುವರೆಯಲು ಕಾರಣ. ನಮಗೆ ರಾಜಕೀಯ, ಸ್ವಾತಂತ್ರ್ಯ ದೊರಕಿದೆ. ಆದರೆ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವತಂತ್ರ ದೊರಕುವವರೆಗೂ ನ್ಯಾಯ ಸಿಗುವುದಿಲ್ಲ. ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣದ ಸಾಧನೆಯನ್ನು ಸಮಾಜ ಸರ್ಕಾರ ಎರಡೂ ಮಾಡಬೇಕಿದೆ. ಈ ದಿಕ್ಕಿನಲ್ಲಿ ದಾಪುಗಾಲಿನ ಹೆಜ್ಜೆಗಳನ್ನಿಡಬೇಕಿದೆ.
ಈ ಕೆಲಸ ಕೇವಲ ಮಾತಿನಿಂದಲ್ಲ, ಕೃತಿಯಲ್ಲಿ ಆಗಬೇಕು. ಇಂದಿನ ಅಗತ್ಯಗಳಿಗೆ ತಕ್ಕಂತೆ ಯುವಕರನ್ನು ಸಿದ್ದಗೊಳಿಸಬೇಕು. ಆದರಿಂದ ಶಿಕ್ಷಣಕ್ಕೆ ಅತಿ ಹೆಚ್ಚು ಪ್ರೋತ್ಸಾಹ ನೀಡಿ, ಮಕ್ಕಳನ್ನು ವಿದ್ಯಾವಂತರಾಗಿಸಿ ಶೈಕ್ಷಣಿಕ ಕ್ರಾಂತಿ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳಿಗೆ ಇನ್ನಷ್ಟು ಶಕ್ತಿಯನ್ನು ತುಂಬಿ, ಹೊಸ ಯೋಜನೆಗಳನ್ನು ಜಾರಿಗೆ ತಂದು ಈ ಸಮುದಾಯದ ಮಕ್ಕಳು ವಿಶ್ವಮಟ್ಟದಲ್ಲಿ ಎಲ್ಲರೊಂದಿಗೆ ಪೈಪೋಟಿ ಮಾಡಲು ಅವರನ್ನು ಸಿದ್ಧಗೊಳಿಸಿ, ಆರ್ಥಿಕತೆ, ಕೌಶಲ್ಯ, ಉದ್ಯೋಗಾವಕಾಶಗಳನ್ನು ಸೃಜಿಸಲಾಗುವುದು ಎಂದರು.

*ಅಮೃತ ಕೌಶಲ್ಯ ಯೋಜನೆ*
ಖಾಸಗಿ ವಲಯದಲ್ಲಿ ಉದ್ಯೋಗ ದೊರಕಲು ಅಗತ್ಯವಿರುವ ಕೌಶಲ್ಯ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದೆ. 75000 ಎಸ್.ಸಿ/ ಎಸ್.ಟಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಒಂದೇ ವರ್ಷದಲ್ಲಿ ಕೌಶಲ್ಯ ಪಡೆದು ಉದ್ಯೋಗಸ್ಥರಾಗಲು ಅಮೃತ ಕೌಶಲ್ಯ ಯೋಜನೆ ಘೋಷಿಸಿದೆ. ಈಗಾಗಲೇ 35 ಸಾವಿರ ಮಕ್ಕಳು ನೋಂದಣಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ರಾಜ್ಯದ ಒಟ್ಟು ತಲವಾರು ಆದಾಯದಲ್ಲಿ ಎಸ್.ಸಿ/ ಎಸ್.ಟಿ ಸಮುದಾಯದವರು ಪಾಲ್ಗೊಳ್ಳಬೇಕು. ಹೊಲ, ಮನೆಗಳಲ್ಲಿ ಕೆಲಸ ಮಾಡುವ ಎಸ್ ಸಿ/ ಎಸ್ ಟಿ ಹೆಣ್ಣುಮಕ್ಕಳಿಗೆ ಆರ್ಥಿಕ ನೆರವು ನೀಡುವ ವಿಶೇಷ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ರೂಪಿಸಲಿದೆ ಎಂದರು.

*ಎಲ್ಲ ವಲಯಗಳಲ್ಲಿ ಅವಕಾಶಗಳು*
ಎಲ್ಲ ವಲಯಗಳಲ್ಲಿ ಅವಕಾಶಗಳು ದೊರಕಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಕೈಗೊಂಡು ಅಂಬೇಡ್ಕರ್ ಅವರಿಗೆ ಸರ್ಕಾರ ಗೌರವ ಸಲ್ಲಿಸುತ್ತದೆ ಎಂದರು. ಸಂಘಟನೆ, ಶಿಕ್ಷಣ, ಹೋರಾಟ ಎಂಬ ಅಂಬೇಡ್ಕರ್ ಅವರ ಮಾರುಗಳನ್ನು ಸ್ಮರಿಸೋಣ ಎಂದರು.

ಕಾರ್ಯಕ್ರಮದಲ್ಲಿ ಡಾ. ಎಂ ವೆಂಕಟಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ವಿವಿಧ ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಇಂದಿನ ಪಂಚಾಂಗ 23/05/2023

eNewsLand Team

ಇಎನ್ಎಲ್ ಪಂಚಾಂಗ

eNewsLand Team

ಕಾಮಧೇನು ಭಕ್ತಿ ಭಾವದತ್ತ…

eNEWS LAND Team