31 C
Hubli
ಏಪ್ರಿಲ್ 26, 2024
eNews Land
ಆಧ್ಯಾತ್ಮಿಕ ದೇಶ

‘ಭೀಮ ಶಿಲಾ’ ವೀಕ್ಷಿಸಿದ ಪ್ರಧಾನಿ ಮೋದಿ

ಇಎನ್ಎಲ್ ಬ್ಯೂರೋ
ಕೇದಾರನಾಥ:

ಕೇದಾರನಾಥದಲ್ಲಿ ಪುನರ್‌ನಿರ್ಮಾಣ ಮಾಡಲಾದ ಆದಿಗುರು ಶಂಕರಾಚಾರ್ಯರ ಸಮಾಧಿ ಬಳಿ ಸ್ಥಾಪಿಸಿದ 12 ಅಡಿ ಎತ್ತರದ ಶಂಕರರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಿದರು.

ಬಳಿಕ ಮೋದಿ ಅವರು ಅಲ್ಲಿಯೇ ಕೆಲ ಹೊತ್ತು ಧಾನ್ಯ ಮಾಡುವ ಮಾಡಿದರು. ಇದಕ್ಕೂ ಮುನ್ನ ಅವರು ಶಿವ ದೇವಾಲಯದಲ್ಲಿ ಪೂಜೆ ಕೈಗೊ೦ಡರು.

ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ ಸಾಕ್ಷ್ಯಚಿತ್ರವೊಂದನ್ನು ಮೋದಿ ವೀಕ್ಷಿಸಿದರು.

2013ರ ಭಾರೀ ಪ್ರವಾಹದಿಂದ ಹಾನಿಗೆ ಒಳಗಾಗಿದ್ದ ಕೇದಾರನಾಥ ಪ್ರದೇಶವನ್ನು ಪುನರ್‌ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಇದರ ಭಾಗವಾಗಿ 35 ಟನ್‌ ತೂಕದ ಶಂಕರಾಚಾರ್ಯರ ಪ್ರತಿಮೆ ರೂಪಿಸುವ ಕಾರ್ಯ 2019ರಲ್ಲಿ ಆರಂಭಿಸಲಾಗಿತ್ತು.

ವಿಕೋಪದಲ್ಲಿ ಪರ್ವತದಿಂದ ದೇವಾಲಯದ ಹಿಂಬದಿಗೆ ಉರುಳಿ ಬಂದ ಬೃಹತ್‌ ಬಂಡೆಯು, ದೇವಾಲಯಕ್ಕೆ ಆಗಬಹುದಾಗಿದ್ದ ಹೆಚ್ಚಿನ ಹಾನಿಯನ್ನು ತಡೆದಿತ್ತು. ಅದನ್ನು ‘ಭೀಮ ಶಿಲಾ’ ಎಂದು ಕರೆಯಲಾಗುತ್ತಿದೆ. ಅಲ್ಲಿಗೂ ಪ್ರಧಾನಿ ಭೇಟಿ ನೀಡಿದರು.

ಬೆಳಗ್ಗೆ ಡೆಹ್ರಾಡೂನ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಉತ್ತರಾಖಂಡದ ರಾಜ್ಯಪಾಲ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಗುರ್ಮಿತ್‌ ಸಿಂಗ್‌, ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಬರಮಾಡಿಕೊಂಡರು.

ಫೋಟೊ ಕೃಪೆ : ಎ ಎನ್ ಆಯ್

 

Related posts

ಇಂದು ಏ.28 ಅಣ್ಣಿಗೇರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಆಗಮನಕ್ಕೆ ಕಾಯುತ್ತಿರುವ ಜನ!!!

eNEWS LAND Team

ಸರಿಯಾದ ಮಾರ್ಗದಲ್ಲಿ ನಡೆಯೋದು ಯೋಗ: ವಚನಾನಂದಶ್ರೀ

eNEWS LAND Team

ಬುದ್ಧ, ಬಸವ, ಅಂಬೇಡ್ಕರ್ ಮಹಾವೀರರು ಕಾಲಾತೀತರು:ಸಿಎಂ

eNewsLand Team