ಇಎನ್ಎಲ್ ಕುಂದಗೋಳ: ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮತ್ತು ಅವುಗಳನ್ನು ಜನರಿಗೆ ತಲುಪಿಸಲು ಗ್ರಾಮ ಪಂಚಾಯಿತಿಗಳ ಅಧಿಕಾರಿಗಳಿಂದ ವಿಳಂಬವಾಗಬಾರದು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ!ಬಿ.ಸುಶೀಲಾ ಅವರು ಹೇಳಿದರು.
ಅವರು ತಾಲೂಕಿನ ಕಳಸ,ಹರ್ಲಾಪೂರ,ಸಂಶಿ ಮತ್ತು ಪಶುಪತಿಹಾಳ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳ ಮಾಹಿತಿ ಮತ್ತು ಜಲ ಜೀವನ ಮಿಷನ್, ಉದ್ಯೋಗ ಖಾತ್ರಿ ಯೋಜನೆ ಸ್ವಚ್ಛ ಭಾರತ್ ಮಿಷನ್ ಯೋಜನೆಗಳು ಮತ್ತು ಪಶುಪತಿಹಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಿಸಿದ ಶಾಲೆಯ ಕಂಪೌಂಡನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಳಸ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆಯನ್ನು ಪಡೆದುಕೊಂಡ ಮಕ್ಕಳ ಅಂಕಿ ಸಂಖ್ಯೆ ಬಗ್ಗೆ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ! ಮಹೇಶ್ ಕುರಿಯವರ,ತಾ.ಪಂ. ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಅಜಯ್ ಎನ್, ಪಶುಪತಿಹಾಳ, ಕಳಸ ಗ್ರಾ.ಪಂ.ಪಿಡಿಓ ರತ್ನಾಕರ್ ಹಾಗೂ ಸುರೇಶ್ ಚಟ್ನಿ ಇದ್ದರು.