ಇಎನ್ಎಲ್ ಅಣ್ಣಿಗೇರಿ: ತಾಲೂಕಿನ ವಾಲ್ಮೀಕಿ ಸಮಾಜ ಭಾಂದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸರ್ಕಾರ ಎಸ್.ಟಿ.ವರ್ಗಕ್ಕೆ 7.5 ಮಿಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿ. ನಂತರ ತಹಶೀಲ್ದಾರ ಕಾರ್ಯಲಯಕ್ಕೆ ತೆರಳಿ ತಹಶೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು. ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳು ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಪ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ತಾಲೂಕಿನ ವಾಲ್ಮೀಕಿ ಸಮಾಜ ಬಾಂಧವರು ಸಂಪೂರ್ಣ ಬೆಂಬಲಿಸುವುದಾಗಿ ಹಾಗೂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು. ಸಮಾಜದ ಮುಖಂಡರಾದ ಮೋಹನ ಗುಡಸಲಮನಿ, ಯಲ್ಲಪ್ಪ ದುಂದೂರ, ಮಾರುತಿ ಮರಡ್ಡಿ, ರಾಮಣ್ಣ ದೊಡ್ಡಮನಿ, ಅಮೃತ ಹಂಚಿನಾಳ ಭೀಮಪ್ಪ ಜಂತ್ಲಿ, ಸರ್ಕಾರ ಎಸ್.ಟಿ ಸಮದಾಯಕ್ಕೆ 7.5 ಮಿಸಲಾತಿ ನೀಡುವಂತೆ ಒತ್ತಾಯಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಭರತಕುಮಾರ ಅಜ್ಜಣ್ಣವರ, ಹನಮಂತಪ್ಪ ನೈನಾಪೂರ, ಶಿವಾನಂದ ತಹಶೀಲ್ದಾರ, ಬಸವರಾಜ ಜಾಲಿಹಾಳ, ಸುಭಾಸಚಂದ್ರ ನಾಯಕ, ವಿರೇಶ ಗೊಬ್ಬರಗುಂಪಿ, ಮಂಜುನಾಥ, ಶಿವಕುಮಾರ ಅಂಗಡಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಾಜ ಮುಖಂಡರು ಉಪಸ್ಥಿತರಿದ್ದರು.