25 C
Hubli
ಮೇ 11, 2024
eNews Land
ಸಣ್ಣ ಸುದ್ದಿ

UPSC ಸಾಧಕ ಸಿದ್ಧಲಿಂಗಪ್ಪ ಪೂಜಾರಗೆ ಸನ್ಮಾನ

ಇಎನ್‌ಎಲ್‌ಅಣ್ಣಿಗೇರಿ: ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಲಿತ ಮೂಲ ಜ್ಞಾನ ಕರಗತ ಮಾಡಿಕೊಂಡಿದ್ದರಿoದ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಜನನಿ ಜನ್ಮಭೂಮಿಶ್ಚ ಸ್ವರ್ಗದಪಿಗರಿಯಸಿ. ಎಂಬoತೆ ತಂದೆ-ತಾಯಿ ಗುರು, ತಾಯಿನಾಡು ನಾವೆಂದು ಮರೆಯಬಾರದೆಂದು ಯುಪಿಎಸ್ಸಿ ಸಾಧಕ ಸಿದ್ಧಲಿಂಗಪ್ಪ ಪೂಜಾರ ಹೇಳಿದರು.

ಪಟ್ಟಣದ ವಿನ್ ಕಂಪ್ಯೂಟರ್ ಹಾಗೂ ಎಸ್.ಎಸ್.ವಾಯ್ ಬಳಗದ ಆಶ್ರಯದಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ  ರಾಷ್ಟ್ರಮಟ್ಟದಲ್ಲಿ 589ನೇ ರ‍್ಯಾಂಕ ಪಡೆದ ಸಾಧಕನಿಗೆ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ಡಾ.ಶಂಕರ ಜೋಶಿ, ಅತಿಥಿಗಳಾಗಿ ಎಂ.ಎಸ್.ಪೂಜಾರ ಹಾಗೂ ಪಾಂಡು ಬಿರಸಲ್ ವಹಿಸಿದ್ದರು.
ಈ ಸಂದರ್ಭದಲ್ಲಿ ಅಣ್ಣಿಗೇರಿಯ ಎಸ್.ಎಸ್.ವಾಯ್ ಬಳಗದ ರಾಹುಲ್ ಜೈನ. ಉಮೇಶ ಬಿಲ್ಲಹದ್ದಣ್ಣವರ, ಡಾ.ಶಶಿಧರ ಹರ್ಲಾಪೂರ, ಮಹಾಂತೇಶ ವಸ್ತ್ರದ, ಎ.ಆರ್.ಅಕ್ಕಿ, ಶಂಕರ ನಾವಳ್ಳಿ, ರಿಷಿ ಸಾರಂಗಿ, ಗೀತಾ ಜೋಶಿ, ಪ್ರಕಾಶ ಮೇಟಿ, ಇನ್ನು ಅನೇಕರು, ಎಸ್. ಎಸ್.ವಾಯ್. ಸಾಧಕರು ಭಾಗವಹಿಸಿದ್ದರು. ಮಂಜುಳಾ, ಭಾರತಿ ಪ್ರಾರ್ಥಿಸಿದರು. ಕೀರ್ತಿ ವಡ್ಡರ ನಿರೂಪಿಸಿದರು. ವಿನ್ ಕಂಪ್ಯೂಟರ್ ಮುಖ್ಯಸ್ಥ ವಿನೋದ ಪೂಜಾರ ಸ್ವಾಗತಿಸಿದರು. ಸವಿತಾ ತಿರ್ಲಾಪೂರ ವಂದಿಸಿದರು.

Related posts

ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ

eNEWS LAND Team

ಹೊಳಲಾಪೂರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಭೂಮಿ ಪೂಜೆ

eNEWS LAND Team

Journalism school started in the name of Dr.Vijaya Sankeshwar

eNEWS LAND Team