27 C
Hubli
ಮೇ 25, 2024
eNews Land
ಸಣ್ಣ ಸುದ್ದಿ

ಟ್ರಾನ್ಸಫಾರ್ಮರ್ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರ; ಜೂ.30 ರವರೆಗೆ ವಿದ್ಯುತ್ ವ್ಯತ್ಯಯ

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ವಿಭಾಗದ ವಾರ್ಡ ನಂ. 39, 41 ಹಾಗೂ 46 ರಲ್ಲಿ ಬರುವ ವಿಜಯನಗರ, ರಾಜನಗರ, ಶಿರಡಿನಗರ, ಸಬ್ ಜೈಲ್ ರೋಡ, ಆದರ್ಶನಗರ, ಅಶೋಕ ನಗರ, ಮಯೂರಿ ಎಸ್ಟೇಟ್, ದೇಶಪಾಂಡೆ ಲೇಔಟ್ ಮುಂತಾದ ಪ್ರದೇಶಗಳಲ್ಲಿ ರಸ್ತೆ ಹಾಗೂ ತೆರೆದ ಚರಂಡಿಯ ಕಾಮಗಾರಿಗಳು ಪ್ರಗತಿಯಲ್ಲಿದ್ದು, ತೆರೆದ ಚರಂಡಿ ಮಧ್ಯದಲ್ಲಿನ ಟ್ರಾನ್ಸ್‌ಫಾರ್ಮರ್  ಹಾಗೂ ಬೀದಿ ದೀಪದ ಕಂಬಗಳನ್ನು ಹೆಸ್ಕಾಂ ಹಾಗೂ ಪಾಲಿಕೆಯ ವತಿಯಿಂದ ಸ್ಥಳಾಂತರಿಸುವ ಕಾಮಗಾರಿಯನ್ನು ಜೂನ್ 15  ರಿಂದ 30 ರವರೆಗೆ ಕೈಗೊಳ್ಳಲಾಗುತ್ತಿದೆ.

ಈ ದಿನಗಳಂದು ಕೆಲವೊಂದು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಬಿ. ಗೋಪಾಲಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕಲಘಟಗಿ ಹಾಗೂ ಅಳ್ನಾವರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ

eNewsLand Team

ಅಣ್ಣಿಗೇರಿ:ತಾಪಂ ಕಛೇರಿ ಹಾಗೂ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನ. ಯಾರ್ಯಾರು ಭಾಗಿ ನೋಡಿ!

eNEWS LAND Team

ಮಾಜಿ ಸಚಿವ ಸಂತೋಷ್ ಲಾಡ್ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ!!!

eNEWS LAND Team