24 C
Hubli
ಸೆಪ್ಟೆಂಬರ್ 27, 2023
eNews Land
ಸಣ್ಣ ಸುದ್ದಿ

ಪರಶುರಾಮ ಹುಲಿಹೊಂಡ: ಶ್ರೀ ಸಿದ್ಧಾರೂಢ ರಾಜ್ಯ ಪ್ರಶಸ್ತಿಗೆ ಆಯ್ಕೆ

ಇಎನ್ಎಲ್ ಕಲಘಟಗಿ: ಶ್ರೀ ಸಿದ್ಧಾರೂಢರ 186ನೇ ಜಯಂತೋತ್ಸವ ಅಂಗವಾಗಿ ಪ್ರತಿ ವರ್ಷದಂತೆ 2022ನೇ ಸಾಲಿನಲ್ಲಿ “ಶ್ರೀ ಸಿದ್ಧಾರೂಢ ರಾಜ್ಯ ಪ್ರಶಸ್ತಿ” ಮತ್ತು “ಶ್ರೀ ಸಿದ್ಧಾರೂಢ ಪುರಸ್ಕಾರ” ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಸಮಾಜ ಸೇವೆಗಾಗಿ ಪರಶುರಾಮ ಹುಲಿಹೊಂಡ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಶ್ರೀ ಸಿದ್ಧಾರೂಢ ಜಯಂತಿ ಉತ್ಸವ ಸಮಿತಿ ಹಾಗೂ ಶ್ರೀ ಆರೂಢ ದರ್ಶನ ಜ್ಞಾನ ಪ್ರಕಾಶನಕ್ಕೆ ಗೆಳೆಯರ ಬಳಗವು ಧನ್ಯವಾದ ಅರ್ಪಿಸಿದೆ. ಜೂ12 ರವಿವಾರ ಬೆಳಿಗ್ಗೆ 10 ಗಂಟೆಗೆ ಧಾರವಾಡದ ಶ್ರೀ ರಾ.ಹ.ದೇಶಪಾಂಡೆ ಸಭಾಭವನ, ಕ.ವಿ.ವ. ಸಂಘ, ಹುಧಾಮಪಾ ಎದುರು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಡಮಕ್ಕಳಿಗೆ ಉಚಿತ ನೋಟ್ ಬುಕ್ಸ್ ವಿತರಣೆ, ಸಾಂಸ್ಕೃತಿಕ, ಜಾನಪದ, ಸುಗಮ ಸಂಗೀತ, ಶಾಸ್ರೀಯ ಸಂಗೀತ ಕಾರ್ಯಕ್ರಮಗಳು ಜರುಗುವವು ಎಂದು ಕಾರ್ಯಾಧ್ಯಕ್ಷ ಸಾತಪ್ಪ ಕುಂಕೂರ ಪ್ರಕಟನೆಗೆ ತಿಳಿಸಿದ್ದಾರೆ.

 

Related posts

ವಾಲ್ಮೀಕಿ ಆದರ್ಶಗಳು ಸಮಾಜಕ್ಕೆ ಪ್ರೇರಣೆ : ಮಂಜುನಾಥ ಅಮಾಸಿ

eNEWS LAND Team

ಮಾಲಿನಿ ಮಲ್ಯ ನಿಧನ: ನಳಿನ್‍ಕುಮಾರ್ ಕಟೀಲ್ ಸಂತಾಪ

eNEWS LAND Team

ಗ್ರಾ.ಪಂ ದೇವಸ್ಥಾನ ಇದ್ದಹಾಗೆ: ಶಾಸಕಿ ಕುಸುಮಾವತಿ

eNEWS LAND Team