34 C
Hubli
ಫೆಬ್ರವರಿ 28, 2024
eNews Land
ಸಣ್ಣ ಸುದ್ದಿ

ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರ ನೇಮಕ

ಇಎನ್ಎಲ್ ಅಣ್ಣಿಗೇರಿ: ಅ.ಭಾ.ಕಾ.ಸೇವಾದಳದ ಅಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರ ಅನುಮೋದನೆ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಪಟ್ಟಣದ ಮಾಜಿ ಪುರಸಭೆ ಅಧ್ಯಕ್ಷ, ಚಂಬಣ್ಣ ಹಾಳದೋಟರ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ರಾಮಚಂದ್ರ. ಎಂ ಆದೇಶ ಹೊರಡಿಸಿರುವುದಾಗಿ ಪತ್ರಿಕಾಗೊಷ್ಠಿಯಲ್ಲಿ ಶಿವಣ್ಣ ಬಾಳೋಜಿ ಹೇಳಿದರು. ಪಟ್ಟಣದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಧ ಕಾರ್ಯಲಯದಲ್ಲಿ ಮಾತನಾಡಿದರು.
ಧಾ.ಜಿ.ಕಾ.ಸೇವಾದಳದ ಅಧ್ಯಕ್ಷ ಚಂಬಣ್ಣ ಹಾಳದೋಟರ ಮಾತನಾಡಿ, ಪಕ್ಷದ ತತ್ವಸಿದ್ದಾಂತಕ್ಕೆ ಬಧ್ಧನಾಗಿ, ರಾಜಕೀಯ ಆಮಿಷಗಳಿಗೆ ಒಳಗಾಗದೆ, ಸಾಮಾಜಿಕ ಪಿಡುಗುಗಳಿಂದ ದೂರವಿದ್ದು, ಚಾರಿತ್ರ್ಯಕ್ಕೆ ಧಕ್ಕೆ ಬರದಂತೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸವುದಾಗಿ ತಿಳಿಸಿದರು. ಜಾತಿ,ಮತ,ಪಂಥ, ಮೇಲು-ಕೀಳು ಯಾವುದೇ ಕಲಹ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಪಕ್ಷವು ಜವಾಬ್ದಾರಿ ನೀಡಿದೆ. ಕೆಪಿಸಿಸಿ ಮಾರ್ಗದರ್ಶನದಲ್ಲಿ ರಾಜ್ಯದ ನಾಯಕರು. ಕಾಂಗ್ರೆಸ್ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಹಕಾರದಿಂದ ಕಾಂಗ್ರೆಸ್ ಸೇವಾದಳದ ಸಂಘಟನೆ, ಪಕ್ಷ ಬಲವರ್ಧನೆಗೆ ಜವಾಬ್ದಾರಿಯನ್ನು ಹೊತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ನಿಷ್ಠೆಯಿಂದ ಪ್ರಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು. ಅಣ್ಣಿಗೇರಿ ತಾಲೂಕ ಬ್ಲಾಕ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಮಂಜುನಾಥ ಮಾಯಣ್ಣವರ ಹಾಗೂ ಕಾಂಗ್ರೆಸ್ ಮುಖಂಡರು, ಸನ್ಮಾನಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಎ.ವಿ.ಶೆಟ್ಟರ ರಮೇಶ ಕರೆಕಟ್ಟೆನವರ, ಇಮಾಮಸಾಬ ದರವಾನ, ಕೃಷ್ಣ ಬೆಂತೂರ, ಶoಕರ ಕುರಿ, ಉಪಸ್ಥಿತರಿದ್ದರು.  

Related posts

ಕೇಂದ್ರ ಲಲಿತಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಸಂಯೋಜಕರಾಗಿ ಶ್ರೀನಿವಾಸ ಶಾಸ್ತ್ರಿ

eNEWS LAND Team

ಕಾಮಸಮುದ್ರದಲ್ಲಿ ಭೂಮಿ ಪೂಜೆ ನೆರವೇರಿಸಿದ: ರಾಜಮ್ಮ

eNEWS LAND Team

ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳಿಂದ ಜ್ಞಾನದೇಗುಲದ ಕಾರ್ತಿಕ ದೀಪೋತ್ಸವ

eNEWS LAND Team