24 C
Hubli
ಮಾರ್ಚ್ 21, 2023
eNews Land
ಸಣ್ಣ ಸುದ್ದಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಲು ಶಾಂತಿಯುತ ಪ್ರತಿಭಟನೆ: ರಮೇಶ ಸೋಲಾರಗೊಪ್ಪ

Listen to this article

ಇಎನ್ಎಲ್ ಕಲಘಟಗಿ: ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಂದಪುರಿ ಮಹಾಸ್ವಾಮಿಗಳ ಸತ್ಯಾಗ್ರಹ ಬೆಂಬಲಿಸಿ ಎಸ್ಸಿ ಎಸ್ಟಿ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಮೇ20 ರಂದು ಬೃಹತ್ ಪ್ರತಿಭಟನಾ ರ‍್ಯಾಲಿ ಮಾಡಲಾಗುವುದು ಎಂದ ರಮೇಶ ಸೋಲಾರಗೊಪ್ಪ.

ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ವರದಿ ಜಾರಿಯಾಗಬೇಕು, ಸಂವಿಧಾನ ಬದ್ಧವಾಗಿ ಮೀಸಲಾತಿ ನೀಡಿಲ್ಲ, ವಾಲ್ಮೀಕಿ ಪೀಠದ ಶ್ರೀಗಳ ಅಹೋರಾತ್ರಿ ಧರಣಿ ಸತ್ಯಾಗ್ರಹವು 90 ದಿನಗಳು ಕಳೆದರೂ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಪರಿಶಿಷ್ಟ ಜಾತಿಗೆ 15 ರಿಂದ 17.5 ಪರಿಶಿಷ್ಟ ಪಂಗಡದವರಿಗೆ 3 ರಿಂದ 7.5 ಮೀಸಲಾತಿ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ಇದೇ ಮೇ20 ರಂದು ಪ್ರತಿಭಟನೆ ಮಾಡಲಾಗುವುದು. ಪಟ್ಟಣದ ಎ.ಪಿ.ಎಮ್.ಸಿ ಯಿಂದ ತಹಶೀಲ್ದಾರ ಕಚೇರಿವರೆಗೆ ಮೆರವಣಿಗೆ ನಡೆಸಿ ಹೆದ್ದಾರಿ ತಡೆದು ನಂತರ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಫಕ್ಕೀರಗೌಡ ದೊಡಮನಿ, ಆದಿಜಾಂಬವ ಸಮುದಾಯದ ತಾಲೂಕಾಧ್ಯಕ್ಷ ಬಸವರಾಜ ಕಟ್ಟಿಮನಿ ದಲಿತ ಸಂಘರ್ಷ ಸಮಿತಿ ತಾಲೂಕಾಧ್ಯಕ್ಷ ಮಂಜುನಾಥ ದೊಡಮನಿ, ಹೊಳೆಪ್ಪ ಗಾಮಣ್ಣವರ, ಫಕ್ಕೀರೇಶ ಅಪ್ಪಣ್ಣವರ, ಶಶಿಕುಮಾರ ಕಟ್ಟೀಮನಿ, ಲಕ್ಷ್ಮಣ ಮ್ಯಾಗಿನಮನಿ, ಮಂಗಳಪ್ಪ ಲಮಾಣಿ, ಬಸಪ್ಪ ವಡ್ಡರ, ಭೀಮಣ್ಣ ಬ್ಯಾಡರಕೊಪ್ಪ, ಸಿದ್ದಪ್ಪ ತಳವಾರ, ಭೀಮಸಿ ರೇವಡಿಹಾಳ, ಮಂಜುನಾಥ ಮಾದರ, ಯಲ್ಲಪ್ಪ ಮೇಲಿನಮನಿ, ಸೇರಿದಂತೆ ಎಸ್ಸಿ ಎಸ್ಟಿ ಸಮಾಜದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ: ಪುರಸಭೆ ಬಜೆಟ್ ಪೂರ್ವಭಾವಿ ಸಭೆ ಫೆ.18ಕ್ಕೆ

eNEWS LAND Team

ಅಣ್ಣಿಗೇರಿ ಪಂಚಮಸಾಲಿ ಅಧ್ಯಕ್ಷ ದೇಸಾಯಿ

eNEWS LAND Team

ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

eNEWS LAND Team