26.4 C
Hubli
ಮಾರ್ಚ್ 29, 2024
eNews Land
ಸಣ್ಣ ಸುದ್ದಿ

ಸಂವಿಧಾನ ಗೌರವಿಸಿ ನೀತಿ-ನಿಯಮಗಳನ್ನರಿತು ಕರ್ತವ್ಯನಿರತರಾಗಬೇಕು: ಮಂಜುನಾಥ ಅಮಾಸಿ

ಇಎನ್ಎಲ್ ಅಣ್ಣಿಗೇರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಆದರ್ಶ ಮೌಲ್ಯಗಳ ಅರಿತು ಅಳವಡಿಸಿಕೊಂಡು ಸಾಗಬೇಕಿದೆ. ದೇಶದ ಪ್ರಜೆಗಳು ಕಾನೂನಿನ ಅಡಿಯಲ್ಲಿ ಪ್ರಜಾಪ್ರಭುತ್ವದ ಎಳ್ಗೆಗೆ ಸಂವಿಧಾನದ ನ್ಯಾಯ ಸಮ್ಮತ ನೀತಿ-ನಿಯಮಗಳನ್ನು ಅರಿತು ಮುನ್ನಡೆಸುವಲ್ಲಿ ಕರ್ತವ್ಯನಿರತರಾಗಬೇಕೆಂದು ಧ್ವಜಾರೋಹಣ ನೆರವೆರಿಸಿ ಹೇಳಿದ ತಹಶೀಲ್ದಾರ ಮಂಜುನಾಥ ಅಮಾಸಿ.
ಪಟ್ಟಣದ ಎಮ್.ಸಿ.ಎಸ್.ಮಾದರಿ ಕೇಂದ್ರ ಶಾಲೆ-1 ರಲ್ಲಿ ತಾಲೂಕ ಆಡಳಿತದಿಂದ ಆಯೋಜಿಸಿದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಅಣ್ಣಿಗೇರಿ ತಾಲೂಕಿನ ಕೀರ್ತಿ ಶಿಖರಕ್ಕೆ ಕೃಷಿ ಸಂಶೋಧಕ ಎ.ಆಯ್.ನಡಕಟ್ಟಿನ ಅವರಿಗೆ ಕೇಂದ್ರ ಸರ್ಕಾರ ನೀಡುವ ರಾಷ್ಟ್ರದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು ಹರ್ಷತಂದಿದೆ. ಅವರ ಸಾಧನೆಗೆ ತಾಲೂಕಾಡಳಿತದಿಂದ ಅಭಿನಂದಿಸಿದರು.
ಕೋವಿಡ್ ವಾರಿಯರ್ಸ್ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಪೌರಕಾರ್ಮಿಕರು. ವೈದ್ಯಾಧಿಕಾರಿಗಳು, ಪೊಲೀಸರು, ನಿವೃತ್ತ ಸೈನಿಕರು. ಅವರನ್ನು ತಾಲೂಕ ಆಡಳಿತದಿಂದ ಪುಸ್ತಕ ವಿತರಣೆ ಮಾಡುವ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ 23 ಚುನಾಯಿತ ಸದಸ್ಯರು, ಪಿ.ಎಸ್.ಆಯ್ ಎಲ್.ಕೆ.ಜ್ಯೂಲಿಕಟ್ಟಿ, ವೈದ್ಯಾಧಿಕಾರಿ ಕೃಷ್ಣ ಜಗ್ಗಲ, ಮುಖ್ಯಾಧಿಕಾರಿ ಕೆ.ಎಫ್.ಕಟಗಿ, ಆರೋಗ್ಯ ಇಲಾಖೆ, ಪುರಸಭೆ, ಆರಕ್ಷಕ ಇಲಾಖೆ, ಉಪನೊಂದಣಿ ಕಛೇರಿ, ತಾಲೂಕ ಪಂಚಾಯತ, ಉಪಖಜಾನೆಕಾರ್ಯಲಯ, ಶಿಕ್ಷಣ ಸಂಸ್ಥೆಗಳು, ಸಿಬ್ಬಂದಿ ವರ್ಗ, ವಿದ್ಯಾರ್ಥಿ-ವಿದ್ಯಾರ್ಥಿನಿಯರು,ಶಿಕ್ಷರವೃಂದ,ಗಣ್ಯಮಾನ್ಯರು, ಸಾರ್ವಜನಿಕರು, ಉಪಸ್ಥಿತರಿದ್ದರು.

Related posts

ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬೊಮ್ಮಾಯಿ‌ಗೆ ಸನ್ಮಾನ, ಯಾಕೆ ಗೊತ್ತಾ?

eNEWS LAND Team

ಆಸ್ಪತ್ರೆಯಲ್ಲಿ ಬೆಂಕಿ ಅವಘಡ!!

eNEWS LAND Team

ಪೌರಕಾರ್ಮಿಕರಿಂದ hdmc ಆಯುಕ್ತರಿಗೆ ಸನ್ಮಾನ

eNEWS LAND Team