29 C
Hubli
ಸೆಪ್ಟೆಂಬರ್ 26, 2023
eNews Land
ಸಣ್ಣ ಸುದ್ದಿ

ಹುಬ್ಬಳ್ಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ  ಮಹಾಮಂಡಳದಿಂದ ವೃದ್ಧಾಶ್ರಮದಲ್ಲಿ ರಕ್ಷಾಬಂಧನ

ಇಎನ್ಎಲ್ ಹುಬ್ಬಳ್ಳಿ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ಆಶ್ರಯದಲ್ಲಿ ನವನಗರದ ಶ್ರೀಮೈತ್ರಿ ವೃದ್ಧಾಶ್ರಮದಲ್ಲಿ  ಸಂಭ್ರಮ ಸಡಗರದಿಂದ  ರಕ್ಷಾಬಂಧನ ಸಮಾರಂಭವು ಹಬ್ಬದ ವಾತಾವರಣದಿಂದ ಜರುಗಿತ್ತು .

               ಅತಿಥಿಯಾಗಿ ಆಗಮಿಸಿ ಸಮಾಜಸೇವಕ  ಅನಿಲ ಬೇವಿನಕಟ್ಟಿ ಮಾತನಾಡಿ ಈ ಪವಿತ್ರವಾದ ಹಬ್ಬವು ಸಹೋದರ–ಸಹೋದರಿಯರಲ್ಲಿ ಒಂದು ವಿಶಿಷ್ಟ ಬಾಂಧವ್ಯ ಇಮ್ಮಡಿಯಾಗುತ್ತದೆ ಈ ಸಂಭಂದ ಏಳೇಳು ಜನ್ಮದ ಜನ್ಮದ ಅನುಬಂಧವಾಗಿರುತ್ತದೆ ಎಂದು ನುಡಿದರು.

             ಅಧ್ಯಕ್ಷತೆ ವಹಿಸಿದ ರೂಪಾ ಅಂಗಡಿ ಇವರು ಮಾತನಾಡಿ ಈ ಹಬ್ಬವು ಸಹೋದರ–ಸಹೋದರಿಯರು ಒಂದಾಗಿ ಸೇರಿ ಹಬ್ಬ ಆಚರಣೆಯಿಂದ ಭಾಂದವ್ಯ ಬೇಸುಗೆ ಇಮ್ಮಡಿಯಾಗುತ್ತೆ ಎಂದು ನುಡಿದರು.

       ಆಶ್ರಮದಲ್ಲಿ ಇರುವಂತ ಎಲ್ಲ ವೃದ್ಧರಿಗೂ ರಾಖೀಯನ್ನು ಕಟ್ಟಿ ಆರತಿ ಬೆಳಗಿ ಸಿಹಿ ಹಂಚಿ ನಿಮ್ಮೊಂದಿಗೆ ನಾವು ಇದ್ದೇವೆ ನಾವೆಲ್ಲರೂ ಒಂದೇ ಪರಿವಾರದವರು ಎಂದು ಸಂತೋಷ ವಿನಿಮಯ ಮಾಡಿಕೊಳ್ಳಲಾಯಿತು ಮಹಾ ಮಂಡಳದ ಅಕ್ಕಮ್ಮ ಕಂಬಳಿ, ಅನಿತಾ ಜಡಿ, ಸಾಧನಾ ಪೂಜಾರ, ಸ್ಮೀತಾ ಸಂಕಣ್ಣನವರ, ರೇಖಾ ಆಪ್ಟೇ , ಸಂಗೀತಾ ಜಡಿ, ಎಸ್.ಎಸ್.ಕಮಡೋಳ್ಳಿಶಟ್ರು, ಚನ್ನಬಸಪ್ಪ ಧಾರವಾಡಶಟ್ರು ಹಾಗೂ ಅಮರೇಶ ಹಿಪ್ಪರಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

Related posts

ನೆರವಿಗೆ ಧಾವಿಸಿದ ಸಂಸದ ಪ್ರತಾಪ್ ಸಿಂಹ

eNEWS LAND Team

ಅಣ್ಣಿಗೇರಿಯಲ್ಲಿ ಕನ್ನಡ ಗೀತ ಗಾಯನ

eNEWS LAND Team

UPSC ಸಾಧಕ ಸಿದ್ಧಲಿಂಗಪ್ಪ ಪೂಜಾರಗೆ ಸನ್ಮಾನ

eNEWS LAND Team