27 C
Hubli
ಮಾರ್ಚ್ 28, 2023
eNews Land
ಸಣ್ಣ ಸುದ್ದಿ

ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳಿಂದ ಜ್ಞಾನದೇಗುಲದ ಕಾರ್ತಿಕ ದೀಪೋತ್ಸವ

Listen to this article

ಇಎನ್ಎಲ್ ಅಣ್ಣಿಗೇರಿ:  ಪಟ್ಟಣದ ತೋಂಟದಾರ್ಯ ಮಠದಲ್ಲಿ ಶುಕ್ರವಾರ ಗುದ್ನೇಶ್ವರ ಶ್ರೀಗಳ ಕತೃಗದ್ದುಗೆ ಪೂಜೆ ಸಲ್ಲಿಸಿ,

ಗುದ್ವೇಶ್ವರ ಮಠದ ಪ್ರಭುಲಿಂಗ ಶ್ರೀಗಳು ದೀಪ ಹಚ್ಚುವ ಮೂಲಕ ಕಾರ್ತಿಕ ದೀಪೋತ್ಸವ ಮಠದ ಸದ್ಭಕ್ತರೊಂದಿಗೆ ಆಚರಣೆ ಮಾಡಿದರು.

ಸಮೀಪದ ನೀಲಗುಂದ ಗ್ರಾಮದ ಗುದ್ನೇಶ್ವರ ಮಠದಲ್ಲಿ ಶನಿವಾರ ದಿವ್ಯಚೇತನ ಟ್ರಸ್ಟ್ ಆಯೋಜಿಸಿದ ಕಾರ್ತಿಕ ದೀಪೋತ್ಸವಕ್ಕೆ ಪ್ರಭುಲಿಂಗ ಶ್ರೀಗಳು ಮಠದ ಸದ್ಭಕ್ತರು,ದಿವ್ಯಚೇತನ ಶಾಲೆಯ ಮಕ್ಕಳೊಂದಿಗೆ, ಜ್ಞಾನದೇಗುಲದಲ್ಲಿ ದೀಪ ಹಚ್ಚುವ ಮೂಲಕ ಕಾರ್ತಿಕ ದೀಪೋತ್ಸವ ಆಚರಣೆ ಮಾಡಿದರು.

ಪ್ರಭುಲಿಂಗ ಶ್ರೀಗಳು ಆರ್ಶೀವಚನದಲ್ಲಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ರೂವಾರಿ ಗುರುವೃಂದದ ಜ್ಞಾನದೇಗುಲ ಬೆಳಕಿನ ಪ್ರಕಾಶ ಜಗತ್ತನ್ನೆ ಬೆಳಗುವಂತಾಗಬೇಕು. ಆ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳಿಂದ ಗುಡಿ-ಗುಂಡಾರಗಳಲ್ಲಿ ದೀಪೋತ್ಸವ ಸಾಮನ್ಯವಾಗಿ ಸಮಾಜದ ಎಲ್ಲಾ ಸದ್ಭಕ್ತರು ಮಾಡುತ್ತಾರೆ. ಆದರೆ ಜ್ಞಾನದೇಗುಲದಲ್ಲಿ ದೀಪ ಹಚ್ಚಿ ಕಾರ್ತಿಕ ದೀಪೋತ್ಸವ ದಿವ್ಯಚೇತನ ಶಾಲಾ ಮಕ್ಕಳು ಮಾಡುತ್ತಿರೋದು ವೆÊಶಿಷ್ಠಪೂರ್ಣವಾಗಿದೆ..ದಿವ್ಯಚೇತನ ಶಾಲಾ ಮಕ್ಕಳು ವಿಜ್ಞಾನ ಪರಿಕರಗಳನ್ನು ಬಳಿಸಿ ಪ್ರಾಯೋಜಿಸಲ್ಪಡುವ ವಿಜ್ಞಾನ ಪ್ರದರ್ಶನ ಜ್ಞಾನ ದೇಗುಲದ ಆಕರ್ಷಣೆ ಹೆಚ್ಚಿಸಿದೆ. ಅಂದ ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ಬಿತ್ತರಿಸಿ, ಸದ್ಭಕ್ತರಲ್ಲಿ ಸಂಗೀತದ ಭಕ್ತಿರಸದೌತಣ ನೀಡುವ ಮೂಲಕ ಕಾರ್ತಿಕ ದೀಪೋತ್ಸವಕ್ಕೆ ಮೆರಗು ತಂದಿರೋದು ಶ್ಲಾಘನೀಯ. ಎಂದು ನುಡಿದರು.

Related posts

ಗುರುವಂದನಾ ಕಾರ್ಯಕ್ರಮ

eNEWS LAND Team

ಅಣ್ಣಿಗೇರಿ: ಗಾಯಾಳು ರೈತ ಪರುಶರಾಮ ಅಣ್ಣಿಗೇರಿ: ಸಚಿವ ಮುನೇನಕೊಪ್ಪ ಸಾಂತ್ವಾನ

eNEWS LAND Team

ತ್ಯಾಗವೀರ ದಾನಿ ಲಿಂಗರಾಜ ದೇಸಾಯಿ ಜಯಂತಿ

eNEWS LAND Team