30 C
Hubli
ಡಿಸೆಂಬರ್ 1, 2022
eNews Land
ಸಣ್ಣ ಸುದ್ದಿ

ಗ್ರಾ.ಪಂ ದೇವಸ್ಥಾನ ಇದ್ದಹಾಗೆ: ಶಾಸಕಿ ಕುಸುಮಾವತಿ

Listen to this article

ಇಎನ್ಎಲ್ ಕುಂದಗೋಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಹಾಗೂ ಸರ್ಕಾರದ ಅನುದಾನದಡಿಯಲ್ಲಿ 40 ಲಕ್ಷ ರೂಪಾಯಿಗಳಲ್ಲಿ ನೂತನವಾಗಿ ನಿರ್ಮಿಸಿದ ತಾಲೂಕಿನ ಚಾಕಲಬ್ಬಿಯಲ್ಲಿ ಗ್ರಾಮ ಪಂಚಾಯತ್ ಕಟ್ಟಡವನ್ನು ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಉದ್ಘಾಟಿಸಿದರು.

ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ ಕುಸುಮಾವತಿ ಗ್ರಾಮ ಪಂಚಾಯತಗಳು ದೇವಸ್ಥಾನ ಇದ್ದಹಾಗೆ ಸರ್ಕಾರದಿಂದ ಗ್ರಾಮ ಪಂಚಾಯತಿಗಳಿಗೆ ಬರುವ ಯೋಜನೆಗಳನ್ನು ಅಲ್ಲಿಯ ಜನರಿಗೆ ಸಮರ್ಪಕವಾಗಿ ತಲುಪಿಸುವುದು ಒಂದು ಗ್ರಾಮ ಪಂಚಾಯಿತಿ ಅಧಿಕಾರಿಗಳ ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಕರ್ತವ್ಯವಾಗಿರಬೇಕು ಎಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಕಲ್ಯಾಣಪುರ ಮಠದ ಶ್ರೀ ಬಸಣ್ಣಜ್ಜನವರು ಮಾತನಾಡಿ ಬರದ್ವಾಡ, ಹೊಸಳ್ಳಿ, ಚಾಕಲಬ್ಬಿ ಈ ಮೂರು ಗ್ರಾಮಗಳಿಗೆ ಒಳಗೊಂಡಿರುವ ಈ ಗ್ರಾಮ ಪಂಚಾಯತಿಯು ಬರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯ ಪಥದಲ್ಲಿ ಸಾಗಿ ಒಂದು ಮಾದರಿ ಗ್ರಾಮಪಂಚಾಯಿತಿಯಾಗಿ ಬೆಳೆಯಲಿ ಎಂದು ಹಾರೈಸಿದರು.

     ಇದೇ ಸಂದರ್ಭದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಈರಣ್ಣ ಜಡಿ ಅವರು ಮಾತನಾಡಿ ಈ ಗ್ರಾಮ ಪಂಚಾಯತ್ ಕಟ್ಟಡ ಸಿ.ಎಸ್. ಶಿವಳ್ಳಿಯವರ ಶ್ರಮವಾಗಿದ್ದು. ಇಂದಿನ ದಿನಗಳಲ್ಲಿ ಒಂದು ಇಂಚು ಜಾಗವನ್ನು ಕೊಡಬೇಕಾದರೆ ವಿಚಾರಮಾಡುವ ಜನರಲ್ಲಿ ಗ್ರಾಮದ ಬುಳ್ಳಪ್ಪ ಫಕ್ಕಿರಪ್ಪ ಡೊಳ್ಳಿನ ಅವರು 5 ಗುಂಟೆ ಜಾಗವನ್ನು ಮೂರು ಗ್ರಾಮಗಳ ಅಭಿವೃದ್ಧಿಗೋಸ್ಕರ ದಾನಮಾಡಿದ್ದು ಹೆಮ್ಮೆಯ ವಿಷಯ ಎಂದರು.

     ಈ ಕಾರ್ಯಕ್ರಮದಲ್ಲಿ ಭೂದಾನಿಗಳಾದ ಚಾಕಲಬ್ಬಿ ಗ್ರಾಮದ ಬುಳ್ಳಪ್ಪ ಫಕೀರಪ್ಪ ಡೊಳ್ಳಿನ ಪತ್ನಿ ಯಲ್ಲವ್ವ ಡೊಳ್ಳಿನ ದಂಪತಿಗಳನ್ನು ಸನ್ಮಾನಿಸಲಾಯಿತು.

ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಹೇಶ ಕುರಿಯವರ, ಚಾಕಲಬ್ಬಿ ಗ್ರಾ.ಪಂ.ಪಿಡಿಓ ಎಫ್.ಎ. ನದಾಫ್, ಗ್ರಾ.ಪಂ. ಅಧ್ಯಕ್ಷೆ ಫಕ್ಕೀರವ್ವ ಹರಿಜನ್, ಉಪಾಧ್ಯಕ್ಷ ಫಕ್ಕೀರಪ್ಪ ಭಾಗಣ್ಣವರ, ಮಂಜು ಬಾರಕೇರ, ಪ್ರಕಾಶ್ ಗೌಡ ಪಾಟೀಲ್, ಎ.ಎಫ್.ನದಾಫ್, ಶಂಕರ್ ದೊಡ್ಡಮನಿ, ಚಾಕಲಬ್ಬಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಇನ್ನೂ ಅನೇಕರು ಪಾಲ್ಗೊಂಡಿದ್ದರು.

Related posts

ಅಣ್ಣಿಗೇರಿ ಪುರಸಭೆ ಚುನಾವಣೆ ಯಾವಾಗ ಏನೇನು ನೋಡಿ.

eNEWS LAND Team

ಕಿತ್ತೂರ ರಾಣಿ ಚೆನ್ನಮ್ಮನ ಆದರ್ಶ ಪ್ರಸಕ್ತ ಸಮಾಜಕ್ಕೆ ಮಾದರಿ

eNEWS LAND Team

ಹಳೇ ಹುಬ್ಬಳ್ಳಿ ವೀರಭದ್ರೇಶ್ವರ ಜಾತ್ರೆ

eNEWS LAND Team