eNews Land
ಸಣ್ಣ ಸುದ್ದಿ

ಫೆ.2 ನರೇಗಾ ದಿನ ಆಚರಿಸಿದ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ

Listen to this article

ಇಎನ್ಎಲ್ ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಕರ್ನಾಟಕ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಧಾರವಾಡ  ವತಿಯಿಂದ, ಫೆ.2ರಂದು ನರೇಗಾ ದಿನವನ್ನು ಆಚರಿಸಲಾಯಿತು. ಫೆ.2ರಂದು ನರೇಗಾ ಪ್ರಾರಂಭಸೂಚಕವಾಗಿ ದೇಶಾದ್ಯಂತ ನರೇಗಾ ದಿನವನ್ನು ಆಚರಿಸಲಾಗುತ್ತದೆ. ಕುಸುಗಲ್ ಗ್ರಾಮದಲ್ಲಿ ವಿಶಿಷ್ಟವಾಗಿ ಧಾರವಾಡ ಜಿಲ್ಲೆಯ ನರೇಗಾ ಸಿಬ್ಬಂದಿ ನರೇಗಾ ದಿನವನ್ನು ಆಚರಿಸಿದರು,

ಜಿಲ್ಲಾ ಪಂಚಾಯತ ಸಿಇಓ ಡಾ.ಸುಶೀಲಾ.ಬಿ ಮಾತನಾಡಿ ಮನರೇಗಾ ಯೋಜನೆ ಅಡಿ ಜಿಲ್ಲೆಯ ಪ್ರಗತಿ ಮತ್ತು ಯೋಜನೆಯ ಲಾಭಗಳನ್ನು ಗ್ರಾಮಸ್ಥರಿಗೆ ತಿಳಿಸಿದರು, ಉಪಕಾರ್ಯದರ್ಶಿ ರೇಖಾ ಡೋಳ್ಳಿನವರ, ಮುಖ್ಯ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ, ದೀಪಕ ಮಡಿವಾಳರ  ಗಂಗಾಧರ ಕಂದಕೂರ, ಮುಖ್ಯ ಲೆಕ್ಕಾಧಿಕಾರಿ ಲಲಿತಾ ಲಮಾಣಿ ಹುಬ್ಬಳ್ಳಿ ಬಿಇಓ ಶಕೀರಾಬಾನು  ಹಾಗೂ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು (ಗ್ರಾಮೀಣ ಉಸ್ತುವಾರಿ), ಕುಸುಗಲ್ ಗ್ರಾ.ಪಂ. ಅಧ್ಯಕ್ಷೆ ನೀಲವ್ವ ಡಾಲಾಯತರ, ಅಭಿಷೇಕ ಬೊಂಬರ್, ಉಪಾಧ್ಯಕ್ಷ, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಜರಿದ್ದರು. ಕಾರ್ಯಕ್ರಮದ ನಂತರ ಧಾರವಾಡ ಜಿಲ್ಲೆಯ ನರೇಗಾ ಸಿಬ್ಬಂದಿ ಕುಸುಗಲ್ ಗ್ರಾಮದಲ್ಲಿ 230 ತೆಂಗಿನ ಸಸಿಗಳನ್ನು ನೆಟ್ಟರು.

Related posts

ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ

eNEWS LAND Team

ಶಿಕ್ಷಕರ ಮತಕ್ಷೇತ್ರದ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಜಿ ಆಹ್ವಾನ

eNEWS LAND Team

ಸಮಗ್ರ ಕೃಷಿಯಿಂದ ಮಾತ್ರ ರೈತರಿಗೆ ಆರ್ಥಿಕ ಸಬಲತೆ ಸಾಧ್ಯ: ಗೀತಾ ಮರಲಿಂಗಣ್ಣವರ

eNEWS LAND Team