34 C
Hubli
ಮಾರ್ಚ್ 23, 2023
eNews Land
ಸಣ್ಣ ಸುದ್ದಿ

ವಿಧಾನ ಪರಿಷತ್ ಚುನಾವಣೆ ಬಹಿರಂಗ ಪ್ರಚಾರ ಅಂತ್ಯ

Listen to this article

ಇಎನ್ಎಲ್ ಧಾರವಾಡ  ಡಿ.07: ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆ-2021ರ ಬಹಿರಂಗ ಪ್ರಚಾರವನ್ನು ಇಂದು ಡಿಸೆಂಬರ 7 ರಂದು ಸಂಜೆ 4 ಗಂಟೆಗೆ ಮುಕ್ತಾಯಗೊಳಿಸಲು ಎಲ್ಲ ಅಭ್ಯರ್ಥಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ನಿತೇಶ್ ಕೆ.ಪಾಟೀಲ ಸೂಚಿಸಿದ್ದಾರೆ.

ಮತದಾನ ಪ್ರಕ್ರಿಯೆಯು ಡಿಸೆಂಬರ್ 10 ರಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಜರುಗಲಿದೆ. ಭಾರತ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಕೈಪಿಡಿ ಹಾಗೂ ಡಿಸೆಂಬರ್ 06ರ ನಿರ್ದೇಶನದನ್ವಯ ಮತದಾನ ಮುಕ್ತಾಯಗೊಳ್ಳುವ ಸಮಯದ 72 ಗಂಟೆ ಮುಂಚಿತವಾಗಿ ಚುನಾವಣಾ ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಬೇಕು. ಅದರ ಪ್ರಕಾರ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ಚುನಾವಣಾ ಬಹಿರಂಗ ಪ್ರಚಾರಗಳನ್ನು ಡಿಸೆಂಬರ್ 07 ರ ಸಂಜೆ 04 ಗಂಟೆಗೆ ಮುಕ್ತಾಗೊಳಿಸಲು ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ನಿಗದಿತ ಸಮಯದ ನಂತರ ಬಹಿರಂಗ ಪ್ರಚಾರ ಕೈಗೊಳ್ಳಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ವಿಶ್ವ ಪ್ರೀಮಿಯರ್ 10K RUN ಗೆ ಚಾಲನೆ ನೀಡಿದ: ಸಿಎಂ ಬೊಮ್ಮಾಯಿ

eNEWS LAND Team

ಹಳೇ ಹುಬ್ಬಳ್ಳಿ ವೀರಭದ್ರೇಶ್ವರ ಜಾತ್ರೆ

eNEWS LAND Team

ಗ್ರಾ.ಪಂ ದೇವಸ್ಥಾನ ಇದ್ದಹಾಗೆ: ಶಾಸಕಿ ಕುಸುಮಾವತಿ

eNEWS LAND Team