22 C
Hubli
ಡಿಸೆಂಬರ್ 7, 2023
eNews Land
ಸಣ್ಣ ಸುದ್ದಿ

ಅಣ್ಣಿಗೇರಿ: ಮಜ್ಜಿಗುಡ್ಡ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

ಇಎನ್ಎಲ್ ಅಣ್ಣಿಗೇರಿ: ಭೂಮಂಡಲದಲ್ಲಿ ಸೂರ್ಯ ಚಂದ್ರ ಇರುವತನಕ ಮಜ್ಜಿಗುಡ್ಡ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಜರುಗುವಂತಾಗಲಿ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾರೈಸಿದರು. ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಅಮವಾಸ್ಯೆ ನಿಮಿತ್ಯ ಬಸವೇಶ್ವರ ಟ್ರಸ್ಟ್ ಕಮಿಟಿ ಆಯೋಜಿಸಿದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಸಮಾಜದ ಕುಲದೈವರಾದ ಬಸವಣ್ಣ ಸರ್ವರ ಬಾಳು ಬೆಳಗಿದ್ದಾನೆ. ಸದ್ಭಕ್ತರ ಕಷ್ಟಕಾರ್ಪಣ್ಯಗಳನ್ನು ತೊಡೆದು, ತನು-ಮನಗಳಲ್ಲಿ ಭಕ್ತಿ ಧರ್ಮಜ್ಯೋತಿ ಬೆಳಗಿಸಿದ ಬಸವಣ್ಣನ ಮಹಿಮೆ ಅಪಾರ, ಮಜ್ಜಿಗುಡ್ಡದ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ ಲಕ್ಷ ದೀಪೋತ್ಸವದೊಂದಿಗೆ ಬೆಳಗುತ್ತಿರೋದು ಶ್ಲಾಘನೀಯವೆಂದು ಹೇಳಿದರು.
ಸಾನಿಧ್ಯವನ್ನು ತುಪ್ಪದಕುರಹಟ್ಟಿ ಭೂಸನೂರುಮಠದ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ವಹಿಸಿದ್ದರು. ಬಿ.ಎಂ. ಕೆಂಬಾವಿ ಅಧ್ಯಕ್ಷತೆಯನ್ನು ವಹಿಸಿದ್ದರು.ಸಾಧನೆಗೈದ ಮಹನೀಯರಿಗೆ,ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಜನಪ್ರತಿನಿಧಿಗಳಿಗೆ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಭಕ್ತಿಸೇವೆಯನ್ನು ಗಿರಿಜಾ ಬಸವಣ್ಣೆಪ್ಪ ಅಕ್ಕಿ, ಬಸವಣ್ಣೆವ್ವ ವೀರಪ್ಪ ಅಂಗಡಿ ಹಾಗೂ ಅನ್ನದಾಸೋಹದ ಭಕ್ತ ಸೇವೆಯನ್ನು ಬಸವರಾಜ ಕೆಂಭಾವಿ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಜಯಕುಮಾರ ಗುಡ್ಡದ, ಬಸೆಟ್ಟೆಪ್ಪ ಅಂಗಡಿ, ಬಸವರಾಜ ಶೆಟ್ಟಿಕೇರಿ, ಕಾಶೀಮಸಾಬ ದಾದಪ್ಪನವರ, ನಿಂಗಪ್ಪ ಗುಡಿಸಾಗರ, ವಿರೇಶ ಕುಬಸದ,ಯಲ್ಲಪ್ಪ ಅಕ್ಕಿ, ಶಿವಕುಮಾರ ರಾಮನಕೊಪ್ಪ, ಕುಮಾರ ಮಾದರ, ಮಾಲತಿ ಶೆಟ್ಟಿಕೇರಿ, ಪ್ರಕಾಶ ಅಂಗಡಿ, ಶಿವಯೋಗಿ ಸುರಕೋಡ, ಮಹೇಶ ದೇಸಾಯಿ, ಹೊಳೆಯಪ್ಪ ಯಾದವಾಡ,ಶಿವಣ್ಣ ಹುಬ್ಬಳ್ಳಿ,ಗ್ರಾ.ಪಂ ಸದಸ್ಯರು, ಗ್ರಾಮಸ್ಥರು. ಸುತ್ತಮುತ್ತಲಿನ ಗ್ರಾಮಗಳಿಂದ ಅಗಮಿಸಿದ ಸದ್ಭಕ್ತರು ಉಪಸ್ಥಿತರಿದ್ದರು.ನಂತರ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.

Related posts

ಮಾತೃಭಾಷೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು: ಎಂ.ಆಯ್.ಮುಜಾವರ

eNEWS LAND Team

ಹುಬ್ಬಳ್ಳಿ-ಬೆಂಗಳೂರು ನಡುವಿನ ವಿಷೇಶ ರೈಲುಗಳ ಸೇವೆ ವಿಸ್ತರಣೆ

eNewsLand Team

UPSC ಸಾಧಕ ಸಿದ್ಧಲಿಂಗಪ್ಪ ಪೂಜಾರಗೆ ಸನ್ಮಾನ

eNEWS LAND Team