ಇಎನ್ಎಲ್ ಕಲಘಟಗಿ:
ಪಟ್ಟಣದ ಹನ್ನೆರಡು ಎತ್ತಿನಮಠದಲ್ಲಿ ಜ.03ರಂದು ಮುಂಜಾನೆ 11:30ಕ್ಕೆ ಕರ್ನಾಟಕ ಪ್ರದೇಶ ಕುರುಬ ಸಂಘದ ಚುನಾವಣೆ ನಡೆಸುವ ಬಗ್ಗೆ ಸಭೆ ಕರೆಯಲಾಗಿದೆ.
ಈ ಸಭೆಯ ಅಧ್ಯಕ್ಷತೆ ಶಿವಾಜಿ ವಾಗ್ಮೊಡೆ ವಹಿಸಲಿದ್ದು, ಕರ್ನಾಟಕ ಪ್ರದೇಶ ಕುರುಬರ ಸಂಘದ ಧಾರವಾಡ ಜಿಲ್ಲಾ ಚುನಾವಣೆ ನಡೆಸುವ ಉಸ್ತುವಾರಿಯಾಗಿ ನೇಮಕವಾಗಿರುವ ಬಸವರಾಜ ಮಲಕಾರಿ ಮತ್ತು ಹೆಚ್.ಎಫ್. ಮುದಕಣ್ಣವರ. ಸಮಾಜದ ಮುಖಂಡ ಹುಬ್ಬಳ್ಳಿಯ ಶಿವಾನಂದ ಮುತ್ತಣ್ಣವರ ಆಗಮಿಸಲಿದ್ದು ತಾಲೂಕಿನ ಕುರುಬ ಸಮಾಜದ ಹಿರಿಯರು ಯುವಕರು ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೇಳಿದ್ದಾರೆ. ಕುರುಬ ಸಮಾಜದ ಮುಖಂಡ ಹಾಗೂ ಕೆಡಿಪಿ ನಿರ್ದೇಶಕ ಯಲ್ಲಪ್ಪ ಕುಂದಗೋಳ ಪ್ರಕಟಣೆಗೆ ತಿಳಿಸಿದ್ದಾರೆ.