28 C
Hubli
ಸೆಪ್ಟೆಂಬರ್ 21, 2023
eNews Land
ಸಣ್ಣ ಸುದ್ದಿ

ಮನೆ ಮನೆಗೆ ಗಂಗೆ ಉತ್ತಮ ಯೋಜನೆ: ಸಿ.ಎಂ.ನಿಂಬಣ್ಣವರ

ಇಎನ್ಎಲ್ ಕಲಘಟಗಿ: ಮನೆ-ಮನೆಗೆ ಗಂಗೆ ಇದೊಂದು ಉತ್ತಮ ಯೋಜನೆಯಾಗಿದೆ. ಶುದ್ಧ ನೀರು ಇದ್ದರೆ ಮಾತ್ರ ಮನುಷ್ಯ ಆರೊಗ್ಯವಾಗಿ ಬದುಕಬಲ್ಲ. ಆದ್ದರಿಂದ ತಾವೆಲ್ಲರೂ ಉತ್ತಮ ರೀತಿಯಿಂದ ಸಹಕರಿಸಿ ಯೋಜನೆಯನ್ನು ಯಶಸ್ವಿಗೊಳಿಸಿರಿ ಎಂದರು.

ತಾಲೂಕಿನ ಬೇಗೂರ ಗ್ರಾಮದಲ್ಲಿ ಜೆ.ಜೆ.ಎಮ್. ಯೋಜನೆಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿದ್ದು, ಒಟ್ಟಾರೆಯಾಗಿ 8 ಕಿ.ಮೀ.ಉದ್ದದ ಪೈಪ್‌ಲೈನ್ ಅಳವಡಿಕೆಯಾಗುತ್ತದೆ. ಈ ಗ್ರಾಮಕ್ಕೆ ಅಂದಾಜು ರೂ.1ಕೋಟಿ ಸರ್ಕಾರವು ವೆಚ್ಚ ಮಾಡುತ್ತಿದೆ. ಕೆಲವೇ ಜಿಲ್ಲೆಗಳಲ್ಲಿ ಧಾರವಾಡ ಜಿಲ್ಲೆಯು ಆಯ್ಕೆಯಾಗಿದ್ದು ನಮ್ಮೆಲ್ಲರ ಭಾಗ್ಯ. ಆದ್ದರಿಂದ ಈ ಯೋಜನೆಯು ಸಂಪೂರ್ಣ ತಾಲೂಕಿನಾದ್ಯಂತ ಅನುಷ್ಠಾನವಾಗುತ್ತಿದ್ದು ಎಲ್ಲರೂ ಸಹಕರಿಸಿರಿ ಎಂದರು. ಈಗಾಗಲೇ ವಿವಿಧ ಕಾಮಗಾರಿಗಳಿಗೆ ರೂ.100ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ತಮ್ಮೆಲ್ಲರ ಸಹಕಾರದಿಂದ ತಾಲೂಕನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ., ಪಿಡಿಓ ಶಂಕರ ಗೌಳೇರ್, ಪರಶುರಾಮ ರಜಪೂತ, ಚನ್ನಪ್ಪ ನವಣಿ, ಶಿವಾನಂದ ಧನಿಗೊಂಡ, ನೂತನ ಸದಸ್ಯ ನಿಂಗಪ್ಪ ಸುಳ್ಳದ, ಹನಮಂತಪ್ಪ ಗೌರಿ, ಶಂಕ್ರಪ್ಪ ಬೋಳಣ್ಣವರ, ರೇಣುಕಾ ಬಿಸರಳ್ಳಿ, ಚಂಬವ್ವ ಮುಕ್ಕಲಕಟ್ಟಿ, ರೇಣುಕಾ ಮುನವಳ್ಳಿ, ಶಂಕ್ರವ್ವ ಬಡಿಗೇರ, ದ್ಯಾಮವ್ವ ಬಡಿಗೇರ ಹಾಗೂ ಗ್ರಾಮಸ್ಥರು ಇದ್ದರು.

 

Related posts

ಐ.ಟಿ.ಐ: ಅಪ್ರೆಂಟಿಷಿಪ್ ತರಬೇತಿಗೆ ಅರ್ಜಿ

eNEWS LAND Team

ಹುಬ್ಬಳ್ಳಿ-ಬೆಂಗಳೂರು ನಡುವಿನ ವಿಷೇಶ ರೈಲುಗಳ ಸೇವೆ ವಿಸ್ತರಣೆ

eNewsLand Team

ಅಣ್ಣಿಗೇರಿ ಅಮೃತೇಶ್ವರ ಕಾಲೇಜ್ ಸೀಲ್ ಡೌನ್

eNEWS LAND Team