22 C
Hubli
ಅಕ್ಟೋಬರ್ 1, 2023
eNews Land
ಸಣ್ಣ ಸುದ್ದಿ

ಅಣ್ಣಿಗೇರಿಯಲ್ಲಿ ಗಾಣಿಗ ಸಂಘಕ್ಕೆ ಚಾಲನೆ

ಅಣ್ಣಿಗೇರಿ : ಅಖಿಲ ಭಾರತ ಗಾಣಿಗ ಸಂಘದ ನೂತನ ಅಣ್ಣಿಗೇರಿ ತಾಲೂಕ ಗಾಣಿಗ ಸಂಘದ ಘಟಕ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ, ಗಾಣ ದೇವತೆಗೆ ಪುಷ್ಟ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

            ಗಾಣಿಗ ಸಂಘಧ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ಮಾತನಾಡಿ, ಗಾಣಿಗ ಸಮುದಾಯ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಸೇವೆಗೈಯುತ್ತಿರೋದು ಅವಿಸ್ಮರಣೀಯವಾಗಿದ್ದು, ಒಗ್ಗಟ್ಟಿನಿಂದ ಎಲ್ಲಾ ಸಮುದಾಯ ಸೇವೆ ಮಾಡುತ್ತಿರೋದು ಶ್ಲಾಘನೀಯ.ತಾಲೂಕಿನ ಅಧ್ಯಕ್ಷರು ನೂತನ ಪದಾಧಿಕಾರಿಗಳು ಸಂಘಟನೆ ಹೆಚ್ಚಿಸಿ, ಸಮಾಜ, ಸಮುದಾಯದ ಸಮಗ್ರ ಅಭಿವೃದ್ದಿಯಲ್ಲಿ ಪ್ರೇರಣೆಯಾಗಬೇಕೆಂದರು. ಶಿಕ್ಷಣ ಸಂಸ್ಥೆ, ಜ್ಯೋತಿ ಕ್ರೇಡಿಟ್ ಸೊಸೈಯಿಟಿ ತೆರೆದು, ಬಡಕುಟುಂಬ ವರ್ಗದ ಸಮಾಜಭಾಂದವರಿಗೆ ಆರ್ಥಿಕ ಸಹಾಯ ಸಹಕಾರ ನೀಡಿ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕೆಂದರು. ಗಾಣಿಗ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ, ಸೌಲಭ್ಯ ಕಲ್ಪಿಸಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ತಾಲೂಕಿನ ಅಧ್ಯಕ್ಷರಾಗಿ ನಾಗಪ್ಪ ಗಾಣಿಗೇರ, ಉಪಾಧ್ಯಕ್ಷರಾಗಿ ಕುಮಾರಗೌಡ ಗದ್ದಿಗೌಡ್ರ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಚವಡಿ, ತಾಲೂಕಿನ ಯುವ ಘಟಕದ ಅಧ್ಯಕ್ಷರಾಗಿ ಜಗದೀಶ ಗಾಣಿಗೇರ, ಉಪಾಧ್ಯಕ್ಷರಾಗಿ ದೊಡ್ಡಪಕ್ಕೀರಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಚವಡಿ ಅವರನ್ನು ನೇಮಕ ಮಾಡಿ, ಅದೇಶ ಪ್ರತಿ ನೀಡಿ, ರಾಜ್ಯಾಧ್ಯಕ್ಷ ಗುರುಣ್ಣ ಗೋಡಿ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಅಣ್ಣಿಗೇರಿ ತಾಲೂಕಿನ ಗಾಣಿಗ ಸಮಾಜ ಬಾಂಧವರು. ಗಣ್ಯಮಾನ್ಯರು ಉಪಸ್ಥಿತರಿದ್ದರು.

Related posts

ಭದ್ರಾಪೂರ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ

eNewsLand Team

ವಿಧಾನ ಪರಿಷತ್ ಚುನಾವಣೆ ಬಹಿರಂಗ ಪ್ರಚಾರ ಅಂತ್ಯ

eNEWS LAND Team

ಮಾ.30 ರಂದು ವಧಾಲಯ, ಮಾಂಸದ ಅಂಗಡಿ ಬಂದ್

eNewsLand Team