ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ದಾಸೋಹ ಮಠದ ಟ್ರಸ್ಟ್ ಕಮಿಟಿ ಸದಸ್ಯರು ವರ್ತನೆಯಿಂದ ಬೇಸತ್ತು ಕಳೆದ ಆರು ತಿಂಗಳು ಮಠ ತೊರೆದು ಪೀಠಾಧಿಪತಿ ಶಿವಕುಮಾರ ಶ್ರೀಗಳು ಹೋಗಿದ್ದರು. ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ತಂಗಿದ್ದ ದಾಸೋಹ ಮಠದ ಪೀಠಾಧಿಪತಿ ಶಿವಕುಮಾರ ಶ್ರೀಗಳನ್ನು ಪಟ್ಟಣದ ಸದ್ಭಕ್ತರು ಹಾಗೂ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಸದಸ್ಯರು ಶ್ರೀಗಳವರ ಮನವೊಲಿಸಿಲು ಯಶಸ್ವಿ ಯಾಗಿದ್ದಾರೆ. ಇಂದು ಪಟ್ಟಣದ ದಾಸೋಹ ಮಠಕ್ಕೆ ಭಕ್ತಿ-ಶ್ರದ್ಧೆಯಿಂದ ಭವ್ಯ ಮೆರವಣಿಗೆಯ ಮೂಲಕ ಭಕ್ತ ಸಮೂಹ ಅವರನ್ನು ಸ್ವಾಗತಿಸಿ ಕರೆತಂದರು.