37 C
Hubli
ಮೇ 10, 2024
eNews Land
ಸಣ್ಣ ಸುದ್ದಿ

ಮಾತೃಭಾಷೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು: ಎಂ.ಆಯ್.ಮುಜಾವರ

ಇಎನ್‌ಎಲ್ ಅಣ್ಣಿಗೇರಿ: ಮಾತೃಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದರಿಂದ ಯಶಸ್ಸುಗಳಿಸಲು ಸಾಧ್ಯ. ಸರಿಯಾದ ರೀತಿಯಲ್ಲಿ ಅಧ್ಯಾಯನ ತರಬೇತಿ ಪಡೆಯುವುದು ಅವಶ್ಯವೆಂದು ಧಾರವಾಡ ಸ್ಪರ್ಧಾವಿಕಾಸ ಅಕಾಡೆಮಿ ಸಂಸ್ಥಾಪಕ ಎಂ.ಆಯ್.ಮುಜಾವರ ಹೇಳಿದರು

ಪಟ್ಟಣದ ಎಂ.ಬಿ.ಹಳ್ಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಡಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಹೇಗೆ ಎದುರಿಸಬೇಕೆಂಬ ಕುರಿತು ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳು ಜರುಗುತ್ತಿರೋದು ನಮಗೆ ವರದಾನವಾಗಿದೆ.ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆಗಳನ್ನು ಪಡೆದು ಅಭ್ಯರ್ಥಿಗಳು ಇಂದು ಹೊರಹೊಮ್ಮುತ್ತಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಮೋತಿಲಾಲ್ ರಾಠೋಡ ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಮೈಗೂಡಿಸಿಕೊಂಡು ಪ್ರತಿಯೊಂದು ವಿಷಯಗಳನ್ನು ಕಷ್ಟುಪಟ್ಟು ಕಲಿಯುವುದಕ್ಕಿಂತ ಇಷ್ಟ ಪಟ್ಟು ಕಲಿಯಬೇಕೆಂದರು.
ಪ್ರಾಧ್ಯಾಪಕ ಡಾ.ಎಪ್.ಬಿ.ಆನಿ ಮಾತನಾಡಿ ಸ್ಪರ್ಧಾತ್ಮಕ ತರಬೇತಿ ಕಾರ್ಯಗಾರಗಳ ಸದ್ಭಳಿಕೆ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಅಣ್ಣಪ್ಪ ಬಿ.ರೊಟ್ಟಿಗವಾಡ ಪ್ರಾಸ್ತವಿಕವಾಗಿ ಮಾತನಾಡಿದರು. ಧಾರವಾಢ ಸ್ಪರ್ಧಾವಿಕಾಸ ಕರೀಯರ್ ಅಕಾಡೆಮಿ ವ್ಯವಸ್ಥಾಪಕ ಎಂ.ಎ.ಖಾನ, ಕಾಲೇಜಿನ ಅಧ್ಯಾಪಕರ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಉಪಸ್ಥಿತರಿದ್ದರು. ಡಾ.ಸುನಂದಾ ಹಾಡಕರ ಸ್ವಾಗತಿಸಿದರು. ರೇಣಕಾ ಹಬ್ಬಣ್ಣವರ ನಿರೂಪಿಸಿದರು. ಡಾ.ಕಿರಣಕುಮಾರ ರಾಯರ ವಂದಿಸಿದರು.

Related posts

ಅಣ್ಣಿಗೇರಿ ಗಾಣಿಗ ಸಮುದಾಯ ಟ್ರಸ್ಟ್ ಭೂಮಿಪೂಜೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ: 21ಲಕ್ಷ ಭರವಸೆ

eNEWS LAND Team

ಸಾಹಿತಿ ಅಮೃತೇಶ್ವರ ತಂಡರಗೆ ಮಕ್ಕಳ ಮಾಣಿಕ್ಯ ಪ್ರಶಸ್ತಿ

eNEWS LAND Team

ಹುಬ್ಬಳ್ಳಿ ನಗರ ದಿನಪತ್ರಿಕೆ ವಿತರಕ ವಿನಾಯಕ ಚಿಲ್ಲಾಳ ನಿಧನ

eNEWS LAND Team