ಇಎನ್ಎಲ್ ಹುಬ್ಬಳ್ಳಿ:
ಉಣಕಲ್ ಕೆರೆಯನ್ನು ಶ್ರೀ ಚನ್ನಬಸವ ಸಾಗರವೆಂದು ನಾಮಕರಣ ಮಾಡಿ ಅಲ್ಲಿ ಬೃಹತ್ತಾದ ಶ್ರೀ ಚನ್ನಬಸವೇಶ್ವರ ಮೂರ್ತಿ ಸ್ಥಾಪಿಸಬೇಕು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಎದುರುಗಡೆ ಇರುವ ಶ್ರೀ ವಿವೇಕಾನಂದರ ಮೂರ್ತಿ ತೆರವುಗೊಳಿಸಿ ರೈಲ್ವೆ ನಿಲ್ದಾಣ ಹೆಸರಿನಂತೆ ಬೃಹತ್ತಾದ ಶ್ರೀ ಸಿದ್ದಾರೂಢರ ಮೂರ್ತಿಯನ್ನು ಸ್ಥಾಪಿಸಬೇಕೆಂದು ಉತ್ತರ ಜನಶಕ್ತಿ ಸೇನಾ ಪಕ್ಷ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್.ಎಸ್.ಶಂಕರಣ್ಣ ಮಾತನಾಡಿ, ಇಲ್ಲಿನ ಸಂತರನ್ನು ಜನಮನದಿಂದ ಮರೆಮಾಚಿ ಉತ್ತರ ಭಾರತದ ಹಿರಿಯರನ್ನು ಸ್ಥಾಪಿಸುವ ಹುನ್ನಾರ ಸರ್ಕಾರದ್ದು.
ಕೂಡಲೇ ಸ್ಥಳೀಯ ಜನರ ಭಾವನೆಗಳಿಗೆ ಗೌರವ ಕೊಟ್ಟು ಸ್ಟೇಶನ್ ರೋಡ್ ನಲ್ಲಿ ಬೃಹತ್ತಾದ ಸರದಾರ ಮೆಹಬೂಬ್ ಅಲಿಖಾನ ರಸ್ತೆಯ ನಾಮಫಲಕ ಅಳವಡಿಸಬೇಕು. ಹೊಸೂರು ಸರ್ಕಲ್ ಅನ್ನು ಈಗಾಗಲೇ ಸಂಗೊಳ್ಳಿ ರಾಯಣ್ಣ ಸರ್ಕಲ್ ಎಂದು ನಾಮಫಲಕ ಇಟ್ಟಿದ್ದು ಅಲ್ಲಿ ಬೃಹತ್ತಾದ ವೀರ ಸಂಗೊಳ್ಳಿ ರಾಯಣ್ಣ ನ ಮೂರ್ತಿ ಯನ್ನು ಸ್ಥಾಪಿಸಬೇಕು ಎಂದರು.
ಪ್ರೊ.ಎಸ್.ಎನ್.ಬಡಿಗೇರ, ಝೇಡ್, ಎನ್. ಮುಲ್ಲಾ ಇದ್ದರು.