25 C
Hubli
ಆಗಷ್ಟ್ 15, 2022
eNews Land
ಸಣ್ಣ ಸುದ್ದಿ

ಸಿಎ ಪಾಸಾದ ತುಮರಿಕೊಪ್ಪ ಪ್ರತಿಭೆ: ಕ್ಲೇವನ್ ಡಯಾಸ್

Listen to this article

ಇಎನ್ಎಲ್ ಕಲಘಟಗಿ: ತಾಲೂಕಿನ ತುಮರಿಕೊಪ್ಪ ಗ್ರಾಮದ ಕ್ಲೇವನ್ ಡಯಾಸ್ ಮೇ ತಿಂಗಳಿನಲ್ಲಿ ನಡೆದ ಚಾರ್ಟಡ್ ಅಕೌಂಟ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ತುಮರಿಕೊಪ್ಪ ಗ್ರಾಮದ ಸಂತ ಝೇವಿಯರ‍್ಸ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ್ದಾರೆ. ಬೆಂಗಳೂರಿನ ಕ್ರೈಸ್ತ ಯುನಿವರ್ಸಿಟಿಯಲ್ಲಿ ಪಿಯುಸಿ ಹಾಗೂ ಬಿಕಾಂ ಪದವಿಯನ್ನು ಪಡೆದಿದ್ದಾರೆ. ನಂಜುoಡ ಆಂಡ್ ಕಂ. ಸಂಸ್ಥೆ ಸಿಎ ನಂಜುoಡರವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ತುಮರಿಕೊಪ್ಪ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಎ.ಜಿ.ಡಯಾಸ ಹಾಗೂ ಆಲೀಸ್ ಇವರ ಮಗನಾಗಿದ್ದು ತುಮರಿಕೊಪ್ಪ ಶಾಲೆಯ ಎಲ್ಲ ಶಿಕ್ಷಕ ವೃಂದ, ಗ್ರಾಮಸ್ಥರು ಹಾಗೂ ತಾಲೂಕಿನ ಜನ ಹರ್ಷ ವ್ಯಕ್ತ ಪಡಿಸಿದ್ದಾರೆ.

Related posts

ಕಣವಿಹೊನ್ನಾಪೂರ: ಸದ್ಗುರು ಶ್ರೀ ಸಿದ್ಧಾರೂಢರ 186ನೇ ಜಯಂತಿ ಜಾತ್ರಾ ಮಹೋತ್ಸವ ಹಾಗೂ 16ನೇ ವಾರ್ಷಿಕೋತ್ಸವ ಸಮಾರಂಭ

eNewsLand Team

ಸೈಬರ್ ಸುರಕ್ಷಿತ ಕರ್ನಾಟಕ’ ಅಭಿಯಾನಕ್ಕೆ ಚಾಲನೆ

eNewsLand Team

21ರಂದು ಡಾ.ಗಂಗೂಬಾಯಿ ಹಾನಗಲ್ ಪುಣ್ಯಸ್ಮರಣೆ ಸಂಗೀತೋತ್ಸವ

eNewsLand Team